/newsfirstlive-kannada/media/post_attachments/wp-content/uploads/2025/02/AKHAND-BHARAT.jpg)
ನಮ್ಮ ದೇಶದಲ್ಲಿ ಪದೇ ಪದೇ ಅಖಂಡ ಭಾರತದ ಬಗ್ಗೆ ಮಾತುಗಳು ಬರುತ್ತವೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ವಿಚಾರದಲ್ಲಿ ಈ ಮಾತು ಚಾಲ್ತಿಗೆ ಬರುತ್ತದೆ. ಅಖಂಡ ಭಾರತ ಎಂದರೆ ಭಾರತ ಪಾಕಿಸ್ತಾನ ಮತ್ತು ಬಾಗ್ಲಾದೇಶ ಎಂಬ ಕಲ್ಪನೆ ನಮ್ಮಲ್ಲಿ ಇದೆ. ಆದ್ರೆ ನಿಜಕ್ಕೂ ಅಖಂಡ ಭಾರತವೆಂದರೆ ಇಷ್ಟೆನಾ? ಅಲ್ಲ ಅಖಂಡ ಭಾರತದ ವಿಶಾಲತೆ ನಮ್ಮ ಕಲ್ಪನೆ ಮೀರಿದ್ದು. ಅದರ ವಿಶಾಲತೆಯ ಬಗ್ಗೆ ಅರಿವಾದರೆ ಒಂದು ಕ್ಷಣ ದಂಗಾಗಿ ಹೋಗುತ್ತೇವೆ.
ಪ್ರಾಚೀನ ಕಾಲದಲ್ಲಿದ್ದ ಭಾರತ ಹಾಗೂ ಈಗೀರುವ ಭಾರತದ ನಡುವೆ ಅನೇಕ ತುಂಡುಗಳ ಗುರುತು ಇವೆ. ಅಖಂಡ ಭಾರತವನ್ನು ಸ್ಪಷ್ಟವಾಗಿ ಹೇಳಬೇಕಾದರ ಈಗೀನ ಭಾರತದ ಜೊತೆಗೆ ಇನ್ನೂ 9 ರಾಷ್ಟ್ರಗಳನ್ನು ಸೇರಿಸಬೇಕಾಗುತ್ತದೆ. ಆ ಎಲ್ಲಾ ರಾಷ್ಟ್ರಗಳು ಒಂದು ಕಾಲದಲ್ಲಿ ಭಾರತದ ಭಾಗಗಳೇ ಆಗಿದ್ದವು. ಭಾರತದ ಭೂಪಟದೊಂದಿಗೆ ಗುರುತಿಸಿಕೊಂಡಿದ್ದವು. ಕಾಲ ಉರುಳಿದಂತೆ ಸಮಯ ಕಳೆದಂತೆ ಸಂದರ್ಭಗಳು ಸನ್ನಿವೇಶಗಳು ಹಾಗೂ ಐತಿಹಾಸಿಕ ಪ್ರಮಾದಗಳು ಭಾರತ ಒಂದೊಂದೇ ತುಂಡಾಗಿ ಪ್ರತ್ಯೇಕ ಭಾಗಗಳಾಗಿ ಹೋಯಿತು. ಆ ಅಖಂಡ ಭಾರತ ಹೇಗಿತ್ತು. ಇಂದು ಯಾವ ಯಾವ ದೇಶಗಳು ಹಿಂದೆ ಭಾರತದಲ್ಲಿದ್ದು ಈಗ ಪ್ರತ್ಯೇಕವಾಗಿ ಅಸ್ತಿತ್ವ ಗಳಿಸಿಕೊಂಡಿವೆ ಎಂಬುದನ್ನು ನೋಡೋಣ.
ಒಂದು ಕಾಲದಲ್ಲಿ ಭಾರತವೆಂದರೆ ಇಂದಿನ ಭೂತಾನ, ನೇಪಾಳ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಭಾರತದ ನೆಲವಾಗಿಯೇ ಗುರುತಿಸಿಕೊಂಡಿದ್ದವು. ಕೇವಲ ಇವಿಷ್ಟೇ ದೇಶಗಳಾ ಅಲ್ಲ, ಅಫ್ಘಾನಿಸ್ತಾನ, ಮಾಲ್ಡಿವ್ಸ್,ಟಿಬೆಟ್​, ಮಯನ್ಮಾರ್ ಮತ್ತು ಶ್ರೀಲಂಕಾ ಕೂಡ ಭಾರತದ ಭಾಗಗಳೇ ಆಗಿದ್ದವು. ಈ ಎಲ್ಲಾ ರಾಷ್ಟ್ರಗಳು ಸೇರಿ ಒಂದು ಕಾಲದಲ್ಲಿ ಭಾರತ ಎಂದು ಗುರುತಿಸಲಾಗುತ್ತಿತ್ತು.
ಇದನ್ನೂ ಓದಿ:ಬಂಧನದ ಭೀತಿಯಲ್ಲಿ ರಣವೀರ್ ಅಲಹಾಬಾದಿಯಾ.. ಕ್ಷಮೆ ಕೇಳಿದ ಯೂಟ್ಯೂಬರ್..!
1876ರಲ್ಲಿ ಅಫ್ಘಾನಿಸ್ತಾನವನ್ನು ಬ್ರಟೀಷರು ಭಾರತದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವನ್ನಾಗಿಸಿದರು. 1904ರಲ್ಲಿ ನೇಪಾಳ, 1906ರಲ್ಲಿ ಭೂತಾನ್, 1907ರಲ್ಲಿ ಟಿಬೆಟ್​, 1935ರಲ್ಲಿ ಶ್ರೀಲಂಕಾ,1937ರಲ್ಲಿ ಮಯನ್ಮಾರ್ ಹಾಗೂ 1947ರಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳು. ಪೂರ್ವ ಪಾಕಿಸ್ತಾನ ಎಂದರೆ ಇಂದಿನ ಬಾಂಗ್ಲಾದೇಶ. 1935ರಲ್ಲಿ ಭಾರತದಿಂದ ಬೇರ್ಪಟ್ಟ ಶ್ರೀಲಂಕಾವನ್ನು ಆ ಮೊದಲು ಸಿನ್ಹಲ್​ದ್ವೀಪವೆಂದು ಕರೆಯಲಾಗುತ್ತಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us