/newsfirstlive-kannada/media/post_attachments/wp-content/uploads/2025/05/KL-RAHUL-11.jpg)
ಇಂಗ್ಲೆಂಡ್ ಪ್ರವಾಸಕ್ಕೆ 18 ಸದಸ್ಯರ ಟೀಂ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದೆ. ಶುಬ್ಮನ್ ಗಿಲ್ ಟೆಸ್ಟ್ ತಂಡದ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ರಿಷಭ್ ಪಂತ್‌ಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಉದಯೋನ್ಮುಖ ಸ್ಟಾರ್ಗಳಾದ ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್ ಮತ್ತು ನಿತೀಶ್ ರೆಡ್ಡಿಗೆ ಸ್ಥಾನ ನೀಡಲಾಗಿದೆ. ಕರುಣ್ ನಾಯರ್ ಸುಮಾರು 7 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಸದ್ಯ ದೇಶದಲ್ಲಿ ಐಪಿಎಲ್-2025ರ ಸಂಭ್ರಮ ನಡೆಯುತ್ತಿದೆ. ಟೀಂ ಇಂಡಿಯಾ ಬಗ್ಗೆ ನೋಡೋದಾದರೆ, ಒಂದು ಐಪಿಎಲ್ ತಂಡದಿಂದ 5 ಆಟಗಾರರಿಗೆ ಸ್ಥಾನ ನೀಡಲಾಗಿದೆ. ಆರ್‌ಸಿಬಿಯಿಂದ ಒಬ್ಬನೇ ಒಬ್ಬ ಆಟಗಾರನಿಗೆ ಸ್ಥಾನವಿಲ್ಲ. ಉಳಿದ ಎಲ್ಲಾ ಫ್ರಾಂಚೈಸಿಗಳಿಂದಲೂ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ.. ಬಲಿಷ್ಠ ಟೀಂ ಇಂಡಿಯಾದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ..!
- ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್, ಸಾಯಿ ಸುದರ್ಶನ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ.
- ಡೆಲ್ಲಿ ಕ್ಯಾಪಿಟಲ್ಸ್: ಕೆ.ಎಲ್.ರಾಹುಲ್, ಕುಲದೀಪ್ ಯಾದವ್ ಮತ್ತು ಕರುಣ್ ನಾಯರ್
- ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್, ಆಕಾಶ್‌ದೀಪ್ ಮತ್ತು ಶಾರ್ದೂಲ್ ಠಾಕೂರ್
- ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್
ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಿಂದ ತಲಾ ಒಬ್ಬ ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ (MI), ರವೀಂದ್ರ ಜಡೇಜಾ (CSK), ನಿತೀಶ್ ರೆಡ್ಡಿ (SRH) ಮತ್ತು ಅರ್ಷ್ದೀಪ್ ಸಿಂಗ್ (PBKS) ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಯಾವುದೇ ಆಟಗಾರರು ಸೆಲೆಕ್ಟ್ ಆಗಿಲ್ಲ.
ಇದನ್ನೂ ಓದಿ: ಆರ್ಸಿಬಿ ಕ್ಯಾಂಪ್ ತೊರೆದ ಮತ್ತೊಬ್ಬ ಸ್ಟಾರ್.. ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್