ಪಂಜಾಬ್ ಕಿಂಗ್ಸ್​ಗೆ 13 ಕೋಟಿ ಹಣ.. ಚಾಂಪಿಯನ್ ಆರ್​ಸಿಬಿಗೆ ಕೋಟಿ ಕೋಟಿ ದುಡ್ಡು..!

author-image
Ganesh
Updated On
RCB ಅಭಿಮಾನಿಗಳಿಗೆ ಗುಡ್​ನ್ಯೂಸ್​.. ಯುನೈಟೆಡ್ ಸ್ಪಿರಿಟ್ಸ್ ಕಂಪನಿ ಕೊಟ್ಟ ಸ್ಪಷ್ಟನೆ ಏನು?
Advertisment
  • ಪಂಜಾಬ್ ಬಗ್ಗು ಬಡಿದು ಕಪ್​​ಗೆ ಮುತ್ತಿಟ್ಟ ಆರ್​ಸಿಬಿ
  • ರಣ ರೋಚಕ ಪಂದ್ಯದಲ್ಲಿ ಆರ್​ಸಿಬಿಗೆ ಗೆಲುವು
  • ಚಾಂಪಿಯನ್ ಆರ್​ಸಿಬಿಗೆ ಸಿಕ್ಕ ಹಣ ಎಷ್ಟು..?

18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ.

ಬಹುಮಾನದ ಮೊತ್ತ ಎಷ್ಟು?

ಐಪಿಎಲ್ 2025ರ ಚಾಂಪಿಯನ್ ಆಗಿರುವ ಆರ್‌ಸಿಬಿಗೆ 20 ಕೋಟಿ ರೂಪಾಯಿ ಹಣ ಬಹುಮಾನವಾಗಿ ನೀಡಲಾಗಿದೆ. ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿತ್ತು. ಸೋತ ತಂಡ ಪಂಜಾಬ್ ಕಿಂಗ್ಸ್​ಗೆ 13 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಕೂಡ ಖಾಲಿ ಕೈಯಲ್ಲಿ ಹಿಂತಿರುಗುವುದಿಲ್ಲ. ಪ್ಲೇ-ಆಫ್‌ಗೆ ಪ್ರವೇಶ ಹಿನ್ನೆಲೆಯಲ್ಲಿ ಕ್ರಮವಾಗಿ 7 ಕೋಟಿ ಮತ್ತು 6.5 ಕೋಟಿ ರೂಪಾಯಿ ಹಣ ಪಡೆದಿವೆ.

ಇದನ್ನೂ ಓದಿ: ಇಂದು ರಾತ್ರಿ ನಾನು ಮಗುವಿನಂತೆ ಮಲಗುತ್ತೇನೆ.. ಕಪ್ ಗೆದ್ದ ಬಳಿಕ ಕೊಹ್ಲಿ ಏನಂದ್ರು..?

publive-image

  • ವಿಜೇತ ತಂಡಕ್ಕೆ - 20 ಕೋಟಿ ರೂ.
  •  ರನ್ನರ್ ಅಪ್ - 13 ಕೋಟಿ ರೂ.

ಪಂದ್ಯ ಏನಾಯಿತು?

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಮ್ಯಾಚ್ ನಡೆಯಿತು. ಟಾಸ್ ಸೋತು ಆರ್​ಸಿಬಿ ಮೊದಲು ಬ್ಯಾಟಿಂಗ್​ ಮಾಡಿತ್ತು. ಕೊಹ್ಲಿ ಅವರ 43 ರನ್​ಗಳ ನೆರವಿನಿಂದ ಆರ್​​ಸಿಬಿ 190 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. 191 ರನ್​ಗಳ ಗುರಿ ಬೆನ್ನು ಹತ್ತಿದ್ದ ಪಂಜಾಬ್ ಕಿಂಗ್ಸ್, 20 ಓವರ್‌ಗಳಲ್ಲಿ ಕೇವಲ 184 ರನ್‌ಗಳಿಸಿ ಸೋಲಿಗೆ ಶರಣಾಯ್ತು.

ಇದನ್ನೂ ಓದಿ: ಕಪ್ ಎತ್ತಿ ಮುತ್ತಿಟ್ಟ ವಿರಾಟ್ ಕೊಹ್ಲಿ.. ಟ್ರೋಫಿ ಸ್ವೀಕರಿಸಿದ ಕ್ಷಣ ಹೇಗಿತ್ತು..? VIDEO

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment