/newsfirstlive-kannada/media/post_attachments/wp-content/uploads/2025/04/PAKISTAN-WAQF-BOARD.jpg)
ಸದ್ಯ ಭಾರತದಲ್ಲಿ ವಕ್ಫ್ ಬೋರ್ಡ್ನ ಗದ್ದಲವೇ ಹೆಚ್ಚಾಗುತ್ತಿದೆ. ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ಈಗಾಗಲೇ ಭಾರತದ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು. ರಾಜ್ಯಸಭೆಯಲ್ಲಿ ಬಿಲ್ ಪಾಸ್ ಆಗುವುದು ಬಾಕಿ ಇದೆ. ಸದ್ಯ ಭಾರತದ ವಕ್ಫ್ ಬೋರ್ಡ್ ಬಳಿ ಸುಮಾರು 9.40 ಲಕ್ಷ ಎಕರೆ ಭೂಮಿಯಿದೆ ಎಂಬ ಬಗ್ಗೆ ಎಲ್ಲರಿಗೂ ಈಗ ಗೊತ್ತಿರುವ ವಿಷಯ. ರೈಲ್ವೆ, ಸೇನೆ ಬಳಿಕ ದೇಶದಲ್ಲಿ ಅತಿಹೆಚ್ಚು ಭೂಮಿ ವಕ್ಫ್ ಕಬ್ಜಾದಲ್ಲಿದೆ. ಹಿಂದೂಗಳು ಬಹುಸಂಖ್ಯಾತ ರಾಷ್ಟ್ರವಾದ ಭಾರತದಲ್ಲಿಯೇ ವಕ್ಫ್ ಬೋರ್ಡ್ ಬಳಿ ಇಷ್ಟೊಂದು ಭೂಮಿ ಇರುವಾಗ. ಇನ್ನು ಮುಸ್ಲಿಂಮರೇ ಬಹುಸಂಖ್ಯಾತರಾಗಿರುವ ಪಾಕಿಸ್ತಾನದ ವಕ್ಫ್ ಬಳಿ ಎಷ್ಟು ಭೂಮಿಯಿದೆ? ಈ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಪಾಕಿಸ್ತಾನದಲ್ಲಿ ಔಪಚಾರಿಕವಾಗಿ ವಕ್ಫ್ ಬೋರ್ಡ್ನ್ನು ವಕ್ಫ್ ಬೋರ್ಡ್ ಎಂದು ಕರೆಯುವುದಿಲ್ಲ ಅದನ್ನು ಔಕಾಫ್ ವಿಭಾಗ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಪಾಕಿಸ್ತಾನದಲ್ಲಿ 1960ರಲ್ಲಿ ಮೊದಲ ಬಾರಿಗೆ ವಕ್ಫ್ ಆಸ್ತಿಯನ್ನು ನಿರ್ವಹಣೆ ಮಾಡುವ ಮೊದಲ ಹೆಜ್ಜೆಯನ್ನಿಡಲಾಯಿತು. 1976ರಲ್ಲಿ ಔಕಾಫ್ ಅಧಿನಿಯಮ ಜಾರಿಗೆ ಬಂತು. ಈ ಅಧಿನಿಯಮದ ಪ್ರಕಾರ ಔಕಾಫ್ಗೆ ಸೇರಿದ ಆಸ್ತಿಯ ಮೇಲೆ ಸರ್ಕಾರ ತನ್ನ ಸಂಪೂರ್ಣ ಹಿಡಿತವನ್ನು ಹೊಂದಿತು ಮತ್ತು ಔಕಾಫ್ ವಿಭಾಗಕ್ಕೆ ಇದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಯ್ತು.
ಇದನ್ನೂ ಓದಿ:15 ದೇಶಗಳಿಗೆ ಡಬಲ್ ಶಾಕ್ ಕೊಟ್ಟ ಡೊನಾಲ್ಡ್ ಟ್ರಂಪ್ ಸುಂಕ; ಭಾರತಕ್ಕೆ ಎಷ್ಟು ನಷ್ಟ?
ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿಯ ನಿರ್ವಹಣೆಯನ್ನು evacuee trust property board ಮತ್ತು provincial auqaf department ಗೆ ನೀಡಲಾಯ್ತು. ಸಿಂಧ, ಪಂಜಾಬ್, ಬಲೂಚಿಸ್ತಾನ್, ಕೈಬರ್ ಖೈಬರ್ ಪಖ್ತುಂಖ್ವಾಗಳಲ್ಲಿ ಬೇರೆ ಬೇರೆ ಔಕಾಫ್ ಬೋರ್ಡ್ಗಳು ಕಾರ್ಯನಿರ್ವಹಿಸುತ್ತವೆ. ಮಸೀದಿ, ದರ್ಗಾ, ಸ್ಮಶಾನ ಮತ್ತು ಇತರ ಧಾರ್ಮಿಕ ಸ್ಥಳಗಳ ನಿರ್ವಹಣೆ ಹಾಗೂ ರಕ್ಷಣಾ ಕಾರ್ಯವನ್ನು ಈ ವಿಭಾಗಗಳಿಗೆ ಜವಾಬ್ದಾರಿಯಾಗಿ ನೀಡಲಾಯ್ತು. ದಾನ, ಬಾಡಿಗೆ ಇಲ್ಲವೇ ಚಂದಾ ರೀತಿಯಲ್ಲಿ ಬಂದ ಭೂಮಿಯನ್ನು ಧಾರ್ಮಿಕ ಶಿಕ್ಷಣಕ್ಕೆ, ಬಡವರ ಉನ್ನತಿಗೆ ಮತ್ತು ಆರೋಗ್ಯ ಸೇವೆಗಳಿಗಾಗಿ ಮೀಸಲಿಡುವ ಕಾರ್ಯ ಅಲ್ಲಿ ನಡೆಯಿತು.
ಇದನ್ನೂ ಓದಿ: ಜನರೇ ಇಲ್ಲದ ಆಸ್ಟ್ರೇಲಿಯಾದ ದ್ವೀಪಗಳ ಮೇಲೂ ಟ್ರಂಪ್ ತೆರಿಗೆ! ಪೆಂಗ್ವಿನ್ಗಳು ಸುಂಕ ಕಟ್ಟುತ್ತಾವಾ?
ಪಾಕಿಸ್ತಾನದ ಮಾಧ್ಯಮಗಳ ಹೇಳುವ ಪ್ರಕಾರ evacuee trust property board ಅಧೀನದಲ್ಲಿ ಸುಮಾರು 1 ಲಕ್ಷ 9 ಸಾವಿರದದ 369 ಎಕರೆ ಔಕಾಫ್ ಭೂಮಿಯಿದೆ . ಪಂಜಾಬ್ನಲ್ಲಿ 85,331 ಎಕರೆ, ಸಿಂಧ್ನಲ್ಲಿ 21,735 ಎಕರೆ, ಖೈಬರ್ ಪಖ್ತುಂಖ್ವಾನಲ್ಲಿ 2,301 ಎಕರೆ ಹಾಗೂ ಬಲೂಚಿಸ್ತಾನದಲ್ಲಿ 2 ಎಕರೆಯಷ್ಟು ಔಕಾಫ್ ಬಳಿ ಭೂಮಿಯಿದೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ