ಭಾರತೀಯರು ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು? ನಮ್ಮ ಪುರಾತನ ಆಹಾರ ಕ್ರಮ ಹೇಗಿತ್ತು?

author-image
Gopal Kulkarni
Updated On
ಭಾರತೀಯರು ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು? ನಮ್ಮ ಪುರಾತನ ಆಹಾರ ಕ್ರಮ ಹೇಗಿತ್ತು?
Advertisment
  • ಭಾರತೀಯರು ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು ಗೊತ್ತಾ?
  • 14ನೇ ಶತಮಾನಕ್ಕಿಂತಲೂ ಮೊದಲು ನಮ್ಮ ಆಹಾರ ಕ್ರಮ ಹೇಗಿತ್ತು?
  • ಆಧುನಿಕತೆಯ ನೆಪದಲ್ಲಿ ನಾವು ನಿತ್ಯ ಹೆಚ್ಚಿಗೆ ಊಟ ಮಾಡುತ್ತಿದ್ದೇವಾ?

ಭಾರತದಲ್ಲಿ ಆಹಾರವೆಂದರೆ ಕೇವಲ ಹೊಟ್ಟೆ ತುಂಬಿಸುವುದಲ್ಲ, ಅದನ್ನು ಅನ್ನಬ್ರಹ್ಮ ಎಂದು ಪವಿತ್ರ ಸ್ಥಾನದಲ್ಲಿ ಇಡುತ್ತಾರೆ. ಅನ್ನ ಮತ್ತು ಅನ್ನ ಸೇವನೆ ಸಮಯವನ್ನು ಕೂಡ ಇಲ್ಲಿ ಪವಿತ್ರ ಎಂದು ಭಾವಿಸಲಾಗುತ್ತದೆ. ಭಾರತೀಯರ ಮನೆಗಳಲ್ಲಿ ಸಾಮಾನ್ಯವಾಗಿ ಎರಡರಿಂದ ಮೂರು ಬಾರಿ ಆಹಾರ ಸೇವಿಸುವ ಪದ್ಧತಿಯಿದೆ. ಚಹಾ ಕುಡಿಯುವ ವೇಳೆ ನಾವು ಸೇವಿಸುವ ಆಹಾರ ಹೊರತುಪಡಿಸಿ ಎರಡರಿಂದ ಮೂರು ಬಾರಿ ದಿನಕ್ಕೆ ಆಹಾರ ಸೇವಿಸುವ ಪದ್ಧತಿ ಇದೆ

ಭಾರತದಲ್ಲಿ ಆಹಾರ ಪ್ರೀತಿಯನ್ನು ಎಂದಿಗೂ ಕೂಡ ನಿರಾಕರಿಸಲಾಗುವುದಿಲ್ಲ, ಇಲ್ಲಿನ ವೈವಿದ್ಯಮಯ ಆಹಾರಗಳು ಕೂಡ ನಮ್ಮ ಊಟ ಸೇವಿಸುವ ಪ್ರೀತಿಯನ್ನು ಹೆಚ್ಚಿಸುತ್ತದೆ. ಆದ್ರೆ ಇಲ್ಲಿ ಒಂದು ವಿಚಾರವನ್ನು ನಾವು ಯೋಚನೆ ಮಾಡಲೇಬೇಕು ಈ ನಾಲ್ಕು ಬಾರಿ ಆಹಾರ ಸೇವನೆ ಸರಿಯಾ ಅಥವಾ ನಾವು ಹೆಚ್ಚಿಗೆ ತಿನ್ನುತ್ತಿದ್ದೇವಾ ಅನ್ನೋದು?

publive-image

ಇಂದು ಮೂರು ಹೊತ್ತು ಊಟ ಮಾಡುವುದು ಒಂದು ರೀತಿಯಲ್ಲಿ ಅನಿವಾರ್ಯ. ನಿಮಗೆ ಗೊತ್ತಾ ಬೆಳಗಿನ ಉಪಹಾರ ಎನ್ನುವುದು ಭಾರತೀಯ ಆಹಾರ ಕ್ರಮದಲ್ಲಿ ಈ ಹಿಂದೆ ಇರಲೇ ಇಲ್ಲ. 14ನೇ ಶತಮಾನದವರೆಗೂ ಮುಂಜಾನೆದ್ದು ಉಪಹಾರ ಸೇವಿಸು ಪದ್ಧತಿ ಭಾರತದಲ್ಲಿ ಇರಲಿಲ್ಲ. ಭಾರತೀಯರು 14ನೇ ಶತಮಾನಕ್ಕೂ ಮೊದಲು ಮಧ್ಯಾಹ್ನದ ಊಟದಿಂದಲೇ ಅವರ ಆಹಾರ ಸೇವನೆ ಆರಂಭವಾಗುತ್ತಿತ್ತು. ಅದಾದ ಬಳಿಕ ರಾತ್ರಿ ಭೋಜನವಿರುತ್ತಿತ್ತು, ಅದು ಕೂಡ ಮಧ್ಯಾಹ್ನ ಊಟದ ಪ್ರಮಾಣಕ್ಕಿಂತ ಕಡಿಮೆ. ಯಾವಾಗ ನಮ್ಮ ಕೆಲಸಗಳು ಜನರು ಮನೆಯಲ್ಲಿ ಹಾಗೂ ಕಾರ್ಖಾನೆಗಳಲ್ಲಿ ಮಾಡಲು ಶುರು ಮಾಡಿದರೂ ಆಗ ಊಟದ ಸೇವನೆ ಹವ್ಯಾಸ ಬದಲಾಯಿತು. ಇದು ಮುಂಜಾನೆ ಎದ್ದಮೇಲೆ ಮೊದಲ ಉಪಹಾರದಿಂದ ಆಹಾರಕ್ರಮವನ್ನು ಶುರು ಮಾಡಲು ಮೊದಲ ವೇದಿಕೆಯಾಯ್ತು.

ಇದನ್ನೂ ಓದಿ: ಮಾವಿನ ಎಲೆಯಲ್ಲಿ ಆರೋಗ್ಯದ ರಹಸ್ಯ! ಈ ವಿಚಾರಗಳು ಗೊತ್ತಾದ್ರೆ ನೀವು ಮಿಸ್ ಮಾಡಲ್ಲ..!

publive-image

19ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಚಹಾ ಮತ್ತು ಕಾಫಿಯ ಪರಿಚಯ ಮಾಡಿತು. ಇದು ಕೂಡ ಭಾರತೀಯರ ಆಹಾರ ಕ್ರಮದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ದುಬೈ ಮೂಲದ ನ್ಯೂಟ್ರಿಷಿಯನ್ ಈಶಾಂಕ್ ವಹಿ ಹೇಳುವ ಪ್ರಕಾರ ಈ ಮೊದಲು ಭಾರತೀಯರು ಎರಡು ಹೊತ್ತಿನ ಊಟಕ್ಕಾದರೆ ಸಾಕು ಎನ್ನುವ ಡೈಲಾಗ್ ಹೇಳುತ್ತಿದದರು. ಮೊದಲು ಭಾರತದಲ್ಲಿ ದಿನಕ್ಕೆ ಎರಡು ಬಾರಿ ಊಟ ಮಾಡುವುದೇ ರೂಢಿಯಲ್ಲಿತ್ತು ಎಂದು ಹೇಳುತ್ತಾರೆ. ಫೋರ್ಟಿಸ್ ಆಸ್ಪತ್ರೆಯ ಡಯಟಿಷನ್ ಭಾರತಿ ಕುಮಾರ್ ಅವರು ಹೇಳುವ ಪ್ರಕಾರ, ಎರಡು ಹೊತ್ತಿನ ಊಟ ಯಾವಾಗಲೂ ಕೂಡ ಒಳ್ಳೆಯದೇ ಅದರಲ್ಲೂ ವಯಸ್ಸಿಗನುಗುಣವಾಗಿ ಊಟವನ್ನು ಮಾಡುವುದು ಹಾಗೂ ಸದಾ ಚಟುವಟಿಕೆಯಿಂದ ಇರಲು ಎರಡು ಹೊತ್ತು ಊಟ ಮಾಡುವುದು ನಿಜಕ್ಕೂ ಉತ್ತಮ ಆಹಾರ ಕ್ರಮ ಎಂದು ಹೇಳುತ್ತಾರೆ.

ಇದನ್ನೂ ಓದಿ: ವಿಶ್ವದ ಸರ್ವಶ್ರೇಷ್ಠ 100 ರೆಸ್ಟೋರೆಂಟ್​ಗಳ ಪಟ್ಟಿ ಬಿಡುಗಡೆ; ಭಾರತದ ಎಷ್ಟು ಉಪಹಾರಗೃಹಗಳಿಗೆ ಸ್ಥಾನ?

publive-image

ಇದೆಲ್ಲದರ ಆಚೆ ನಿಜಕ್ಕೂಊಟದ ಸರಿಯಾದ ಸಂಖ್ಯೆಗಳು ಎಷ್ಟು ಅಂತ ನೋಡುವುದಾದ್ರೆ, ನಿಮ್ಮ ಜೀವನ ಕ್ರಮ ನಿಮ್ಮ ಆಹಾರ ಕ್ರಮವನ್ನು ಹೇಳೂತ್ತದೆ. ನಿಮ್ಮ ಆರೋಗ್ಯಕ್ಕೆ ಯಾವುದು ಸರಿಯಾದದ್ದೋ ಅದನ್ನೇ ಅಷ್ಟು ಸಮಯ ಊಟ ಮಾಡಬೇಕು. ನೀವು ಎರಡು ಹೊತ್ತಿನ ಊಟ ಮಾಡಲು, ಉಪಹಾರವೂ ಬೇಕು ಎನ್ನಲು, ಮಿತವಾದ ರಾತ್ರಿಯನ್ನು ಆಯ್ಕೆ ಮಾಡಲು ನಿಮ್ಮ ದೇಹ ಸ್ಪಂದನೆಯ ಮೇಲೆ ನಿರ್ಧಾರವಾಗುತ್ತದೆ. ನಿಮ್ಮ ದೇಹ ನಿಜಕ್ಕೂ ಎಷ್ಟು ಸಮಯದ ಆಹಾರವನ್ನು ನಿರ್ವಹಿಸಬಲ್ಲದೋ ಅಷ್ಟು ಸಮಯ ನಾವು ತಿನ್ನಲೇಬೇಕು ಎಂಬುದು ವೈದ್ಯರ ಸಲಹೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment