65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!

author-image
Gopal Kulkarni
Updated On
65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!
Advertisment
  • 1960ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾಗೆ ಹಾಕಿದ ಬಂಡವಾಳ ಎಷ್ಟು?
  • ಆ ಒಂದು ವಿಶೇಷ ಹಾಡನ್ನು 105 ಬಾರಿ ಬರೆಸಲಾಗಿದ್ದಾದರೂ ಏಕೆ?
  • 60ರ ದಶಕದ ಈ ಸಿನಿಮಾ ನಿರ್ಮಾಣ ಮಾಡಲು ಎಷ್ಟು ವರ್ಷ ಬೇಕಾಯ್ತು?

ನಾವು ಸಂಜಯ್ ಲೀಲಾ ಬನ್ಸಾಲಿ ಸಿನಿಮಾವನ್ನು ನೋಡಿದ್ದೇವೆ. ಭವ್ಯವಾದ ಸೆಟ್​ಗಳಿಗೆ ಹಾಗೂ ಲೈಟಿಂಗ್​​ಗಳಿಗೆ ಅವರ ಸಿನಿಮಾಗಳು ಹೆಸರುವಾಸಿ. ಇನ್ನು ಕನ್ನಡಕ್ಕೆ ಬಂದ್ರೆ ಒಂದು ಕಾಲದಲ್ಲಿ ಹಾಡಿನ ಶೂಟಿಂಗ್​ಗಳನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸೆಟ್​ ದೇಶದಲ್ಲಿಯೇ ಸಿನಿ ಪ್ರಿಯರ ಕಣ್ಮನ ಸೆಳೆಯುತ್ತಿತ್ತು. ಈ ಕಾಲದಲ್ಲಿ ರಾಜಮೌಳಿಯವರ ಬಾಹುಬಲಿ ಸಿನಿಮಾ ಇದೇ ದೊಡ್ಡ ದೊಡ್ಡ ಸೆಟ್ ಹಾಗೂ ವಿಎಫ್​ಎಕ್ಸ್ ಗ್ರಾಫಿಕ್ಸ್​ಗಳಿಂದ ಮೈಮನ ಸೆಳೆದಿತ್ತು.

ಹಾಗಂತ ಈ ದೊಡ್ಡ ದೊಡ್ಡ ಸೆಟ್​ಗಳಲ್ಲಿ ಸಿನಿಮಾ ಶೂಟಿಂಗ್ ಮಾಡುವುದು ಇತ್ತೀಚೆಗೆ ಬಂದ ರೂಢಿಯಲ್ಲ. ಭಾರತದಲ್ಲಿ ಯಾವಾಗಿನಿಂದ ಸಿನಿಮಾ ನಿರ್ಮಾಣದ ಕಾರ್ಯ ಉದಯವಾಯಿತೋ ಅಂದಿನಿಂದಲೂ ಇಂತಹದೊಂದು ಟ್ರೆಂಡ್ ಜಾರಿಯಲ್ಲಿಯೇ ಇದೆ. ಸರಿಸುಮಾರು 65 ವರ್ಷಗಳ ಹಿಂದೆ ಯಾವಾಗ ಮೊಘಲ್ ಎ ಅಜಮ್ ಸಿನಿಮಾ ಶೂಟಿಂಗ್ ರೆಡಿಯಾಗಿತ್ತೋ, ಆಗ ಒಂದು ಹಾಡಿನ ಶೂಟಿಂಗ್​ಗಾಗಿ ಲಕ್ಷಾಂತರ ರೂಪಾಯಿ ನೀರಿನಂತೆ ಹರಿಸಲಾಗಿತ್ತು. ಈ ಒಂದು ಸಿನಿಮಾದ ಶೂಟಿಂಗ್​ ಶೀಶ್ ಮಹಲ್​ನಲ್ಲಿ ಮಾಡಲಾಗಿತ್ತು. ಇದರ ಹಿಂದೆ ಏನೆಲ್ಲಾ ಕಥೆ ಇದೆ. ಒಂದು ಹಾಡು ಏನೆಲ್ಲಾ ಮಾಡಿಸಿತ್ತು ಎಂಬುದರ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

ಇದನ್ನೂ ಓದಿ: ಭಾರತದಲ್ಲಿ ಅತಿಹೆಚ್ಚು ದ್ರಾಕ್ಷಿ ಉತ್ಪಾದನೆ ಮಾಡುವ 2ನೇ ಅತಿದೊಡ್ಡ ರಾಜ್ಯ ಕರ್ನಾಟಕ.. ನಂಬರ್ ಒನ್ ಯಾವುದು?

1960 ರಲ್ಲಿ ಬಿಡುಗಡೆಯಾದ ಮುಘಲ ಎ ಅಜಮ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಲು ತೆಗೆದುಕೊಂಡಿದ್ದು ಬರೋಬ್ಬರಿ 14 ವರ್ಷ. ಸಿನಿಮಾದ ಒಂದು ಹಾಡಿಗಾಗಿ ಸೆಟ್​ ಸಿದ್ಧ ಪಡಿಸಲು ಸುಮಾರು ಎರಡು ವರ್ಷ ಬೇಕಾಗಿತ್ತು. ಹಾಡಿನ ಹೆಸರು ‘ಜಬ್ ಪ್ಯಾರ ಕಿಯಾ ತೋ ಡರನಾ ಕ್ಯಾ‘ ಈ ಹಾಡಿಗಾಗಿ ಸಿನಿಮಾ ನಟಿ ಮಧುಬಾಲಾ ನೃತ್ಯ ಮಾಡುತ್ತಿರುವಾಗ ಶೀಶ ಮಹಲ್​ನಲ್ಲಿದ್ದ ಎಲ್ಲಾ ಕನ್ನಡಿಯಲ್ಲಿಯು ಕೂಡ ಅವರು ಕಾಣಬೇಕಿತ್ತು. ಆದ್ರೆ ಇದು ಸಿನಿಮಾ ಮಾಡುವವರಿಗೆ ಅಷ್ಟು ಸರಳವಾಗಿ ಇರಲಿಲ್ಲ. ಕಡೆಗೆ ಒಂದು ಸಮಯದಲ್ಲಿ ಇದು ಆಗುವ ಮಾತೇ ಅಲ್ಲ ಎನ್ನಿಸುವ ಮಟ್ಟಕ್ಕೆ ಹೋಗಿತ್ತು. ಹಾಲಿವುಡ್​ನಿಂದ ಎಕ್ಸ್​ಪರ್ಟ್​ಗಳನ್ನು ಕರಿಸಲಾಯ್ತು. ಆದರೆ ಅವರಿಗೂ ಕೂಡ ಇದು ಸಾಧ್ಯವಾಗಲಿಲ್ಲ. ಕೊನೆಗೆ 15 ಲಕ್ಷ ರೂಪಾಯಿಂದ ಸಿದ್ಧವಾಗಿದ್ದ ಶೀಶ್​ ಮಹಲ್ (ಗಾಜಿನ ಅರಮನೆ)ಯನ್ನು ಕೆಡವುವರೆಗೂ ಹೋಗಿದ್ದರು.

ಸಿನಿಮಾದ ಸಿನಿಮಾಟೋಗ್ರಾಫರ್ ಆರ್​ಡಿ ಮಾಥುರ್​ ಒಂದು ಉಪಾಯವನ್ನು ಹೇಳಿದರು. ಕ್ಯಾಮಾರ ಆನ್ ಆಗುತ್ತಿದ್ದಂತೆ ಕನ್ನಡಿಯಲ್ಲಿ ಲೈಟ್​ ಬೀಳಲು ಆರಂಭವಾಗುತ್ತಿತ್ತು. ಅದನ್ನು ತಡೆಯಲು ರಿಫ್ಲೆಕ್ಟರ್​ನ್ನು ತರಲಾಯಿತು. ಅದು ಕೂಡ ಕೈಕೊಟ್ಟಿತು. ಕೊನೆಗೆ ಮಾಥುರ್ ಅವರು ಒಂದು ಸೆಟ್​ನಲ್ಇಲ ಒಂದು ಕೋಣೆಯನ್ನು ಹುಡುಕಿದರು ಅದರಿಂದ ಶೂಟಿಂಗ್ ಸರಳವಾಗುವಂತಾಯಿತು. ನಂತರ ಮಧುಬಾಲಾ ಅವರು ಅನಾರಕಲಿ ಪಾತ್ರದಲ್ಲಿ ರಂಗು ರಂಗಿನ ಕನ್ನಡಿಯಲ್ಲಿ ಅಲೆದಾಡುವುದು ಕಂಡು ಬಂತು. ಕೊನೆಗೆ ಅದು ಹಿಂದಿ ಸಿನಿಮಾದ ಇತಿಹಾಸದಲ್ಲಿಯೇ ಒಂದು ಅನೂಹ್ಯ ದೃಶ್ಯವಾಗಿ ದಾಖಲಾಯಿತು.

ಇದನ್ನೂ ಓದಿ: ಹನಿಟ್ರ್ಯಾಪ್‌ ರಹಸ್ಯ ಸ್ಫೋಟ.. ಕೊನೆಗೂ ತನಿಖೆಗೆ ಮುಂದಾದ ರಾಜ್ಯ ಸರ್ಕಾರ; ಗೃಹ ಸಚಿವರು ಏನಂದ್ರು?

ಅಂದಿನ ಕಾಲದಲ್ಲಿ ಈ ಸಿನಿಮಾಗಾಗಿ ಸುಮಾರು 1.5 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಆ ಕಾಲದಲ್ಲಿ ದುಬಾರಿ ಸಿನಿಮಾ ಅಂದ್ರೆ ಅಬ್ಬಬ್ಬಾ ಅಂದ್ರೆ 15 ಲಕ್ಷ ರೂಪಾಯಿ ಬಂಡವಾಳ ಹೂಡುತ್ತಿದ್ದರು. ಸಿನಿಮಾದಲ್ಲಿ ಎಲ್ಲ ಕಲಾವಿದರು ಹಾಕಿಕೊಂಡ ಪೋಷಾಕುಗಳನ್ನು ದೆಹಲಿಯಲ್ಲಿ ವಿಶೇಷವಾಗಿ ಹೋಲಿಸಿಕೊಂಡು ಬರಲಾಗುತ್ತಿತ್ತು ಈ ಸಿನಿಮಾದಲ್ಲಿ ಒಟ್ಟು 2 ಸಾವಿರ ಒಂಟೆ ಹಾಗೂ 4 ಸಾವಿರ ಕುದುರೆಗಳನ್ನು ಬಳಸಲಾಗಿತ್ತು.

ಜಬ್ ಪ್ಯಾರ್ ಕಿಯಾ ತೊ ಡರನಾ ಕ್ಯಾ ಹಾಡು ಈ ಸಿನಿಮಾದ ಅತ್ಯಂತ ದುಬಾರಿ ಹಾಡಾಗಿ ಪಾರ್ಪಟ್ಟಿತ್ತು. ಈ ಹಾಡನ್ನು ಸಿನಿಮಾ ನಿರ್ದೇಶಕರು ಒಪ್ಪುವ ಮೊದಲು ಸುಮಾರು 105 ಬಾರಿ ಬೇರ ಬೇರೆ ಗೀತೆಗಳನ್ನು ಬರೆದು ಕೊಡಲಾಗಿತ್ತು ಕೊನೆಗೆ 106ನೇ ಹಾಡಾದ ಪ್ಯಾರ್​ ಕಿಯಾ ತೋ ಡರನಾ ಕ್ಯಾ ಹಾಡು ಫೈನಲ್ ಆಯ್ತು. ಆಗಿನ ಕಾಲದಲ್ಲಿ ಮಿಕ್ಸಿಂಗ್​ನ ವ್ಯವಸ್ಥೆ ಇರಲಿಲ್ಲ. ಹೀಗಾಗಿ ನೌಶಾದ್​ ಈ ಹಾಡಿನಲ್ಲಿ ಪ್ರತಿಧ್ವನಿಯನ್ನು ಮೂಡಿಸುವ ಸಲುವಾಗಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರನ್ನು ಸೆಟ್​ ವಾಶ್​ರೂಮ್​​ನಲ್ಲಿ ಕೂರಿಸಿ ಈ ಹಾಡನ್ನು ಹಾಡಿಸಲಾಗಿತ್ತು.

ಇದನ್ನೂ ಓದಿ: ಮಂಡ್ಯ ರೈತರಿಗೆ ಸಿಹಿ ಸುದ್ದಿ.. ಕೃಷಿ ವಿಶ್ವವಿದ್ಯಾಲಯಕ್ಕೆ ಸಚಿವ ಚೆಲುವರಾಯಸ್ವಾಮಿ ಮಹತ್ವದ ಹೆಜ್ಜೆ!

Advertisment