ಪಂಚೆ ಅನ್ನೋ ಹೆಸರು ಹುಟ್ಟಿಕೊಂಡಿದ್ದು ಹೇಗೆ? ಪವರ್​​ಫುಲ್​​​ ಪಂಚೆ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?

author-image
Veena Gangani
Updated On
ಪಂಚೆ ಅನ್ನೋ ಹೆಸರು ಹುಟ್ಟಿಕೊಂಡಿದ್ದು ಹೇಗೆ? ಪವರ್​​ಫುಲ್​​​ ಪಂಚೆ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?
Advertisment
  • ಪಂಚೆ ಉಟ್ಟು ಮಾಲ್​ ಸುತ್ತಲು ಬಂದ ರೈತನಿಗೆ ಮಾಲ್​ ಸಿಬ್ಬಂದಿಯಿಂದ ಅಪಮಾನ
  • ಧೋತಿ ಉಟ್ಟಿದ್ದಕ್ಕೆ ಮಾಲ್​ ಒಳಕ್ಕೆ ನೋ ಎಂಟ್ರಿ ಎಂದ ಸೆಕ್ಯುರಿಟಿ ಮೇಲೆ ಆಕ್ರೋಶ
  • ಸಿಂಧೂ ಕಣಿವೆ ನಾಗರಿಕತೆಯಲ್ಲಿ ಧೋತಿ ಧರಿಸುತ್ತಿದ್ದ ಬಗ್ಗೆ ಹಲವು ಉಲ್ಲೇಖಗಳಿವೆ

ಬೆಂಗಳೂರು: ಪಂಚೆ ಅಂದ್ರೆ ಭಾರತದ ಸಂಸ್ಕೃತಿ. ಪಂಚೆ ಅಂದ್ರೆ ಭಾರತೀಯರ ಜೀವನ ಶೈಲಿ. ಪಂಚೆ ಅಂದ್ರೆ ಅದೊಂದು ಸುಸಂಸ್ಕೃತ ಉಡುಗೆ. ಆದ್ರೆ, ಆಧುನಿಕತೆಯ ಹಣೆಪಟ್ಟಿಯಲ್ಲಿ ತಲೆ ಎತ್ತಿರೋ ಮಾಲ್‌ಗಳು ಕಿತ್ತೊಗಿರೋ ಜೀನ್ಸ್‌, ಚಡ್ಡಿ-ಮಿಡ್ಡಿ ಹಾಕಿದ್ರೆ ಒಳಬಿಡ್ತಾರಂತೆ. ಅದೇ ಹಳ್ಳಿಯ ರೈತ ಪಂಚೆ ತೊಟ್ಟು ಬಂದ್ರೆ ನಾಟ್‌ ಅಲೌಡ್‌. ಆದರೆ ಸಿಲಿಕಾನ್​ ಸಿಟಿ ಬೆಂಗಳೂರಿನ GT ಮಾಲ್​ಗೆ ಹಾವೇರಿ ಮೂಲದ ರೈತರೊಬ್ಬರು ಧೋತಿ ಉಟ್ಟು ಬಂದ ಕಾರಣಕ್ಕೆ ಪ್ರವೇಶ ನಿರಾಕರಿಸಿ ಅಪಮಾನ ಮಾಡಿತ್ತು. ಹೀಗೆ ರೈತ ಕುಲಕ್ಕೆ ಅಪಮಾನ ಮಾಡಿದ ಜಿ.ಟಿ ಮಾಲ್​ ಸಿಬ್ಬಂದಿಯ ಬಗ್ಗೆ ನ್ಯೂಸ್​ ಫಸ್ಟ್​ ಸುದ್ದಿ ವರದಿ ಮಾಡಿತ್ತು. ಇದಾದ ಬೆನ್ನಲ್ಲೇ ಸರ್ಕಾರ ಜಿ.ಟಿ ಮಾಲ್​ಗೆ ತಕ್ಕಪಾಠ ಕಲಿಸಿದೆ. ಇನ್ನು, ಈ ಪಂಚೆ ಹಿಂದಿನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಇದನ್ನೂ ಓದಿ:ಪಂಚೆ ತೊಟ್ಟ ರೈತನಿಗೆ G T ಮಾಲ್​ ಅಪಮಾನ; ತಕ್ಕಪಾಠ ಕಲಿಸಿದ BBMP; 7 ದಿನಗಳ ಕಾಲ ಬಂದ್​​!

ಪವರ್​ಫುಲ್ ಪಂಚೆ!

ಕ್ರಿಸ್ತಪೂರ್ವದಲ್ಲಿ ಪಂಚೆ ಉಡುತ್ತಿದ್ದ ಬಗ್ಗೆ ಅನೇಕ ಶಿಲಾಶಾಸನಗಳಲ್ಲಿ ಕೆತ್ತಲಾಗಿದೆ. ಸಿಂಧೂ ಕಣಿವೆ ನಾಗರಿಕತೆಯಲ್ಲಿ ಧೋತಿ ಧರಿಸುತ್ತಿದ್ದ ಬಗ್ಗೆ ಹಲವು ಉಲ್ಲೇಖಗಳಿವೆ. ಬ್ರಿಟಿಷ್ ಇಂಡಿಯನ್ ಮಿಲಿಟರಿಗೆ ನೇಮಕಗೊಂಡ ಸೈನಿಕರು ಪಂಚೆ ಧರಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತುಂಡು ಪಂಚೆ ಉಟ್ಟು ಭಾಗಿಯಾಗಿದ್ದ ಮಹಾತ್ಮ ಗಾಂಧೀಜಿ. ದೇವತೆಗಳು ಒಂದು ಬಗೆಯ ಪಂಚೆ, ದಾನವರು ತದ್ವಿರುದ್ಧ ಪಂಚೆ ಧರಿಸ್ತಿದ್ದ ನಂಬಿಕೆ ಇದೆ. ಸಂಸ್ಕೃತದಲ್ಲಿ ಪಂಚ ಅಂದ್ರೆ 5 ಎಂದರ್ಥ. ಈ ಪದದಿಂದ ಪಂಚೆ ಎಂಬ ಹೆಸರು ಬಂದಿದೆ.

ಸಾಮಾನ್ಯವಾಗಿ ಪಂಚೆ 5 ಮೀ. ಇರುತ್ತೆ. ಇದಕ್ಕಿಂತ ದೊಡ್ಡ ಪಂಚೆ ಬಳಕೆಯಲ್ಲಿಲ್ಲ. ಸೊಂಟದ ಬಳಿ ಸಿಕ್ಕಿಸುವಾಗ 5 ಸುತ್ತು ಸುತ್ತೋದ್ರಿಂದಲೂ ಈ ಹೆಸರು ಬಂದಿದೆ. ಭಾರತದ ಎಲ್ಲಾ ರಾಜ್ಯಗಳಲ್ಲೂ ವಿವಿಧ ಹೆಸರಲ್ಲಿ ಪಂಚೆ ಧರಿಸುವ ಜನರಿದ್ದಾರೆ. ತೆಲುಗಿನಲ್ಲಿ ಪಂಚ, ತಮಿಳಿನಲ್ಲಿ ವೇಷ್ಟಿ, ಮಲಯಾಳಂನಲ್ಲಿ ಮುಂಡು, ಮರಾಠಿಯಲ್ಲಿ ಧೋತರ್, ಕೊಂಕಣಿಯಲ್ಲಿ ಅಂಗೋಸ್ತರ್, ಬಂಗಾಳಿಯಲ್ಲಿ ಧುತಿ, ಪಂಜಾಬ್​ನಲ್ಲಿ ಲಾಚಾ, ಬಿಹಾರದಲ್ಲಿ ಮರ್ದಾನಿ, ಗುಜರಾತಿಯಲ್ಲಿ ಧೋತಿ ಎಂದು ಕರೆಯುತ್ತಾರೆ.

ಈ ಮದುವೆ ಸಮಾರಂಭದಲ್ಲಿ ಹಾಗೂ ಇನ್ನು ಹಲವು ವಿಶೇಷ ಸಂದರ್ಭದಲ್ಲಿ ರೇಷ್ಮೆಯ ಪಂಚೆಗಳನ್ನು ಬಳಕೆ ಮಾಡಲಾಗುತ್ತದೆ. ಕೇರಳ, ಅಸ್ಸಾಂ ಸೇರಿ ಕೆಲ ಕಡೆಗಳಲ್ಲಿ ಮಹಿಳೆಯರೂ ಪಂಚೆ/ಲುಂಗಿ ಧರಿಸ್ತಾರೆ. ಇದೇ ಪಂಚೆ ಬರ್ಮಾದಲ್ಲಿ ಬಣ್ಣ ಬದಲಾಗಿ ಲುಂಗಿಯಾಗಿ ಪರಿವರ್ತನೆಯಾಯ್ತು. ಬಾಂಗ್ಲಾದಲ್ಲಿ ಮದುವೆ ಗಂಡಿಗೆ ಪಂಚೆಯನ್ನೇ ಬಳುವಳಿ ನೀಡುವ ಪರಿಪಾಠವಿದೆ. ದುಬೈ, ಸೌದಿಯಲ್ಲಿ ಸಾರ್ವಜನಿಕವಾಗಿ ಪಂಚೆಯನ್ನ ಎತ್ತಿಕಟ್ಟೋದಕ್ಕೆ ನಿರ್ಬಂಧ ಹೇರಲಾಗಿದೆ. ನೇಪಾಳದಲ್ಲಿ ಬಹು ಸಂಖ್ಯಾತ ಜನರು ಪಂಚೆಯನ್ನೇ ಪ್ರತಿನಿತ್ಯವೂ ಬಳಸುತ್ತಾರೆ.

publive-image

ಇದನ್ನೂ ಓದಿ:ಪಂಚೆ ಧರಿಸಿ ಬಂದ ರೈತನಿಗೆ GT ಮಾಲ್​ ಅಪಮಾನ! ಧೋತಿ ಧರಿಸಿದ್ದಕ್ಕೆ ಮಾಲ್​ ಪ್ರವೇಶ ನಿರ್ಬಂಧ!

ಅಷ್ಟೇ ಯಾಕೆ ವರನಟ ಡಾ. ರಾಜಕುಮಾರ್, ದಿವಂಗತ ಪುನೀತ್ ರಾಜ್​ಕುಮಾರ್​, ಸೂಪರ್​ಸ್ಟಾರ್​​​ ರಜಿನಿಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​, ನಟ ಕಿಚ್ಚ ಸುದೀಪ್​, ರಿಷಬ್ ಶೆಟ್ಟಿ ಸೇರಿದಂತೆ ಸಾಕಷ್ಟು ಸ್ಟಾರ್​ಗಳು ಪಂಚೆ ತೊಟ್ಟು ಅದರ ಮಹತ್ವದ ಬಗ್ಗೆ ಸಾರಿ ಹೇಳಿದ್ದರು. ಈಗಲೂ ಕೂಡ ರಿಷಬ್ ಶೆಟ್ಟಿ, ರಾಜ್​ಬಿ ಶೆಟ್ಟಿ, ರಘು ದೀಕ್ಷಿತ್​ ಅವರು ಪಂಚೆಯನ್ನು ತೊಟ್ಟು ದೇಶ ವಿದೇಶಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇದೇ ಪಂಚೆ ಧರಿಸಿ ಸೂಪರ್​ಸ್ಟಾರ್​​​ ರಜಿನಿಕಾಂತ್ ಅವರು ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಅವರ ಮಗನ ಮದುವೆಗೆ ಹೋಗಿದ್ದರು. ಅಲ್ಲದೇ ಅದೇ ಪಂಚೆ ತೊಟ್ಟು ನಟ​​​ ರಜಿನಿಕಾಂತ್ ಸಖತ್​ ಡ್ಯಾನ್ಸ್​ ಮಾಡಿದ್ದರು. ಈ ಪಂಚೆ ಧರಿಸಿಯೇ ಸಿಎಂ ಆಗಿ ಸಿದ್ದರಾಮಯ್ಯ, ಪಿಎಂ ಆಗಿ ದೇವೇಗೌಡರ ಪದಗ್ರಹಣ ಮಾಡಿದ್ರು. ಈಗಿನ ಪ್ರಧಾನಿ ನರೇಂದ್ರ ಮೋದಿಯೂ ದಕ್ಷಿಣ ಭಾರತಕ್ಕೆ ಬಂದಾಗ ಪಂಚೆ ಧರಿಸ್ತಾರೆ. ಈಗಲೂ ಕೆಲ ದೇವಸ್ಥಾನಗಳಲ್ಲಿ ಪಂಚೆ ಧರಿಸಿದ್ರಷ್ಟೇ ಆಲಯ ಪ್ರವೇಶಕ್ಕೆ ಅನುಮತಿ ಇದೆ. ಹಿಂದಿನ ಕಾಲದಲ್ಲಿ ಪಂಚೆಗೆ ಬೆಲ್ಟ್​ನಂತಹ ಪಟ್ಟಿಗಳನ್ನ ಕಟ್ಟುವಂತ ರೂಢಿ ಇತ್ತು. ಪಂಚೆ ಕೇವಲ ಬಟ್ಟೆ ಮಾತ್ರವಲ್ಲದೇ, ಸಾಂಸ್ಕೃತಿಕ ಪ್ರಾಮುಖ್ಯತೆಯನ್ನ ಸೂಚಿಸುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment