ಬರೀ 12ನೇ ಸೀಸನ್ ಮಾತ್ರವಲ್ಲ.. ಸುದೀಪ್ ಇನ್ನೂ ಎಷ್ಟು ವರ್ಷ ಬಿಗ್​ಬಾಸ್​ ನಿರೂಪಣೆ ಮಾಡಲಿದ್ದಾರೆ ಗೊತ್ತಾ..?

author-image
Veena Gangani
ವೀಕ್ಷಕರಿಗೆ ಗುಡ್​​ನ್ಯೂಸ್​; ಶೀಘ್ರದಲ್ಲೇ ಬರಲಿದೆ ಬಿಗ್​ಬಾಸ್​ ಸೀಸನ್​ 11ರ ಹೊಸ ಪ್ರೋಮೋ..!
Advertisment
  • ಕೊನೆಗೂ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಿಕ್ತು ಗುಡ್​ನ್ಯೂಸ್
  • ಕಳೆದ 11 ಸೀಸನ್​ಗಳನ್ನು ನಿರೂಪಣೆ ಮಾಡಿದ್ದ ಕಿಚ್ಚ ಸುದೀಪ್
  • ಅಭಿಮಾನಿಗಳ ಪ್ರೀತಿಗೆ ಮನಸೋತು ಮತ್ತೆ ಕಿಚ್ಚ ವಾಪಸ್

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್​ಬಾಸ್​.. ಕಳೆದ 11 ಸೀಸನ್​ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ ಕಿಚ್ಚ ಸುದೀಪ್. ಆದ್ರೆ ಬಿಗ್​ಬಾಸ್ ಸೀಸನ್ 11 ನಡೆಯುತ್ತಿದ್ದಾಗಲೇ ಕಿಚ್ಚ ಸುದೀಪ್‌ ಅವರು ವಿದಾಯ ಹೇಳಿದ್ದರು. ಇದು ನನ್ನ ಕೊನೆಯ ಶೋ ಅಂತ ಹೇಳಿ ಶಾಕ್​ ಕೊಟ್ಟಿದ್ದರು. ಈ ಮಾತು ಅಭಿಮಾನಿಗಳ ಕಿವಿಗೆ ಬಿಳುತ್ತಿದ್ದಂತೆ ತೀವ್ರವಾಗಿ ಬೇಸರಗೊಂಡಿದ್ದರು.

ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಮಾನಸಗೆ ಸ್ಪೆಷಲ್​ ಗಿಫ್ಟ್​ ಕೊಟ್ಟ ಹಾಸ್ಯನಟ ರಾಘವೇಂದ್ರ.. ಏನದು ನೀವೇ ನೋಡಿ!

publive-image

ಅಲ್ಲದೇ ಮುಂದಿನ ಸೀಸನ್ ಕೂಡ ಕಿಚ್ಚ ಸುದೀಪ್‌ ಅವರೇ ನಿರೂಪಣೆ ಮಾಡ್ಬೇಕು, ಇಲ್ಲವಾದರೇ ನಾವು ಬಿಗ್​ಬಾಸ್​ ನೋಡೋದಿಲ್ಲ ಅಂತ ಅಭಿಮಾನಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಈ ಬಾರಿ ಬಿಗ್​ಬಾಸ್​ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ ಅನ್ನೋದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್‌ ಹೋಸ್ಟ್‌ ಆಗಿ ವಾಪಸ್ ಬರ್ತಾರಾ? ಅಥವಾ ಇಲ್ವಾ ಎಂಬ ಡೌಟ್‌ ವೀಕ್ಷಕರಿಗೆ ಕಾಡುತ್ತಿತ್ತು.

publive-image

ಅಲ್ಲದೇ ವಾಹಿನಿ ಕಡೆಯಿಂದ ಎಷ್ಟೇ ಮನವೊಲಿಸುವ ಪ್ರಯತ್ನ ನಡೆದಿದ್ರೂ ಕಿಚ್ಚ ಒಪ್ಪಿಲ್ಲ ಎಂಬ ಮಾತುಗಳು ಕೆಳಿ ಬಂದಿದ್ದವು. ಇದೀಗ ಕೊನೆಗೂ ಬಿಗ್​ಬಾಸ್​ ವೀಕ್ಷಕರಿಗೆ ಖುಷಿ ಸುದ್ದಿ ಕೊಟ್ಟಿದೆ ತಂಡ. ಈ ಬಾರಿಯ ಬಿಗ್​ಬಾಸ್​ ಸೀಸನ್ 12 ನಿರೂಪಣೆ ಸಾರಥ್ಯವನ್ನು ಕಿಚ್ಚ ಸುದೀಪ್​ ಅವರೇ ವಹಿಸಿಕೊಳ್ಳುತ್ತಿದ್ದಾರೆ. ಇದು ಕಿಚ್ಚ ಸುದೀಪ್​ ಅವರ ಅಭಿಮಾನಿಗಳಿಗೆ, ಬಿಗ್​ಬಾಸ್​ ವೀಕ್ಷಕರಿಗೆ ಖುಷಿ ಕೊಟ್ಟಿದೆ.

publive-image

ಹೌದು, ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್ 12 ಸೀಸನ್ ಆರಂಭಕ್ಕೆ ಸಜ್ಜಾಗಿದ್ದು, ಸದ್ಯ ಡೇಟ್​ ರಿಲೀಸ್​ ಬಗ್ಗೆ ಬಿಗ್​ಬಾಸ್​ ತಂಡ ಬಿಟ್ಟು ಕೊಟ್ಟಿಲ್ಲ. ಇನ್ನು, ಬಿಗ್​ಬಾಸ್​ ಹೊಸ ಸೀಸನ್ ಆರಂಭಕ್ಕೆ 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಬಿಗ್​ಬಾಸ್ ತಂಡ ನಿನ್ನೆ ಆಯೋಜನೆ ಮಾಡಿದ ಪ್ರೆಸ್‌ ಮೀಟ್​ನಲ್ಲಿ ಮುಂದಿನ ಸೀಸನ್​ ಅನ್ನು ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯಲಿದ್ದಾರೆ ಎಂದು ಅನೌನ್ಸ್​ ಮಾಡಿದೆ.

publive-image

ಇನ್ನೂ, ಸೀಸನ್ 11ರಿಂದ ತಾವೇ ನಿರೂಪಣೆ ಮಾಡಿಕೊಂಡು ಬಂದ ಕಿಚ್ಚ ಸುದೀಪ್​ ಅವರು ಬರೀ 12ನೇ ಸೀಸನ್​ ಮಾತ್ರವಲ್ಲದೇ ಇನ್ನೂ ಸೀಸನ್ 15ರವರೆಗೂ ಅವರೇ ಹೋಸ್ಟ್​ ಮಾಡಲಿದ್ದಾರೆ ಎಂದು ಬಿಗ್​ಬಾಸ್​ ತಂಡ ಬಿಗ್​ ಅಪ್​ಡೇಟ್​ ಕೊಟ್ಟಿದ್ದಾರೆ. ಸದ್ಯ ಇದೇ ವಿಚಾರ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.

publive-image

ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 12 ಯಾವಾಗಿನಿಂದ ಪ್ರಸಾರ ಆಗಲಿದೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಕಲರ್ಸ್ ಕನ್ನಡ ತಿಳಿಸಿದೆ. ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬ ಲೆಕ್ಕಾಚಾರ ಈಗಲೇ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment