/newsfirstlive-kannada/media/post_attachments/wp-content/uploads/2025/03/TRAIN-PLOTFORM-1.jpg)
ಭಾರತೀಯ ರೈಲ್ವೆ ವಿಶ್ವದ ಅತ್ಯಂತ ದೊಡ್ಡ ರೈಲ್ವೆ ನೆಟ್ವರ್ಕ್ಗಳಲ್ಲಿ ಒಂದು. ದೇಶದ ಆರ್ಥಿಕ ಅಭಿವೃದ್ಧಿಗೆ ಭಾರತೀಯ ರೈಲ್ವೆಗಳ ಕೊಡುಗೆ ಅತ್ಯಂತ ದೊಡ್ಡದು. ನಿತ್ಯ ಲಕ್ಷಾಂತರ ಪ್ರಯಾಣಿಕರಿಗೆ ಪ್ರಯಾಣದ ಸೇವೆ ಒದಗಿಸುತ್ತವೆ ಸಾವಿರಾರು ರೈಲುಗಳು. ಕೇವಲ ಪ್ರಯಾಣಿಕರನ್ನು ಮಾತ್ರವಲ್ಲ ಸರಕು ಸಾಗಾಣಿಕೆಯಲ್ಲೂ ಭಾರತೀಯ ರೈಲ್ವೆಯ ಕೊಡುಗೆ ತುಂಬಾ ದೊಡ್ಡದಿದೆ. ನಿತ್ಯವೂ ನೂರಾರು ಸರಕುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತವೆ. ಅದು ಮಾತ್ರವಲ್ಲದೇ ದೇಶದ ಜನರಿಗೆ ಉದ್ಯೋಗವಕಾಶಗಳನ್ನು ಒದಗಿಸುವಲ್ಲಿಯೂ ಕೂಡ ಭಾರತೀಯ ರೈಲ್ವೆ ಇಲಾಖೆ ಪ್ರಮುಖ ಪಾತ್ರವಹಿಸುತ್ತದೆ.
ಇನ್ನು ಡಿಜಿಟಲ್ ಯುಗದದಲ್ಲಿ ಅನೇಕ ಡಿಜಿಟಿಟಲ್ ಮಾಹಿತಿಯನ್ನು ನೀಡುವಲ್ಲಿಯೂ ಕೂಡ ರೈಲ್ವೆ ಇಲಾಖೆ ಮುಂದಿದೆ. ಪ್ರಯಾಣಿಕರ ಪ್ರಯಾಣಕ್ಕೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಎದುರಾಗದಂತೆ. ಅವರ ಸರಳ ಪ್ರಯಾಣಕ್ಕೆ ಬೇಕಾಗುವ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ನೀಡುತ್ತ ಬರುತ್ತಿದೆ. ಇದೆಲ್ಲದರ ನಡುವೆ ಭಾರತೀಯ ಪ್ರತಿ ರೈಲ್ವೆ ಪ್ರಯಾಣಿಕನಿಗೂ ಇರುವ ಒಂದು ಪ್ರಶ್ನೆ ಅಂದ್ರೆ ಒಂದು ರೈಲು ಒಂದು ಲೀಟರ್ ಡಿಸೇಲ್ಗೆ ಎಷ್ಟು ಕಿಲೋಮೀಟರ್ ಓಡುತ್ತೆ ಅನ್ನೋದು. ಅಂದ್ರೆ ಭಾರತೀಯ ರೈಲಿನ ಮೈಲೇಜ್ ಎಷ್ಟಿದೆ ಎಂಬುದು. ಅದರ ಬಗ್ಗೆ ಮಾಹಿತಿಯನ್ನು ಭಾರತೀಯ ರೈಲ್ವೆ ಇಲಾಖೆ ಈಗ ತೆರೆದಿಟ್ಟಿದೆ.
ಇದನ್ನೂ ಓದಿ: ತನ್ನದೇ ಸ್ವಂತ ರೈಲು ಹೊಂದಿದ ಭಾರತದ ಏಕೈಕ ವ್ಯಕ್ತಿ ಈತ! ರೈಲ್ವೆ ಇಲಾಖೆಯ ಒಂದು ತಪ್ಪಿನಿಂದಾದ ಯಡವಟ್ಟು ಏನು?
ಅಂದಹಾಗೆ ಒಂದು ರೈಲು ಎಷ್ಟು ಮೈಲೇಜ್ ನೀಡುತ್ತದೆ ಎಂಬುದು ಅದಕ್ಕೆ ಅಳವಡಿಸಲಾದ ಕೋಚ್ ಸಂಖ್ಯೆಗಳು ಗಣನೆಗೆ ಬರುತ್ತವೆ. ಸುಮಾರು 24 ರಿಂದ 25 ಬೋಗಿಗಳನ್ನು ಹೊಂದಿರುವ ಇಂಜಿನ್ ರೈಲು ಸುಮಾರು ಆರು ಲೀಟರ್ ಡಿಸೇಲ್ಗೆ ಒಂದು ಕಿಲೋ ಮೀಟರ್ ಓಡುತ್ತವೆ. ಇನ್ನು ಸೂಪರ್ಫಾಸ್ಟ್ ರೈಲುಗಳು ಪ್ಯಾಸೆಂಜರ್ ರೈಲಿಗಿಂತ ಕಡಿಮೆ ಡಿಸೇಲ್ ಕುಡಿಯುತ್ತವೆ.
ಈಗಾಗಲೇ ಹೇಳಿದಂತೆ ಪ್ಯಾಸೆಂಜರ್ ರೈಲುಗಳು ಒಂದು ಕಿಲೋ ಮೀಟರ್ ಪ್ರಯಾಣಿಸಲು ಸುಮಾರು 5 ರಿಂದ 6 ಲೀಟರ್ ಡಿಸೇಲ್ ಉಪಯೋಗಿಸಿದರೆ. 12 ಕೋಚ್ಗಳನ್ನು ಹೊಂದಿರುವ ಎಕ್ಸ್ಪ್ರೆಸ್ ಟ್ರೈನ್ಗಳು 1 ಕಿಲೋ ಮೀಟರ್ ಪ್ರಯಾಣಕ್ಕೆ ಸುಮಾರು 4.5 ಲೀಟರ್ ಡಿಸೇಲ್ ಅಗತ್ಯವಿರುತ್ತದೆ.
ಸೂಪರ್ಫಾಸ್ಟ್ ಟ್ರೈನ್ಗಳು ಒಂದು ಲೀಟರ್ ಡಿಸೇಲ್ಗೆ ಸುಮಾರು 230 ಮೀಟರ್ ದೂರ ಕ್ರಮಿಸುತ್ತವೆ. ಆದ್ರೆ ಪ್ಯಾಸೆಂಜರ್ ಟ್ರೈನ್ಗಳು ಒಂದು ಲೀಟರ್ ಡಿಸೇಲ್ಗೆ ಸುಮಾರು 180 ರಿಂದ 200 ಮೀಟರ್ ದೂರ ಕ್ರಮಿಸುತ್ತವೆ.
ಇದನ್ನೂ ಓದಿ:ಶತಾಬ್ದಿಯೂ ಅಲ್ಲ, ವಂದೇ ಭಾರತ್ ಅಲ್ಲ.. ಭಾರತದಲ್ಲಿಯೇ ಅತಿಹೆಚ್ಚು ಆದಾಯ ಗಳಿಸುವ ಟ್ರೈನ್ಗಳು ಇವು
ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಭಾರತೀಯ ರೈಲ್ವೆ ಅತ್ಯಂತ ಕಡಿಮೆ ಪ್ರಮಾಣದ ಡಿಸೇಲ್ ಇಂಜಿನ್ ರೈಲ್ವೆಗಳನ್ನು ಹೊಂದಿವೆ. ಅವುಗಳನ್ನು ಎಲೆಕ್ಟ್ರಿಕ್ ಇಂಜಿನ್ ರೈಲ್ವೆಗಳನ್ನಾಗಿ ಪರಿವರ್ತಿಸುವ ಕೆಲಸಗಳು ಕೂಡ ಆರಂಭವಾಗಿದ್ದು ಈಗಾಗಲೇ ಅದೆಷ್ಟೋ ರೈಲುಗಳು ಪರಿವರ್ತನೆಗೊಂಡಿವೆ. ಆದರೆ ಎಲ್ಲಿ ಸರಿಯಾದ ಎಲೆಕ್ಟ್ರಿಸಿಟಿಯ ಸೌಲಭ್ಯ ಸರಿಯಾಗಿಲ್ಲವೋ ಅಂತಹ ಪ್ರದೇಶಗಳಿಗೆ ಅನಿವಾರ್ಯವಾಗಿ ಡಿಸೇಲ್ ಇಂಜಿನ್ ಇರುವ ರೈಲುಗಳನ್ನೇ ಓಡಿಸಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ