ವಂದೇ ಭಾರತ್​, ಶತಾಬ್ದಿ, ತೇಜಸ್.. ಭಾರತದ ಈ ರೈಲುಗಳು 1ಕಿಮೀ ಓಡಲು ಎಷ್ಟು ಯುನಿಟ್​ ವಿದ್ಯುತ್​ ಬೇಕು?

author-image
Gopal Kulkarni
Updated On
ವಂದೇ ಭಾರತ್​, ಶತಾಬ್ದಿ, ತೇಜಸ್.. ಭಾರತದ ಈ ರೈಲುಗಳು 1ಕಿಮೀ ಓಡಲು ಎಷ್ಟು ಯುನಿಟ್​ ವಿದ್ಯುತ್​ ಬೇಕು?
Advertisment
  • ಎಲೆಕ್ಟ್ರಿಕ್​ ರೈಲುಗಳ 1ಕಿಮೀ ಸಂಚಾರಕ್ಕೆ ಬೇಕಾಗುವ ವಿದ್ಯುತ್ ಎಷ್ಟು?
  • ಡಿಸೇಲ್​ ರೈಲುಗಳಿಗೆ ಹೋಲಿಸಿದರೆ ಯಾವುದು ದುಬಾರಿ ಯಾವುದು ಅಗ್ಗ?
  • ಒಟ್ಟು 1 ಕಿಲೋ ಮೀಟರ್ ಪ್ರಯಾಣಕ್ಕೆ ತಗಲುವ ಒಟ್ಟು ವೆಚ್ಚ ಎಷ್ಟು ಗೊತ್ತಾ?

ನರೇಂದ್ರ ಮೋದಿ 2014ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಾಗಿನಿಂದ ಭಾರತೀಯ ರೈಲ್ವೆಯಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಿವೆ. ಮೊದಲ ಬಾರಿ ಭಾರತದಲ್ಲಿ ಸೆಮಿ ಸ್ಪೀಡ್ ಟ್ರೈನ್​ಗಳ ಓಡಾಟ ಆರಂಭವಾಗಿದ್ದು ನರೇಂದ್ರ ಮೋದಿ ಪ್ರಧಾನಿಯಾಗಿದ್ದ ಕಾಲದಲ್ಲಿಯೇ. ವಂದೇ ಭಾರತ್​ ರೈಲು ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ನೆಟ್ಟಿತು. ರೈಲ್ವೆ ವ್ಯವಸ್ಥೆಯ ಆಧುನೀಕರಣ ಹಾಗೂ ಮೂಲಸೌಕರ್ಯಗಳ ಸುಧಾರಣೆಯ ಗುರುತಾಗಿ ನಿಂತಿಕೊಂಡಿತು. ಫೆಬ್ರವರಿ 15, 2019ರಲ್ಲಿ ಮೊದಲ ಬಾರಿ ಭಾರತದಲ್ಲಿ ವಂದೇ ಭಾರತ್​ ಎಕ್ಸ್​ಪ್ರೆಸ್ ಓಡಾಡಲು ಶುರು ಮಾಡಿತು . ಸದ್ಯ ದೇಶದಲ್ಲೀಗ ಒಟ್ಟು 50 ವಂದೇ ಭಾರತ್ ರೈಲುಗಳು ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿವೆ.

publive-image

ಭಾರತೀಯ ರೈಲ್ವೆ ಇಲಾಖೆ ಹೇಳುವ ಪ್ರಕಾರ ಈ ರೈಲುಗಳು ಈಗಾಗಲೇ ಸರಿಸುಮಾರು 40 ಸಾವಿರ ಟ್ರಿಪ್​ಗಳ ಪ್ರಯಾಣವನ್ನು ಮುಗಿಸಿವೆ ಅಂತೆ ಒಟ್ಟು 4 ಕೋಟಿ ಪ್ರಯಾಣಿಕರು ಈ ರೈಲುಗಳಲ್ಲಿ ಪ್ರಯಾಣ ಮಾಡಿದ್ದಾರಂತೆ. ವಂದೇ ಭಾರತ್ ರೈಲಿನ ಸಂಪರ್ಕವನ್ನು ಒಟ್ಟು 24 ರಾಜ್ಯಗಳಲ್ಲಿ ಒಟ್ಟು 280 ಜಿಲ್ಲೆಗಳಿಗೆ ಸೇವೆ ನೀಡುವ ನಿಟ್ಟಿನಲ್ಲಿ ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಇದನ್ನೂ ಓದಿ:ದೇಶದಲ್ಲಿಯೇ ಅತಿಹೆಚ್ಚು ಚಹಾ ಪ್ರಿಯರು ಇರುವ ರಾಜ್ಯ ಯಾವುವು! ಕರ್ನಾಟಕ, ತಮಿಳುನಾಡು ಅಲ್ಲವೆ ಅಲ್ಲ! ಮತ್ಯಾವುದು?

ಸದ್ಯ ವಂದೇ ಭಾರತ್ ರೈಲುಗಳ ಜನಪ್ರಿಯತೇ ಯಾವ ಮಟ್ಟಿಗೆ ಹೋಗಿದೆ ಅಂದ್ರೆ ಚೀಲಿ, ಕೆನಡಾ ಮತ್ತು ಮಲೇಷಿಯಾದಂತಹ ದೇಶಗಳು ಈಗ ನಮ್ಮ ವಂದೇ ಭಾರತ್ ರೈಲುಗಳನ್ನು ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿವೆ.

ಇನ್ನೊಂದು ಪ್ರಮುಖ ವಿಚಾರವೆಂದರೆ ಭಾರತದ ಎಲ್ಲಾ ರೈಲುಗಳು ಈಗ ಡಿಸೇಲ್ ಬದಲು ವಿದ್ಯುತ್​ಶಕ್ತಿ ಮೂಲಕ ಓಡುತ್ತವೆ. ಇವುಗಳ ಓಡಾಟಕ್ಕೆ ಬೃಹತ್ ಮಟ್ಟದಲ್ಲಿ ವಿದ್ಯುತ್​ ಶಕ್ತಿಯ ಅವಶ್ಯಕತೆ ಇದೆ. ಡಿಸೇಲ್ ಇಂಜಿನ್ ರೈಲ್ವೆಗಳಿಗೆ ಹೋಲಿಸಿ ನೋಡಿದಾಗ ಎಲೆಕ್ಟ್ರಿಕ್ ಟ್ರೇನ್​​ಗಳ ಸಂಚಾರ ಅಗ್ಗ . ಈ ಟ್ರೇನ್​ಗಳು 1 ಕಿಲೋ ಮೀಟರ್ ಓಡಲು ಸರಿಸುಮಾರು 20 ಯುನಿಟ್​ಗಳಷ್ಟು ವಿದ್ಯುತ್ ಶಕ್ತಿ ಬೇಕಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹುಡುಗಿ ಜನ್ಮದಿನಾಂಕ ಕಡ್ಡಾಯ.. ಸರ್ಕಾರದ ಆದೇಶ! ಕಾರಣವೇನು?

ಭಾರತೀಯ ರೈಲ್ವೆ ಪ್ರತಿ ಯುನಿಟ್ ವಿದ್ಯುತ್​ಗೆ 6.50 ರೂಪಾಯಿಯನ್ನು ಖರ್ಚು ಮಾಡುತ್ತದೆ. ಅಂದ್ರೆ ಸುಮಾರು ಒಂದು ಕಿಲೋ ಮೀಟರ್ ಈ ರೈಲುಗಳು ಓಡಲು ಸುಮಾರು 130 ರೂಪಾಯಿ ಖರ್ಚಾಗುತ್ತದೆ. ಒಂದು ವೇಳೆ ನಾವು ಡಿಸೇಲ್ ಇಂಜಿನ್​​ಗೆ ಹೋಲಿಸಿ ನೋಡಿದ್ರೆ ಪ್ರತಿ ಕಿಲೋ ಮೀಟರ್ ರೈಲು ಸಂಚಾರಕ್ಕೆ ಸುಮಾರು 3.5 ರಿಂದ 4 ಲೀಟರ್ ಡಿಸೇಲ್ ಬೇಕಾಗುತ್ತಿತ್ತು. ಅಂದ್ರೆ ಈ ರೈಲುಗಳು ಒಂದು ಕಿಲೋ ಮೀಟರ್​ ಸಂಚಾರಕ್ಕೆ ಸುಮಾರು 350 ರಿಂದ 400 ರೂಪಾಯಿ ಖರ್ಚಾಗುತ್ತಿತ್ತು ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment