ಇದು ಮನೆಯಲ್ಲ ಅರಮನೆ..! ಚಾಕು ಇರಿತಕ್ಕೊಳಗಾದ ಸೈಫ್ ಅಲಿ ಖಾನ್ ಬಂಗಲೆ ಎಷ್ಟು ಕೋಟಿ ಬೆಲೆ ಬಾಳುತ್ತೆ?

author-image
Veena Gangani
Updated On
ಇದು ಮನೆಯಲ್ಲ ಅರಮನೆ..! ಚಾಕು ಇರಿತಕ್ಕೊಳಗಾದ ಸೈಫ್ ಅಲಿ ಖಾನ್ ಬಂಗಲೆ ಎಷ್ಟು ಕೋಟಿ ಬೆಲೆ ಬಾಳುತ್ತೆ?
Advertisment
  • ಬಾಲಿವುಡ್ ನಿರ್ಮಾಪಕ, ನಟ ಸೈಫ್ ಅಲಿ ಖಾನ್ ಈಗ ಹೇಗಿದ್ದಾರೆ?
  • ಮುಂಬೈನಾ ಬ್ರಾಂದಾದಲ್ಲಿ ಯಾರೆಲ್ಲಾ ಸ್ಟರ್​ಗಳು ವಾಸಿಸುತ್ತಿದ್ದಾರೆ?
  • ಸ್ಟಾರ್​ ನಟ ಸೈಫ್ ಅಲಿ ಖಾನ್ ಮನೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಬಾಲಿವುಡ್ ನಿರ್ಮಾಪಕ, ಸ್ಟಾರ್​ ನಟ ಸೈಫ್ ಅಲಿ ಖಾನ್​​ಗೆ ಚಾಕು ಇರಿತವಾಗಿದೆ. ಮಧ್ಯರಾತ್ರಿ 2.30ರ ಸುಮಾರಿಗೆ ಬಾಂದ್ರಾ ನಿವಾಸಕ್ಕೆ ಎಂಟ್ರಿ ನೀಡಿದ ವ್ಯಕ್ತಿಯೊಬ್ಬ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಅಟ್ಯಾಕ್ ಮಾಡಿದ್ದಾನೆ. ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಸೈಫ್ ಅಲಿ ಖಾನ್ ಕುತ್ತಿಗೆ ಚಾಕು ಇರಿದ ಕಳ್ಳ.. 10 ಸೆಂಟಿ ಮೀಟರ್ ಗಾಯ..

publive-image

ಈ ವಿಷಯ ತಿಳಿದು ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಇತ್ತ ಸೈಫ್ ಅಲಿ ಖಾನ್ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ಕೊಟ್ಟಿದ್ದಾರೆ.  ನಟನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಟಾರ್​ ವಾಸವಾಗಿದ್ದ ಫ್ಲಾಟ್ ಬೆಲೆ ಎಷ್ಟು..?

ನಟ ಸೈಫ್ ಅಲಿ ಖಾನ್ ಅವರು ವಾಸವಾಗಿರೋದು ಮುಂಬೈನ ಬ್ರಾಂದಾದಲ್ಲಿ. ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶದಲ್ಲಿ ಸೈಫ್ ಅಲಿ ಖಾನ್ ದಂಪತಿ ವಾಸಿಸುತ್ತಿದೆ. ಕೇವಲ ಸೈಫ್ ಅಲಿ ಖಾನ್ ಮಾತ್ರವಲ್ಲದೇ ಬಾಲಿವುಡ್​ನ ಅನೇಕ ದೊಡ್ಡ ಸೆಲೆಬ್ರಿಟಿಗಳು ಅಲ್ಲಿ ನಿವಾಸ ಹೊಂದಿದ್ದಾರೆ. ಸಲ್ಮಾನ್ ಖಾನ್ ಕೂಡ ಮುಂಬೈನ ಬ್ರಾಂದಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.

publive-image

ಮಾಹಿತಿ ಪ್ರಕಾರ, ಸೈಫ್ ಅಲಿ ಖಾನ್ ಮನೆ ಬರೋಬ್ಬರಿ 10 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ. ಬ್ರಾಂದಾದಲ್ಲಿರುವ 1 BHK ಫ್ಲಾಟ್‌ಗಳ ಬಾಡಿಗೆ ತಿಂಗಳಿಗೆ 3 ಲಕ್ಷದಿಂದ 5 ಲಕ್ಷದ ನಡುವೆ ಇದೆ. ಕೆಲವು ಫ್ಲಾಟ್​ಗಳ ಬಾಡಿಗೆ 8 ಲಕ್ಷ ರೂಪಾಯಿಗೂ ಅಧಿಕ. ಇಲ್ಲೇ ಇರುವ ಸಲ್ಮಾನ್ ಖಾನ್ ಅಪಾರ್ಟ್‌ಮೆಂಟ್ ಬೆಲೆ 100 ಕೋಟಿ ರೂಪಾಯಿ. ಖಾನ್‌ಗಳ ಹೊರತಾಗಿ ಕರಣ್ ಜೋಹರ್, ಜಾನ್ ಅಬ್ರಹಾಂ, ರಣವೀರ್ ಸಿಂಗ್ (ಹಳೆಯ ಮನೆ), ರಣಬೀರ್ ಕಪೂರ್-ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರಾ, ಮಲೈಕಾ ಅರೋರಾ, ಅನನ್ಯಾ ಪಾಂಡೆ ಮೊದಲಾದ ತಾರಗಣ ಬಾಂದ್ರಾದಲ್ಲಿ ವಾಸವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment