/newsfirstlive-kannada/media/post_attachments/wp-content/uploads/2024/12/RAJGHAT-2.jpg)
ಮಾಜಿ ಪ್ರಧಾನಿ, ನವಭಾರತ ನಿರ್ಮಾಣದ ಹರಿಕಾರ ಮನಮೋಹನ್​ ಸಿಂಗ್​ ಅವರು ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ದೆಹಲಿಯ ರಾಜ್​ಘಾಟ್​ನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ವಕ್ತಾರ ಕೆ.ಸಿ.ವೇಣುಗೋಪಾಲ್ ಅವರು ಈಗಾಗಲೇ ತಿಳಿಸಿದ್ದಾರೆ. ಅದು ಮಾತ್ರವಲ್ಲ. ಇಂದು 8 ಗಂಟೆಯವರೆಗೂ ಅವರ ನಿವಾಸದಲ್ಲಿ ಹಾಗೂ 8.30ರಿಂದ 9.30ರವರೆಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ
ಇಂದು ಬೆಳಗ್ಗೆ 9.30ಕ್ಕೆ ಮನಮೋಹನ್ ಸಿಂಗ್ ಅವರ ಅಂತಿಮಯಾತ್ರೆ ಆರಂಭಗೊಳ್ಳಲಿದ್ದು. 9.30ರ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೇರವೇರಲಿದೆ ಎಂದು ಹೇಳಿದ್ದಾರೆ. ಈ ಹಿಂದೆ ಇಹಲೋಕವನ್ನು ತ್ಯಜಿಸಿದ ಅನೇಕ ಪ್ರಧಾನಿಗಳ ಹಾಗೂ ರಾಷ್ಟ್ರಪುರಷರ ಸ್ಮಾರಕದಂತೆಯೇ, ಮನಮೋಹನ್​ ಸಿಂಗ್​ ಅವರ ಸ್ಮಾರಕ ಅಥವಾ ಸಮಾಧಿ ಕೂಡ ರಾಜ್​ಘಾಟನಲ್ಲಿಯೇ ಆಗಲಿದೆ.
ಈ ಹಿಂದೆ ಅನೇಕ ರಾಷ್ಟ್ರಪುರುಷರು ಹಾಗೂ ಪ್ರಧಾನಿಗಳ ಸ್ಮಾರಕ ರಾಜ್​ಘಾಟನಲ್ಲಿ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಮೊದಲು ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರದ್ದು.
/newsfirstlive-kannada/media/post_attachments/wp-content/uploads/2024/12/RAJGHAT.jpg)
ಮಹಾತ್ಮಾ ಗಾಂಧಿ : ಮಹಾತ್ಮಾ ಗಾಂಧೀಜಿಯವರ ಜನವರಿ 31, 1948ರಲ್ಲಿ ಅಸುನೀಗಿದರು. ಅವರ ಅಂತಿಮ ಕ್ರಿಯಾವಿಧಿಯನ್ನು ಇದೇ ರಾಜ್​ಘಾಟನಲ್ಲಿಯೇ ಮಾಡಲಾಯಿತು. ಅದರ ಜೊತೆಗೆ ಅವರ ಸ್ಮಾರಕವೂ ಕೂಡ. ಕಪ್ಪು ಬಣ್ಣದ ಮಾರ್ಬಲ್​ಗಳಿಂದ ಕಂಗೊಳಿಸುವ ಸ್ಮಾರಕವನ್ನು ಮಹಾತ್ಮ ಗಾಂಧಿಜಿವಯರಿಗಾಗಿ ನಿರ್ಮಿಸಲಾಯ್ತು.
/newsfirstlive-kannada/media/post_attachments/wp-content/uploads/2024/12/RAJGHAT-1.jpg)
ಜವಾಹರಲಾಲ್ ನೆಹರು : ಭಾರತದ ಮೊದಲ ಪ್ರಧಾನಿ ಜವಹಾರಲಾಲ್ ನೆಹರುವ ಅವರ ಸ್ಮಾರಕವೂ ಕೂಡ ಇದೇ ರಾಜ್​ಘಾಟನಲ್ಲಿದೆ. ಅದಕ್ಕೆ ಶಾಂತಿವನ ಸ್ಮಾರಕ ಎಂದು ಕರೆಯಲಾಗುತ್ತದೆ.
/newsfirstlive-kannada/media/post_attachments/wp-content/uploads/2024/12/VIJAY-GHAT.jpg)
ಲಾಲ್ ಬಾಹದ್ದೂರ್ ಶಾಸ್ತ್ರಿ: ಭಾರತದ ಎರಡನೇ ಪ್ರಧಾನಿ, ಜೈ ಜವಾನ್, ಜೈ ಕಿಸಾನ್​ ಘೋಷಣೆಯ ಹರಿಕಾರ ಲಾಲ್​ ಬಾಹದ್ದೂರ್ ಶಾಸ್ತ್ರೀಜಿಯವರ ಸ್ಮಾರಕವು ಕೂಡ ಇದೇ ರಾಜ್​ಘಾಟ್​ನಲ್ಲಿದೆ. ಅದಕ್ಕೆ ವಿಜಯ್ ಘಾಟ್​ ಎಂದು ಹೆಸರು ನೀಡಲಾಗಿದೆ.
/newsfirstlive-kannada/media/post_attachments/wp-content/uploads/2024/12/INDIRA-GANDI-SHAKTI-STA_.jpg)
ಇಂದಿರಾ ಗಾಂಧಿ: ಇಂದಿರಾ ಗಾಂಧಿ ಭಾರತ ಕಂಡ ಮೂರನೇ ಪ್ರಧಾನಿ. ಇವರ ಅಂತಿಮ ಸಂಸ್ಕಾರವೂ ಇಲ್ಲಿಯೇ ನೇರವೇರಿದ್ದು. ಅವರ ಸ್ಮರಣಾರ್ಥವಾಗಿ ಶಕ್ತಿಸ್ಥಲ್ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಹಣವಿಲ್ಲದೇ 290 km ರೈಲಿನಲ್ಲಿ ಪ್ರಯಾಣ ಮಾಡಿದ ಯುವಕ; ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ!
/newsfirstlive-kannada/media/post_attachments/wp-content/uploads/2024/12/RAJEEV-GANDI.jpg)
ರಾಜೀವ್ ಗಾಂಧಿ: ಇಂದಿರಾ ಗಾಂಧಿಯ ಬಳಿಕ ಅಧಿಕಾರಕ್ಕೆ ಬಂದ ರಾಜೀವ್​ ಗಾಂಧಿಯವರು ನಕ್ಸಲೇಟ್ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಅಸುನೀಗಿದರು . ಇವರ ಸ್ಮಾರಕವೂ ಕೂಡ ರಾಜ್​ಘಾಟ್​ನ ಕಾಂಪ್ಲೆಕ್ಸ್​ನಲ್ಲಿಯೇ ಇದೆ. ಇದಕ್ಕೆ ವೀರಭೂಮಿ ಎಂದು ಹೆಸರಿಡಲಾಗಿದೆ.
ಶಂಕರ್ ದಯಾಳ ಶರ್ಮಾ: ಭಾರತದ ಮಾಜಿ ರಾಷ್ಟ್ರಪತಿ ಶಂಕರ್​ ದಯಾಳ ಶರ್ಮಾ ಅವರ ಸ್ಮಾರಕವೂ ಇದೇ ರಾಜ್​ಘಾಟ್​ನಲ್ಲಿದೆ. ಕರ್ಮಭೂಮಿ ಹೆಸರಿನಲ್ಲಿ ಇವರ ಸ್ಮರಣಾರ್ಥವಾಗಿ ಸ್ಮಾರಕ ನಿರ್ಮಿಸಲಾಗಿದೆ.
/newsfirstlive-kannada/media/post_attachments/wp-content/uploads/2024/12/VAJAPEYEE.jpg)
ಅಟಲ್ ಬಿಹಾರಿ ವಾಜಪೇಯಿ: ದೇಶದ ಮತ್ತೊಬ್ಬ ಪ್ರಧಾನಿ, ಅಜಾತಶತ್ರುವೆಂದೇ ಖ್ಯಾತಿ ಪಡೆದಿರುವ ಅಟಲ್ ಬಿಹಾರಿ ವಾಜಪೇಯಿಯವರು, ಆಗಸ್ಟ್​ 16 2018ರಲ್ಲಿ ಇಹಲೋಕ ತ್ಯಜಿಸಿದರು. ಇವರ ಸ್ಮಾರಕವೂ ಕೂಡ ರಾಜ್​ಘಾಟ್​ನಲ್ಲಿದ್ದು ಇದಕ್ಕೆ ರಾಷ್ಟ್ರೀಯ ಸ್ಮೃತಿ ಸ್ಥಳ ಎಂದು ಹೆಸರಿಡಲಾಗಿದೆ.
ಇವರಲ್ಲದೇ ದೇವಿಲಾಲ್,ಚೌದರಿ ಚರಣ್ ಸಿಂಗ್, ಜಗಜೀವನ್ ರಾಮ್, ಗೈನಿ ಜೈಲ್ ಸಿಂಗ್, ಚಂದ್ರಾಶೇಖರ್, ಐ.ಕೆ.ಗುಜ್ರಾಲ್ ಹಾಗೂ ಉದಯಭೂಮಿಯವರ ಸ್ಮಾರಕವೂ ಕೂಡ ಇದೇ ರಾಜ್​ಘಾಟ್​ನಲ್ಲಿದೆ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us