ಜನರು ನಿತ್ಯ ಅಂದಾಜು ಎಷ್ಟು ಹೆಜ್ಜೆ ನಡೆಯುತ್ತಿದ್ದಾರೆ? ಉತ್ತಮ ಆರೋಗ್ಯಕ್ಕೆ ಎಷ್ಟು ಹೆಜ್ಜೆ ನಡೆಯಬೇಕು?

author-image
Gopal Kulkarni
Updated On
ಜನರು ನಿತ್ಯ ಅಂದಾಜು ಎಷ್ಟು ಹೆಜ್ಜೆ ನಡೆಯುತ್ತಿದ್ದಾರೆ? ಉತ್ತಮ ಆರೋಗ್ಯಕ್ಕೆ ಎಷ್ಟು ಹೆಜ್ಜೆ ನಡೆಯಬೇಕು?
Advertisment
  • ಜಗತ್ತಿನಲ್ಲಿ ಜನರು ಪ್ರತಿನಿತ್ಯ ಎಷ್ಟು ಹೆಜ್ಜೆ ನಡೆಯುತ್ತಿದ್ದಾರೆ ಗೊತ್ತಾ?
  • ನಾವು ಆರೋಗ್ಯವಾಗಿರಲು ಪ್ರತಿನಿತ್ಯ ಎಷ್ಟು ಹೆಜ್ಜೆ ನಡೆಯಬೇಕು?
  • ಯಾವ ವೃತ್ತಿಯಲ್ಲಿರುವ ಜನರ ನಿತ್ಯ ಅತಿಹೆಚ್ಚು ಹೆಜ್ಜೆ ನಡೆಯುತ್ತಾರೆ?

ಅಮೆರಿಕನ್ ಕೌನ್ಸಿಲ್ ಆನ್ ಎಕ್ಸ್​ಸೈಜ್ ಪ್ರಕಾರ ಸದ್ಯ ನಿತ್ಯ ಜನರು ಒಂದು ಅಂದಾಜಿನ ಪ್ರಕಾರ 2,500 ಹೆಜ್ಜೆಗಳನ್ನು ನಡೆಯುತ್ತಾರೆ ಎಂದಿದೆ. ಈ ಲಕ್ಷಾಂತರ ಜನರಲ್ಲಿ ನೀವು ಒಬ್ಬರಾಗಿದ್ದರೆ ನಿಮ್ಮ ನಡಿಗೆ ಮತ್ತಷ್ಟು ಹೆಚ್ಚಿಸಿಕೊಳ್ಳಿ. ಯಾಕಂದ್ರೆ ಉತ್ತಮ ಆರೋಗ್ಯಕ್ಕಾಗಿ ಮನುಷ್ಯ ನಿತ್ಯ ಕನಿಷ್ಠ 10 ಸಾವಿರ ಹೆಜ್ಜೆಯನ್ನಾದರೂ ನಡೆಯಬೇಕು. ಹೀಗೆ ನಡೆಯುವುದರಿಂದ ನಮಗೆ ಅನೇಕ ಆರೋಗ್ಯದ ಲಾಭಗಳಿವೆ.

ನಿತ್ಯ ಹೆಚ್ಚು ಹೆಚ್ಚು ನಡೆಯುವುದರಿಂದ ನಮ್ಮಲ್ಲಿ ಅನೇಕ ರೀತಿಯ ಆರೋಗ್ಯ ಸುಧಾರಣೆಗಳು ಕಾಣಿಸಿಕೊಳ್ಳುತ್ತವೆ. ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಸ್ಟ್ರೋಕ್​ನಂತಹ ಸಮಸ್ಯೆ. ಅತಿಹೆಚ್ಚು ರಕ್ತದೊತ್ತಡದ ಸಮಸ್ಯೆ, ಸಕ್ಕರೆ ಕಾಯಿಲೆ, ಸ್ಥೂಲಕಾಯ (ದಪ್ಪವಾಗಿರುವುದು), ಖಿನ್ನತೆ, ಬ್ರೀಸ್ಟ್ ಹಾಗೂ ಕೊಲೊನ್​ನಂತಹ ಕ್ಯಾನ್ಸರ್​​ಗಳನ್ನು ತಪ್ಪಿಸಬಹುದು.

ಇದನ್ನೂ ಓದಿ:ಯಾವ ಕಾರ್ಯಕ್ರಮಗಳಿಗೆ ಯಾವ ರೀತಿಯ ಶೂ ಹಾಕಿಕೊಂಡು ಹೋಗಬೇಕು? ಇಲ್ಲಿದೆ ನಿಮಗೆ ಇಷ್ಟವಾಗುವ ಟಿಪ್ಸ್‌!

publive-image

ನಿತ್ಯ ವಾಕಿಂಗ್​​ನಂತಹ ರೂಢಿಗಳು ಕೂಡ ಆಯಾ ವಯಸ್ಸಿಗೆ ತಕ್ಕಂತೆ ಇರುತ್ತದೆ. ನಿತ್ಯ ಇಷ್ಟೇ ಹೆಜ್ಜೆ ನಡೆಯಬೇಕು ಅನ್ನೋದು ಕೂಡ ಒಂದು ವಯಸ್ಸಿನ ಮೇಲೆ ನಿಗದಿಯಾಗಿರುತ್ತೆ. 18 ವರ್ಷದ ಮೇಲಿನವರು 4 ಸಾವಿರದಿಂದ 18 ಸಾವಿರ ಹೆಜ್ಜೆಗಳನ್ನು ನಡೆಯಬೇಕು ಎನ್ನುತ್ತಾರೆ ತಜ್ಞರು. 18ಕ್ಕಿಂತ ಕಡಿಮೆಯಿರುವವರು 10 ರಿಂದ 16 ಸಾವಿರ ಹೆಜ್ಜೆಗಳನ್ನಿಡಬೇಕು. ವಯಸ್ಸಿನಂತೆ ನಾವು ನಡೆಯುವುದು ನಮ್ಮ ಆರೋಗ್ಯದ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಅದರಲ್ಲೂ ಪುರಷರು ಅತಿಹೆಚ್ಚು ನಡೆಯುತ್ತಾರೆ ಎನ್ನುತ್ತದೆ ರೋಗ ನಿಯಂತ್ರಣ ಹಾಗೂ ನಿರ್ವಹಣೆ ಕೇಂದ್ರ. ಸದ್ಯದ ಜಗತ್ತಿನಲ್ಲಿ ಪುರುಷರಲ್ಲಿ ಮಕ್ಕಳು ಹಾಗೂ ಯುವಕರು ನಿತ್ಯ ಇಡುತ್ತಿರುವ ಹೆಜ್ಜೆಯ ಸಂಖ್ಯೆ 12 ಸಾವಿರದಿಂದ 16 ಸಾವಿರ ಅಂತಿದೆ. ಹೆಣ್ಣುಮಕ್ಕಳಲ್ಲಿ ಮಕ್ಕಳು ಹಾಗೂ ಯುವತಿಯರು 10 ಸಾವಿರದಿಂದ 12 ಸಾವಿರ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ಪತಿ ಉದ್ಯಮಿ, ಪತ್ನಿ ಚಿತ್ರನಟಿ; ದೆಹಲಿಯಲ್ಲಿದೆ 173 ಕೋಟಿ ರೂಪಾಯಿಯ ಬಂಗಲೆ, ಯಾರಿವರು? ಊಹಿಸಬಲ್ಲಿರಾ?

ಆಮೇಲೆ ನೀವು ಮಾಡುವ ಕೆಲಸವೂ ಕೂಡ ನಿಮ್ಮ ನಿತ್ಯ ನಡಿಗೆಯ ಹೆಜ್ಜೆಗಳನ್ನು ಲೆಕ್ಕ ಹಾಕುತ್ತದೆ. 2012ರಲ್ಲಿ ಜೆನ್ನಿ ಕೇಗ್ ಅನ್ನುವವರು ನಡೆಸಿದ ಸ್ಮಾಲ್ ರಿಸರ್ಚ್​ ಪ್ರಾಜೆಕ್ಟ್​ನಲ್ಲಿ ಆಸ್ಟ್ರೇಲಿಯಾದ 10 ಜನರು ಭಾಗವಹಿಸಿದ್ದರು. ಪ್ರತಿಯೊಬ್ಬರು ಕೂಡ ಬೇರೆ ಬೇರೆ ವೃತ್ತಿಯವರಾಗಿದ್ದರು. ಅಂದು ನಡೆಸಲಾದ ಅಧ್ಯಯನ ಆಯಾ ವೃತ್ತಿಯ ಮೇಲೆ ಅವರು ಎಷ್ಟು ಹೆಜ್ಜೆ ನಿತ್ಯ ನಡೆಯುತ್ತಾರೆ ಎಂಬುದು ತಿಳಿದು ಬರುತ್ತೆ ಎನ್ನಲಾಗಿದೆ. ಈ ಒಂದು ಸಂಶೋಧನೆಯಲ್ಲಿ ಬಾರ್, ರೆಸ್ಟೋರೆಂಟ್​ನಂತಹ ಜಾಗಗಳಲ್ಲಿ ಕೆಲಸ ಮಾಡವ ವೇಟರ್​ಗಳು ಅತಿಹೆಚ್ಚು ನಡೆಯುತ್ತಾರೆ ಎಂದು ತಿಳಿದು ಬಂದಿದೆ.

publive-image

ಈ ಒಂದು ಸಂಶೋಧನೆಯ ಪ್ರಕಾರ ವೇಟರ್​ಗಳು ನಿತ್ಯ 22,778, ನರ್ಸ್​ಗಳು 16,390, ರೆಟೇಲ್​ ಕೆಲಸಗಾರರು 14,660, ರೈತರು 14,037, ಮನೆಯಲ್ಲಿಯೇ ಇರುವ ಪೋಷಕರು 13,813, ಶಿಕ್ಷಕರು 12,564, ವ್ಯಾಪರಿಗಳು 11,585, ಕಟಿಂಗ್​ ಮಾಡುವವರು 9,209, ಕಚೇರಿ ಕೇಂದ್ರಗಳಲ್ಲಿ ಕೆಲಸ ಮಾಡುವವರು 7,570 ಕಾಲ್​ ಸೆಂಟರ್​ನಲ್ಲಿ ಕೆಲಸ ಮಾಡುವವರು 6,618 ಹೆಜ್ಜೆಗಳನ್ನು ನಿತ್ಯ ನಡೆಯುತ್ತಾರೆ ಎಂಬ ಅಂದಾಜನ್ನು ಈ ಸಂಶೋಧನೆ ಮಾಡಿದೆ.

ಇದನ್ನೂ ಓದಿ:ಕರಿಮೆಣಸಿನಲ್ಲಿದೆ ಹಲವು ಆರೋಗ್ಯಕಾರಿ ಅಂಶಗಳು; ಯಾವೆಲ್ಲಾ ಸಮಸ್ಯೆಗಳಿಗೆ ರಾಮಬಾಣ ಗೊತ್ತಾ?

ಇನ್ನು ದೇಶಗಳ ಆಧಾರದ ಮೇಲೆಯೂ ಕೂಡ ಟಾಪ್​ 10 ಪಟ್ಟಿಗಳನ್ನು ಮಾಡಲಾಗಿದೆ. ಯಾವ ದೇಶದಲ್ಲಿ ಜನರು ಹೆಚ್ಚು ಹೆಚ್ಚು ನಡೆಯುತ್ತಾರೆ ಎಂಬ ಅಂದಾಜು ಮಾಡಲಾಗಿದೆ. ಇದರ ಪ್ರಕಾರ ಹಾಂಗ್​ಕಾಂಗ್​ ವಾಸಿಗಳು ಹೆಚ್ಚು ನಡೆಯುತ್ತಾರೆ ಎಂಬ ವಿಷಯ ತಿಳಿದು ಬಂದಿದ್ದು. ಹಾಂಗಕಾಂಗ್ ಮೊದಲ ಸ್ಥಾನದಲ್ಲಿದೆ. ಇನ್ನೂ ಭಾರತ 9ನೇ ಸ್ಥಾನದಲ್ಲಿದ್ರೆ, ಅಮೆರಿಕಾ 8ನೇ ಸ್ಥಾನದಲ್ಲಿದೆ. ಕೊನೆಯ ಸ್ಥಾನದಲ್ಲಿ ಇಂಡೋನೇಷ್ಯಾ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment