/newsfirstlive-kannada/media/post_attachments/wp-content/uploads/2025/05/Pakistan.jpg)
26 ಅಮಾಯಕರ ಜೀವ ತೆಗೆದ ಉಗ್ರರ ವಿರುದ್ಧ ಪ್ರತೀಕಾರದ ಕೂಗು ಜೋರಾಗಿದೆ. ಈ ದಾಳಿಯನ್ನು ಅನೇಕ ದೇಶಗಳು ಖಂಡಿಸಿವೆ. ಹಲವು ದೇಶಗಳಲ್ಲಿ ಪ್ರತಿಭಟನೆಗಳೂ ನಡೆದಿವೆ. ಇದೇ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ವಿಚಾರದ ಬಗ್ಗೆಯೂ ಅನೇಕರು ಹೇಳಿಕೆಗಳನ್ನು ನೀಡ್ತಿದ್ದಾರೆ. ಅದಕ್ಕೆ ಕಾರಣ ಭಯೋತ್ಪಾದಕರು ದಾಳಿ ವೇಳೆ ಧರ್ಮ ಯಾವುದು ಅಂತಾ ಕೇಳಿ ಶೂಟ್ ಮಾಡಿರೋದು.
ಈ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರೋದು ಸ್ಪಷ್ಟವಾಗಿದೆ. ಉಗ್ರಪೋಷಕ ಪಾಕ್ಗೆ ಸರಿಯಾದ ಬುದ್ಧಿ ಕಲಿಸಬೇಕು ಎಂಬ ಆಗ್ರಹ ಭಾರತದಲ್ಲಿ ಹೆಚ್ಚಾಗಿದೆ. ಈ ಮಧ್ಯೆ ಭಾರತ ಮತ್ತು ಪಾಕಿಸ್ತಾನ ವಿಭಜನೆ ಸಮಯದಲ್ಲಿ ಎಷ್ಟು ಹಿಂದೂಗಳು ಭಾರತದಿಂದ ಪಾಕಿಸ್ತಾನಕ್ಕೆ ಹೋಗಿದ್ದರು? ಈಗ ಎಷ್ಟು ಮಂದಿ ಅಲ್ಲಿ ಉಳಿದುಕೊಂಡಿದ್ದಾರೆ ಅನ್ನೋ ವಿವರ ಇಲ್ಲಿದೆ.
ಪಾಕಿಸ್ತಾನದ ಜನಸಂಖ್ಯೆ
ಸ್ವಾತಂತ್ರ್ಯದ ಸಮಯದಲ್ಲಿ ಭಾರತದ ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನು ಪಾಕಿಸ್ತಾನ ಎಂದು ಘೋಷಣೆ ಮಾಡಲಾಯಿತು. ಪ್ರಸ್ತುತ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವಾಗಿದೆ. ವರ್ಲ್ಡೋಮೀಟರ್ (Worldometer) ಪ್ರಕಾರ, 23 ಕೋಟಿಗೂ ಹೆಚ್ಚು ಜನಸಂಖ್ಯೆ ಪಾಕ್ನಲ್ಲಿದೆ. ವಿಶ್ವದ ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಪಾಕ್. 2017ರ ಜನಗಣತಿಯ ಪ್ರಕಾರ, ಪಾಕಿಸ್ತಾನದ ಜನಸಂಖ್ಯೆ 20.7 ಕೋಟಿ. 2023ರ ಹೊತ್ತಿಗೆ ಅದು 24.14 ಕೋಟಿಗೆ ತಲುಪಿದೆ. 2050ರ ವೇಳೆಗೆ ಪಾಕಿಸ್ತಾನವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ.
ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಜಾಮರ್ ಅಸ್ತ್ರ; ಇದರಿಂದ ಪುಕ್ಕಲು ಪಾಕ್ ಸೇನೆಗೆ ಹೇಗೆ ಕಷ್ಟ ಆಗ್ತದೆ..?
ಪಾಕಿಸ್ತಾನದಲ್ಲಿ ಹಿಂದೂಗಳು..
ಪಾಕಿಸ್ತಾನದಲ್ಲಿ ಮುಸ್ಲಿಮರ ನಂತರ ಹಿಂದೂ ಜನಸಂಖ್ಯೆಯು ಅದು ಎರಡನೇ ಅತಿ ದೊಡ್ಡದಾಗಿದೆ. 2017 ರ ಜನಗಣತಿ ಪ್ರಕಾರ, ಪಾಕ್ನಲ್ಲಿ 40 ಲಕ್ಷ ಹಿಂದೂಗಳಿದ್ದರು. ಪಾಕಿಸ್ತಾನಿ ಹಿಂದೂ ಮಂಡಳಿಯ ಪ್ರಕಾರ, ಪ್ರಸ್ತುತ ಅಲ್ಲಿ ಹಿಂದೂಗಳ ಒಟ್ಟು ಜನಸಂಖ್ಯೆ ಶೇ. 2.14 ರಷ್ಟಿದೆ. ಪಾಕಿಸ್ತಾನದ ಉಮರ್‌ಕೋಟ್ ಜಿಲ್ಲೆ ಹೆಚ್ಚು ಹಿಂದೂಗಳನ್ನು ಹೊಂದಿದೆ. ಅಲ್ಲಿ ಶೇಕಡಾ 52 ರಷ್ಟು ಹಿಂದೂಗಳಿದ್ದಾರೆ. ಥಾರ್ಪಾರ್ಕರ್ ಜಿಲ್ಲೆಯಲ್ಲಿ 7,14,698 ಹಿಂದೂಗಳು ವಾಸಿಸುತ್ತಿದ್ದಾರೆ.
ವಿಭಜನೆಗೂ ಮುನ್ನ ಹಿಂದೂಗಳು ಎಷ್ಟಿದ್ದರು?
ವಿಭಜನೆಗೂ ಮೊದಲು 1941 ರಲ್ಲಿ ಜನಗಣತಿ ನಡೆದಿತ್ತು. ಅದರ ಪ್ರಕಾರ ಈಗ ಪಾಕಿಸ್ತಾನವಾಗಿರುವ ಪ್ರದೇಶದ ಜನಸಂಖ್ಯೆಯಲ್ಲಿ ಶೇಕಡಾ 14.6 ರಷ್ಟು ಹಿಂದೂಗಳಿದ್ದರು. ಈಗ ಅಲ್ಲಿ ಬಹಳ ಕಡಿಮೆ ಹಿಂದೂ ದೇವಾಲಯಗಳಿವೆ. 1947ರ ಆಗಸ್ಟ್ 14 ರಂದು ಪಾಕಿಸ್ತಾನ ಭಾರತದಿಂದ ಬೇರ್ಪಟ್ಟ ನಂತರ 44 ಲಕ್ಷ ಹಿಂದೂಗಳು ಮತ್ತು ಸಿಖ್ಖರು ಭಾರತಕ್ಕೆ ಬಂದರು. ಭಾರತದಿಂದ 4.1 ಕೋಟಿ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು. 1951ರ ಜನಗಣತಿಯ ಪ್ರಕಾರ, ಪಶ್ಚಿಮ ಪಾಕಿಸ್ತಾನದಲ್ಲಿ ಶೇಕಡಾ 1.6 ರಷ್ಟು ಹಿಂದೂಗಳಿದ್ದರೆ, ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) 22.05 ರಷ್ಟು ಹಿಂದೂಗಳಿದ್ದಾರೆ. ಆದರೆ ಪಾಕಿಸ್ತಾನದಿಂದ ಎಷ್ಟು ಹಿಂದೂಗಳು ಭಾರತಕ್ಕೆ ಬಂದರು ಅನ್ನೋದರ ಬಗ್ಗೆ ಮಾಹಿತಿಯಿಲ್ಲ.
ಇದನ್ನೂ ಓದಿ: ಯುದ್ಧದಲ್ಲಿ ಮೊದಲು ದಾಳಿ ಮಾಡಿದ ದೇಶಕ್ಕೆ ಆಗುವ ನಷ್ಟ ಏನು? ಭಾರತ-ಪಾಕ್ ಮಧ್ಯೆ ವಾರ್ ನಡೆದ್ರೆ ಏನಾಗಲಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ