/newsfirstlive-kannada/media/post_attachments/wp-content/uploads/2025/03/SUNITA-Williams-4.jpg)
NASA ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕೊನೆಗೂ ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್ ಆಗಿದ್ದಾರೆ. 2024, ಜುಲೈ 5 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 8 ದಿನಗಳ ಅಧ್ಯಯನಕ್ಕಾಗಿ ಹೋಗಿದ್ದರು. ತಾಂತ್ರಿಕ ದೋಷಗಳಿಂದಾಗಿ ಸ್ಟಾರ್‌ಲೈನರ್ ಸೆಪ್ಟೆಂಬರ್‌ನಲ್ಲಿ ಅವರಿಲ್ಲದೆ ಭೂಮಿಗೆ ಮರಳಿತ್ತು.
ವಿಲಿಯಮ್ಸ್ ಮತ್ತು ವಿಲ್ಮೋರ್ ISSನಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಭೂಮಿಗೆ ಮರಳಿ ಕರೆತರಲು NASA ಸಾಕಷ್ಟು ಪ್ರಯತ್ನಿಸಿತು. ಕೊನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಕೂಡ ನಾಸಾ ಸಾಹಸಕ್ಕೆ ಕೈಜೋಡಿಸಿದರು.
ಇದರೊಂದಿಗೆ ಸ್ಪೇಸ್‌ಎಕ್ಸ್ ಮತ್ತು ನಾಸಾ ಒಟ್ಟಾಗಿ ಗಗನಯಾನಿಗಳನ್ನು ಕರೆತರಲು ಪ್ರಯತ್ನಿಸಿದವು. ಅದರಂತೆ ಸ್ಪೇಸ್ನ ಎಕ್ಸ್ನ ಡ್ರ್ಯಾಗನ್ ಕ್ರೂ ಕ್ಯಾಪ್ಸುಲ್ ಎಂಬ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಕಳುಹಿಸಿದ್ದವು. ಕೊನೆಗೂ ಆ ನೌಕೆ ಯಶಸ್ವಿಯಾಗಿ ಸುನಿತಾ ವಿಲಿಯಮ್ಸ್ ಅವರನ್ನು ಭೂಮಿಗೆ ಇಳಿಸಿದೆ.
ಇದನ್ನೂ ಓದಿ: ಉಸಿರು ಬಿಗಿ ಹಿಡಿದು ಕೂತಿದ್ದ ಸುನೀತಾ ವಿಲಿಯಮ್ಸ್.. ಹೇಗಿತ್ತು ಕೊನೆಯ ಆ ಕ್ಷಣ? ಟಾಪ್ 10 ಫೋಟೋ!
ಈ ಕಾರ್ಯಾಚರಣೆಗೆ ಎಷ್ಟು ಖರ್ಚು?
ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಕಕ್ಷೆಗೆ ಕಳುಹಿಸಲು ಮತ್ತು ಗಗನಯಾತ್ರಿಗಳನ್ನು ಮರಳಿ ತರಲು ಒಟ್ಟು 140 ಅಮೆರಿಕನ್ ಮಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಸುಮಾರು 1,200 ಕೋಟಿ ರೂಪಾಯಿ ಆಗಿದೆ.
ಯಾಕೆ ಅಷ್ಟೊಂದು ವೆಚ್ಚ..?
ಇಷ್ಟೊಂದು ದೊಡ್ಡ ವೆಚ್ಚಕ್ಕೆ ಕಾರಣ ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾದ ಹಲವು ಸಾಧನಗಳು. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್, ಕಕ್ಷೆಗೆ ಉಡಾಯಿಸುವ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ಗೆ ಇಷ್ಟೊಂದು ವೆಚ್ಚ ಮಾಡಲಾಗಿದೆ. ಬಾಹ್ಯಾಕಾಶ ಪ್ರಯಾಣಕ್ಕೆ ಅಗತ್ಯವಾದ ಹೆಚ್ಚುವರಿ ತೂಕ, ಲೈಫ್ ಸಪೋರ್ಟಿಂಗ್ ಸಿಸ್ಟಮ್ ಸೇರಿದಂತೆ ಎಲ್ಲಾ ವ್ಯವಸ್ಥಗಳಿಗೆ ಇಷ್ಟೊಂದು ಹಣ ಖರ್ಚು ಆಗಿದೆ.
ಇದನ್ನೂ ಓದಿ: ಭಾರತಕ್ಕೆ ಬರ್ತಾರೆ ಸುನೀತಾ ವಿಲಿಯಮ್ಸ್.. ಯಾವಾಗ? ಗುಡ್‌ನ್ಯೂಸ್ ಇಲ್ಲಿದೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ