/newsfirstlive-kannada/media/post_attachments/wp-content/uploads/2025/03/Dr-Kamini-roa-4.jpg)
ಅಸಂಖ್ಯಾತ ಪೋಷಕರ ಪಾಲಿಗೆ ಇವರೇ ನಿಜವಾದ ದೇವರು. ಲೆಕ್ಕವಿಲ್ಲದಷ್ಟು ದಂಪತಿಗೆ ಮಕ್ಕಳ ಭಾಗ್ಯ ಕರುಣಿಸಿದ ಮಹಾತಾಯಿ ಇವರು. ಬೇರೆ ಯಾರೂ ಅಲ್ಲ, ಭಾರತದ ಮೊದಲ ವೀರ್ಯ ಬ್ಯಾಂಕ್ ಆರಂಭಿಸಿದ ಹೆಗ್ಗಳಿಕೆ ಹೊಂದಿರೋ ಡಾ.ಕಾಮಿನಿ ರಾವ್. ರಾಜ್ಯಕ್ಕೆ, ದೇಶಕ್ಕೆ ಇವರು ನೀಡಿದ ಕೊಡುಗೆ ಅಪಾರ. ಇಂಥ ಸೇವಕಿಯನ್ನು ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ನ್ಯೂಸ್ ​ಫಸ್ಟ್ ವಾಹಿನಿ ‘ಮಹಿಳಾ ಮಾಣಿಕ್ಯ’ ಗೌರವ ನೀಡಿದೆ.
ಯಾರು ಕಾಮಿನಿರಾವ್..?
ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞೆ ಡಾ.ಕಾಮಿನಿರಾವ್ ನಮ್ಮ ರಾಜ್ಯದ ಅಮೋಘ ಸಾಧಕಿ. ಇವರನ್ನ ಕೇವಲ ರಾಜ್ಯಕ್ಕೆ ಸೀಮಿತಗೊಳಿಸಿದರೆ ತಪ್ಪಾಗಿಬಿಡುತ್ತೆ. ಯಾಕಂದ್ರೆ ದೇಶಕ್ಕೆ ಇವರ ಕೊಡುಗೆ ಅಪಾರವಾಗಿದೆ. ಯಾಕಂದ್ರೆ, ಐವಿಎಫ್ ಕ್ಷೇತ್ರದಲ್ಲಿ ಭಾರತದಲ್ಲಿಯೇ ಕ್ರಾಂತಿ ಆರಂಭಿಸಿದ ಪ್ರಮುಖರಲ್ಲಿ, ನಮ್ಮ ಕನ್ನಡತಿ ಡಾ.ಕಾಮಿನಿ ರಾವ್ ಮುಂಚೂಣಿಯಲ್ಲಿದ್ದಾರೆ.
ಇದನ್ನೂ ಓದಿ:ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಮಗುವಿನ ಕಣ್ಣು.. ಇವನ ಕಣ್ಣಲ್ಲಿ ಒಂದೇ ದಿನಕ್ಕೆ 8 ಕಲರ್; ಬೆಚ್ಚಿ ಬಿದ್ದ ಜನರು!
/newsfirstlive-kannada/media/post_attachments/wp-content/uploads/2025/03/Dr-Kamini-roa-1.jpg)
ವಿಶೇಷ ಅಂದ್ರೆ ದಕ್ಷಿಣ ಭಾರತದ ಮೊದಲ ವೀರ್ಯ ಬ್ಯಾಂಕ್ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಅಷ್ಟೇ ಅಲ್ಲ, ಭಾರತದ ಮೊದಲ ಎಸ್‌ಐಎಫ್‌ಟಿ ಅಂದ್ರೆ ಸ್ಪರ್ಮ್ ಇಂಟ್ರಾಫಾಲೋಷಿಯನ್ ಟ್ರಾನ್ಸ್‌ಫರ್ ಮೂಲಕ ಮಗುವಿನ ಜನನದ ಹೆಗ್ಗಳಿಕೆ ಖಂಡಿತವಾಗಿಯೂ ಇವರಿಗೆ ಸಲ್ಲಬೇಕು. ಮೊಟ್ಟ ಮೊದಲ ಬಾರಿಗೆ ಪುರುಷ ಬಂಜೆತನದ ಬಗ್ಗೆ ಜಾಗೃತಿ ಮೂಡಿಸಿದವರು ಕೂಡ ಇವರೇ. ಆಫ್ರಿಕಾ ಮತ್ತು ಏಷ್ಯಾದಲ್ಲಿ ಫಲವತ್ತತೆ ಚಿಕಿತ್ಸೆಗಳ ರಾಯಭಾರಿಯಾಗಿದ್ದ ಇವರು, ಈ ಗೌರವ ಪಡೆದ ಮೊದಲ ಭಾರತೀಯರು ಅನ್ನೋದು ಕನ್ನಡಿಗರಾದ ನಮಗೆ ಬಹಳ ಸಂತಸದ ವಿಚಾರ.
/newsfirstlive-kannada/media/post_attachments/wp-content/uploads/2025/03/Dr-Kamini-roa-7.jpg)
ರಾಯಚೂರು ಮೂಲದವರಾದ ಡಾ.ಕಾಮಿನಿರಾವ್, ಬೆಳದದ್ದು ಬೆಂಗಳೂರಿನಲ್ಲಿಯೇ. ಬೆಂಗಳೂರಿನಲ್ಲಿಯೇ ವೈದ್ಯಕೀಯ ಪದವಿ ಪಡೆದ ಇವರು, ಇಂಗ್ಲೆಂಡ್‌ನಲ್ಲಿ ಫರ್ಟಿಲಿಟಿ ಬಗ್ಗೆ ತರಬೇತಿ ಪಡೆದರು. ಆರೋಗ್ಯ ಕ್ಷೇತ್ರದಲ್ಲಿ ಇವರ ಗಣನೀಯ ಸೇವೆ ಗುರುತಿಸಿದ ಕೇಂದ್ರ ಸರ್ಕಾರ 2014ರಲ್ಲಿಯೇ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
/newsfirstlive-kannada/media/post_attachments/wp-content/uploads/2025/03/Dr-Kamini-roa-4.jpg)
ರಾಜ್ಯ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಲಭಿಸಿದೆ. ಆರೋಗ್ಯ ಸಮಸ್ಯೆಯಿಂದ ಪೋಷಕರಾಗೋದನ್ನ ತಪ್ಪಿಸಿಕೊಳ್ಳುತ್ತಿದ್ದ ಅಸಂಖ್ಯಾತ ಪೋಷಕರ ಪಾಲಿಗೆ, ಇವರೇ ನಿಜವಾದ ದೇವರು. ಲೆಕ್ಕವಿಲ್ಲದಷ್ಟು ದಂಪತಿಗೆ ಪರಿಣಾಮಕಾರಿ ಚಿಕಿತ್ಸೆಯ ಮೂಲಕ ಮಕ್ಕಳ ಭಾಗ್ಯ ಕರುಣಿಸಿದ, ಮಹಾತಾಯಿ ಇವರು. ಸದ್ಯ ಮೆಡ್‌ಲೈನ್ ಅಕಾಡೆಮಿಕ್ಸ್ ಮತ್ತು ಡಾ.ಕಾಮಿನಿರಾವ್ ಹಾಸ್ಪಿಟಲ್ಸ್ ಸಹ ಸಂಸ್ಥಾಪಕಿ ಮತ್ತು ಚೇರ್‌ಪರ್ಸನ್ ಆಗಿರೋ ಪದ್ಮಶ್ರೀ ಡಾ.ಕಾಮಿನಿರಾವ್, ನ್ಯೂಸ್‌ಫಸ್ಟ್‌ನ ಮಹಿಳಾ ಮಾಣಿಕ್ಯ. ನಿಮ್ಮ ನ್ಯೂಸ್​​ಫಸ್ಟ್​ ವಾಹಿನಿಯ ಮಹಿಳಾ ಮಾಣಿಕ್ಯ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ
ಇದನ್ನೂ ಓದಿ: ಸಾವಯವ ಕೃಷಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಬೀಜ ಮಾತೆ; ಪಾಪಮ್ಮ ಕೊಡುಗೆ ಏನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us