/newsfirstlive-kannada/media/post_attachments/wp-content/uploads/2024/10/MASOOR-DAL-BENEFITS.jpg)
ತೊಗರಿಬೇಳೆ ಹಾಗೂ ಅಕ್ಕಿ ಕರ್ನಾಟಕದ ಹಾಗೂ ಭಾರತದ ಜೀವನಾಡಿಯೇ ಆಗಿವೆ. ಅವಿಲ್ಲದೇ ಊಟವೇ ಇಲ್ಲ ಅನ್ನುವಂತಹ ಭಾವನಾತ್ಮಕ ನಂಟು ಇದೆ. ಬಿಸಿ ಬಿಸಿ ಅನ್ನ, ತೊಗರಿಬೇಳೆ ಸಾರು ಮೇಲೆ ಒಂದಿಷ್ಟು ತುಪ್ಪ ಹಾಕಿಕೊಂಡು ಊಟ ಮಾಡಿದ್ರೆ ಅದರ ಗಮ್ಮತ್ತೇ ಬೇರೆ. ಆದ್ರೆ ತೊಗರಿಬೇಳೆಯನ್ನು ಹೆಚ್ಚು ಉಪಯೋಗಿಸುವುದಕ್ಕಿಂತ ಕೆಂಪು ಬೇಳೆ ಅಥವಾ ಮಸೂರ್ ಬೇಳೆ ಉಪಯೋಗಿಸುವುದು ಹೆಚ್ಚು ಆರೋಗ್ಯಕರ ಎಂದು ಹೇಳಲಾಗುತ್ತದೆ. ತೋಗರಿಬೇಳೆಗಿಂತ ಮಸೂರ್ ಬೇಳೆಯಲ್ಲಿ ಹೆಚ್ಚು ಪೋಷಕಾಂಶಗಳು ನಮಗೆ ಲಭ್ಯವಾಗುತ್ತವೆ. ಹೀಗಾಗಿ ವಾರದಲ್ಲಿ ಎರಡು ದಿನವಾದರೂ ನಾವು ಮಸೂರ್ ಬೇಳೆಯನ್ನು ನಮ್ಮ ಆಹಾರದಲ್ಲಿ ಉಪಯೋಗಿಸುವುದು ಒಳ್ಳೆಯದು ಎಂದು ಆಹಾರ ತಜ್ಞರು ಹೇಳುತ್ತಾರೆ. ಮಸೂರ್ ಬೇಳೆ ಪೋಷಕಾಂಶಗಳ ಪ್ಯಾಕ್ಗಳನ್ನೇ ಒಳಗೊಂಡಿದೆಯಂತೆ. ವಾರದಲ್ಲಿ ಎರಡು ದಿನ ಈ ಬೇಳೆಯನ್ನು ನಾವು ಅಡುಗೆಯಲ್ಲಿ ಬಳಸಿದಲ್ಲಿ ಅನೇಕ ಆರೋಗ್ಯಕರ ಅನಕೂಲಗಳು ಇವೆ.
ಇದನ್ನೂ ಓದಿ: ತೂಕ ಇಳಿಸಲು ಯಾವುದು ಒಳ್ಳೆಯದು? ಜೇನು ತುಪ್ಪವಾ ಇಲ್ಲವೇ ಬೆಲ್ಲವಾ?
ಮಸೂರ್ ದಾಲ್ ಅತಿಹೆಚ್ಚು ಪೋಷಕಾಂಶ ಹಾಗೂ ಪೌಷ್ಠಿಕಾಂಶ ಹೊಂದಿರುವ ಸಸ್ಯಾಹಾರಿ ಪದಾರ್ಥ. ಇದು ಸ್ನಾಯುಗಳ ಬೆಳವಣಿಗೆಗೆ ಬಹಳ ಸಹಾಯಕ ಎಂದು ವೈದ್ಯರು ಹಾಗೂ ಆಹಾರ ತಜ್ಞರು ಹೇಳುತ್ತಾರೆ. ಇದರಿಂದ ಸಿದ್ಧವಾದ ಆಹಾರವನ್ನು ಆಗಾಗ ಬಳಸುವುದರಿಂದ ದೇಹವನ್ನು ಹೆಚ್ಚು ಶಕ್ತಿಯುತವಾಗಿ ಇಡುವಲ್ಲಿ ಇದು ಸಹಾಯಕಾರಿಯಾಗಿ ನಿಲ್ಲುತ್ತವೆ. ಈ ಒಂದು ಬೇಳೆ ಅತಿಹೆಚ್ಚು ಫೈಬರ್ ಅಂಶವನ್ನು ಹೊಂದಿರುವುದರಿಂದ ಪಚನಕ್ರಿಯೆಗೆ ತುಂಬಾ ಅನಕೂಲ. ಪಚನಕ್ರಿಯೆಯನ್ನು ಸರಳಗೊಳಿಸುವುದರಿಂದ ಮಲಬದ್ಧತೆಯಂತ ಸಮಸ್ಯೆಯಿಂದ ಈ ಬೇಳೆ ಪಾರು ಮಾಡುತ್ತದೆ.
ಇದನ್ನೂ ಓದಿ: ಹೆಣ್ಮಕ್ಕಳಲ್ಲಿ ಹೊಸ ಟ್ರೆಂಡ್.. ಏಕಾಂಗಿಯಾಗಿ ಪ್ರಪಂಚ ಸುತ್ತಿದ್ದಾರೆ, ಆದರೆ..!
ಇದರಲ್ಲಿ ಕಡಿಮೆ ಕ್ಯಾಲರೀಸ್ ಹಾಗೂ ಹೆಚ್ಚು ಫೈಬರ್ ಅಂಶ ಇರುವುದರಿಂದ ಇದು ಹೆಚ್ಚು ಕಾಲ ಹೊಟ್ಟೆಯಲ್ಲಿ ನಿಲ್ಲುತ್ತದೆ. ಹೀಗಾಗಿ ಪದೇ ಪದೇ ಹಸಿವಿನ ಸಂಕಟ ಆಗದಂತೆ ನೋಡಿಕೊಳ್ಳುತ್ತದೆ. ಅದು ಮಾತ್ರವಲ್ಲ ತೂಕ ನಿರ್ವಹಣೆಯಲ್ಲಿಯೂ ಕೂಡ ಈ ಬೇಳೆ ತುಂಬಾ ಸಹಾಯಕವಾಗಿ ಪರಿಣಾಮ ಬೀರುತ್ತದೆ ಎಂದೇ ಹೇಳಲಾಗುತ್ತದೆ.
ಇದರಲ್ಲಿರುವ ಕೈಬ್ರೋಹೈಡ್ರೇಟ್ಸ್ ನಿಧಾನವಾಗಿ ಪಚನವಾಗುವುದರಿಂದ ಇದು ಸಕ್ಕರೆ ಕಾಯಿಲೆ ಬರದಂತೆ ತಡೆಯುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಧಾನವಾಗಿ ಬಿಡುಗಡೆಯಾಗುವುದರಿಂದ ಇದು ಸಕ್ಕರೆ ಕಾಯಿಲೆ ಇರುವುವರು ಹೆಚ್ಚು ಹೆಚ್ಚು ಸೇವಿಸುವುದರಿಂದ ಒಳ್ಳೆಯದು. ಅದು ಮಾತ್ರವಲ್ಲ ಈ ಬೇಳೆಯಲ್ಲಿ ಹೇರಳವಾಗಿ ಪೋಟ್ಯಾಶಿಯಂ, ಮ್ಯಾಗ್ನೆಶಿಯಂ, ಫೊಲೇಟ್ನಂತಹ ಪೋಷಕಾಂಶಗಳು ಇರುವುದದರಿಂದ ಇದು ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯದು ಎಂದು ಹೇಳಲಾಗುತ್ತದೆ. ಒಟ್ಟಾರೆ ತೋಗರಿಬೇಳೆಗಿಂತ ಅತಿಹೆಚ್ಚು ಪೋಷಕಾಂಶಗಳು, ಪೌಷ್ಠಿಕಾಂಶಗಳನ್ನು ಮಸೂರ್ ಬೇಳೆ ಹೊಂದಿದೆ. ಹೀಗಾಗಿ ಕನಿಷ್ಠ ವಾರದಲ್ಲಿ ಎರಡು ಬಾರಿಯಾದ್ರೂ ನೀವು ಮಸೂರ್ ಬೇಳೆಯಿಂದ ತಯಾರಾದ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ