newsfirstkannada.com

5ಕ್ಕೆ 5 ಪಂದ್ಯ ಗೆದ್ರೆ ಆರ್​​ಸಿಬಿಗೆ ಸುವರ್ಣಾವಕಾಶ; ಪ್ಲೇ ಆಫ್​ಗೆ ಹೋಗಲು ಮಾಡಬೇಕಿರೋ ಕೆಲಸ ಇಷ್ಟೇ!

Share :

Published April 26, 2024 at 6:55pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್ 17ನೇ ಸೀಸನ್​​

    ಮುಂದಿನ 5 ಪಂದ್ಯಗಳು ಗೆಲ್ಲಲು ಆರ್​​​ಸಿಬಿ ತಂಡದಿಂದ ಮಾಸ್ಟರ್​ ಪ್ಲಾನ್​​!

    ಪ್ಲೇ ಆಫ್​ಗೆ ಹೋಗಲು ಬೆಂಗಳೂರು ಟೀಮ್​ ಮಾಡಬೇಕಾದ ಕೆಲಸವೇನು?

ಇತ್ತೀಚೆಗೆ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಮುಂದಿನ 5 ಪಂದ್ಯಗಳು ಹೇಗಾದ್ರೂ ಮಾಡಿ ​​ಗೆಲ್ಲಲೇಬೇಕು ಎಂದು ಆರ್​​ಸಿಬಿ ಮುಂದಾಗಿದೆ. ಅದರಲ್ಲೂ ಸುಮಾರು ಭಾರೀ ರನ್​ಗಳಿಂದ ಗೆದ್ದು ರನ್​ ರೇಟ್​ ಹೆಚ್ಚಿಸಿಕೊಂಡರೆ ಪ್ಲೇ ಆಫ್​ಗೆ ಹೋಗೋ ಅವಕಾಶ ಇನ್ನೂ ಇದೆ.

ಪ್ರತಿ ಪಂದ್ಯದಲ್ಲೂ ಆರ್​​ಸಿಬಿ ಟಾಸ್​ ಗೆಲ್ಲಬೇಕು. ಮಿನಿಮಮ್​​​ 220-250 ರನ್​ ಟಾರ್ಗೆಟ್​ ಕೊಡಬೇಕು. ಎಲ್ಲಾ ಪಂದ್ಯಗಳೂ ಕನಿಷ್ಠ 50-100 ರನ್​ಗಳಿಂದ ಗೆಲ್ಲಬೇಕು. ಭಾರೀ ವಿಕೆಟ್​​ ಮತ್ತು ರನ್​ಗಳಿಂದ ಗೆದ್ದರೆ ಆರ್​​​ಸಿಬಿಗೆ ಪ್ಲೇ ಆಫ್​ಗೆ ಹೋಗುವ ಅವಕಾಶ ಇದೆ ಎಂದು ಹೇಳಲಾಗುತ್ತಿದೆ.

9 ಪಂದ್ಯಗಳಲ್ಲಿ ಬ್ಯಾಕ್​ ಟು ಬ್ಯಾಕ್​ 7 ಪಂದ್ಯ ಸೋತಿರೋ ಆರ್​​​ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ತಾನು ಆಡಿರೋ 9 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ 4 ಅಂಕ ಪಡೆದುಕೊಂಡಿದೆ. ತಂಡದ ರನ್​ ರೇಟ್​ ಕೂಡ ಕಡಿಮೆ ಇದೆ.

ಈಗಾಗಲೇ ಅರ್ಧ ಸೀಸನ್​ ಮುಗಿದಿದೆ. ಆರ್​​ಸಿಬಿ ಇನ್ನೂ 5 ಪಂದ್ಯಗಳು ಆಡಲಿದ್ದು. 5ಕ್ಕೆ 5 ಗೆಲ್ಲಬೇಕಿದೆ. ಆಗ ಆರ್​​ಸಿಬಿಗೆ 10 ಅಂಕ ದೊರೆಯಲಿದ್ದು, ಟೋಟಲ್​​ 14 ಪಾಯಿಂಟ್ಸ್​ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್​​ ಕನ್ಫರ್ಮ್​​. 14 ಅಂಕ ಪಡೆದ್ರೂ ಪ್ಲೇ ಆಫ್​ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್​ ಆಗಿರಲಿದೆ.

ಇದನ್ನೂ ಓದಿ: T20 ವಿಶ್ವಕಪ್; ಹೊಸ ಜವಾಬ್ದಾರಿ ಖುಷಿಯಲ್ಲಿದ್ದ ಕೊಹ್ಲಿಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5ಕ್ಕೆ 5 ಪಂದ್ಯ ಗೆದ್ರೆ ಆರ್​​ಸಿಬಿಗೆ ಸುವರ್ಣಾವಕಾಶ; ಪ್ಲೇ ಆಫ್​ಗೆ ಹೋಗಲು ಮಾಡಬೇಕಿರೋ ಕೆಲಸ ಇಷ್ಟೇ!

https://newsfirstlive.com/wp-content/uploads/2024/04/RCB-win-against.jpg

Load More