40, 50 ಅಲ್ಲ.. ವಯನಾಡ್‌ನಲ್ಲಿ ಸಾವಿನ ಸಂಖ್ಯೆ ಭಾರೀ ಏರಿಕೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಹುಲ್ ಗಾಂಧಿ

author-image
admin
Updated On
40, 50 ಅಲ್ಲ.. ವಯನಾಡ್‌ನಲ್ಲಿ ಸಾವಿನ ಸಂಖ್ಯೆ ಭಾರೀ ಏರಿಕೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಹುಲ್ ಗಾಂಧಿ
Advertisment
  • ವಯನಾಡ್‌ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಭಾರೀ ಏರಿಕೆ
  • ಕೇರಳದ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದ ರಾಹುಲ್ ಗಾಂಧಿ
  • ಕ್ಷಣ, ಕ್ಷಣಕ್ಕೂ ಪ್ರಕೃತಿ ವಿಕೋಪದ ಕರಾಳ ಮುಖ ಅನಾವರಣ

ಕೇರಳ ಮತ್ತೊಂದು ಭಯಾನಕ ಭೂಕುಸಿತಕ್ಕೆ ತುತ್ತಾಗಿದೆ. ವಯನಾಡ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೂಕುಸಿತ ನೂರಾರು ಜನರನ್ನು ಬಲಿ ಪಡೆದಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯ ಚುರುಕಾಗಿದ್ದು, ಕ್ಷಣ ಕ್ಷಣಕ್ಕೂ ಪ್ರಕೃತಿ ವಿಕೋಪದ ಕರಾಳ ಮುಖ ಅನಾವರಣ ಆಗುತ್ತಿದೆ. ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆ ಆಗುತ್ತಲೇ ಇದೆ.

ಇದನ್ನೂ ಓದಿ: ಕೇರಳದಲ್ಲಿ ಮಹಾ ದುರಂತ.. 250 ಕುಟುಂಬಗಳು ಕಣ್ಮರೆ ಶಂಕೆ.. ಸಾವಿನ ದವಡೆಯಲ್ಲಿ ಸಿಕ್ಕಿರುವ ಜನರ ಕತೆ ಭಯಾನಕ..

publive-image

ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಯನಾಡ್ ಭೂಕುಸಿತದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇಂದು ಮುಂಜಾನೆ ಭಯಾನಕ ಭೂಕುಸಿತಕ್ಕೆ ವಯನಾಡ್‌ ಸಾಕ್ಷಿಯಾಗಿದೆ. ಈ ದುರಂತದಲ್ಲಿ 70ಕ್ಕೂ ಹೆಚ್ಚು ಸಾವನ್ನಪ್ಪಿದ್ದಾರೆ ಅನ್ನೋ ಮೂಲಕ ಬೆಚ್ಚಿ ಬೀಳೋ ಮಾಹಿತಿಯನ್ನು ರಾಹುಲ್ ಗಾಂಧಿ ಅವರು ಬಹಿರಂಗಪಡಿಸಿದ್ದಾರೆ. ಕೇಂದ್ರ ಸರ್ಕಾರ ಈ ಕೂಡಲೇ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣಾ ಸಾಧ್ಯವಾದಷ್ಟು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕೇರಳದಲ್ಲಿ SDRF, NDRF, ಸೇನಾ ಸಿಬ್ಬಂದಿ ಅಪಾಯದಲ್ಲಿ ಸಿಲುಕಿರುವವರ ರಕ್ಷಿಸಲು ಮುಂದಾಗಿದೆ. ಸದ್ಯದ ಮಾಹಿತಿ ಪ್ರಕಾರ 50ಕ್ಕೂ ಹೆಚ್ಚು ಸಾವನ್ನಪ್ಪಿದ್ದಾರೆ. 250ಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ ಎನ್ನಲಾಗಿತ್ತು. ಆದರೆ ಕೇರಳದ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ರಾಹುಲ್ ಗಾಂಧಿ ಅವರು ವಯನಾಡ್ ಭೂಕುಸಿತದಲ್ಲಿ 70 ಮಂದಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಬಹಿರಂಗಪಡಿಸಿದ್ದಾರೆ.


">July 30, 2024

ವಯನಾಡ್ ಭೂಕುಸಿತದ ಸುದ್ದಿ ತಿಳಿಯುತ್ತಿದ್ದಂತೆ ಸಂಸದ ರಾಹುಲ್ ಗಾಂಧಿ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆಗೆ ಮಾತನಾಡಿದ್ದಾರೆ. ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆಗೂ ಮಾತನಾಡಿದ್ದಾರೆ. ಈ ಸಂದರ್ಭಧಲ್ಲಿ ನಾವು ಜೊತೆಯಾಗಿ ಕೆಲಸ ಮಾಡಿ ಹೆಚ್ಚಿನ ಜನರ ಜೀವ ಉಳಿಸಬೇಕು. ಹೀಗಾಗಿ ರಾಜನಾಥ್ ಸಿಂಗ್ ಎಲ್ಲ ನೆರವು ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..! 

ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇಬ್ಬರೂ ವಯನಾಡ್‌ಗೆ ಭೇಟಿ ನೀಡಲು ಮುಂದಾಗಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment