/newsfirstlive-kannada/media/post_attachments/wp-content/uploads/2024/11/tanvi.jpg)
ದಿನಕ್ಕೊಂದು ತಿರುವು, ಕ್ಷಣ ಕ್ಷಣ ವಿಭಿನ್ನ ರೂಪ ಪಡೆದುಕೊಳ್ತಿರೋ ಪಾತ್ರಗಳು. ಅಬ್ಬಬ್ಬಾ ಲಕ್ಷ್ಮೀ ಬಾರಮ್ಮ ರೋಮಾಂಚನಾಕಾರಿ ಸಂಚಿಕೆಗಳ ಮೂಲಕ ಕುತೂಹಲ ಹೆಚ್ಚಿಸುತ್ತಿದೆ. ಧಾರಾವಾಹಿಗೆ ಮತ್ತೊಂದು ಮಹಾ ತಿರುವು ಸಿಕ್ಕಿದೆ. ಇದರ ಜೊತೆಗೆ ವೀಕ್ಷಕರ ಫೇವರಿಟ್​​ ಕೀರ್ತಿ ರಿಯಲ್​ ಲೈಫ್​ನ ಒಂದು ಇಂಟ್ರಸ್ಟಿಂಗ್​ ಸ್ಟೋರಿ ಇದೆ.
ಇದನ್ನೂ ಓದಿ:1000 ರೂಪಾಯಿ ಹೂಡಿಕೆ ಮಾಡಿ ಲಕ್ಷ ಲಕ್ಷ ಗಳಿಸುತ್ತಿರುವ ಮಹಿಳೆ! ಇದು ಗೃಹಿಣಿಯೊಬ್ಬಳ ಯಶೋಗಾಥೆ
/newsfirstlive-kannada/media/post_attachments/wp-content/uploads/2024/07/tanvi.jpg)
ಪ್ರತಿದಿನ ಸೀರಿಯಲ್​ ನೋಡುವವರಿಗೆ ಒಂದಿಷ್ಟು ವಿಚಾರಗಳು ಹೀಗೆ ಅಗುತ್ತೆ ಅನ್ನೋ ನಿರೀಕ್ಷೆ ಇರುತ್ತೆ. ಆ ದೃಶ್ಯ ಬರೋಕೋ ಮೊದಲೇ ಊಹೆ ಮಾಡಿರ್ತಾರೆ ವೀಕ್ಷಕರು. ಆದರೆ ಇಲ್ಲಿ ಊಹೆಗೂ ನಿಲುಕದಂತೆ ಸ್ಟೋರಿನ ಕಟ್ಟಿಕೊಡ್ತಿದೆ ಲಕ್ಷ್ಮೀ ಬಾರಮ್ಮ ತಂಡ. ಸದ್ಯ ಲಕ್ಷ್ಮೀ ಇನ್ನಿಲ್ಲ ಅನ್ನೋದನ್ನ ಸೀರಿಯಲ್​ನಲ್ಲಿ ತೋರಿಸಲಾಗ್ತಿದೆ. ನಾನು ಗೆದ್ದೇ ಅಂತ ಕೂಗಾಡುತ್ತಿರೋ ಕಾವೇರಿಗೆ ನಡುಕ ಹುಟ್ಟಿಸಿದೆ ಕೀರ್ತಿ ಎಂಟ್ರಿ. ಕೀರ್ತಿ ಜೊತೆಗೆ ಅತ್ತೆನೂ ಕಾಣಿಸಿಕೊಂಡಿರೋದು ಕೌತುಕ ಹೆಚ್ಚಿಸಿದೆ.
/newsfirstlive-kannada/media/post_attachments/wp-content/uploads/2024/03/tanvi-Rao-2.jpg)
ಲಕ್ಷ್ಮೀ ಸಾವು ನಿಜನಾ? ಕೀರ್ತಿ ಬಂದು ಲಕ್ಷ್ಮೀನ ಕಾಪಾಡಿದ್ದಾಳಾ? ಹಾಗಾದರೆ ಕೀರ್ತಿ ಬದುಕಿದ್ದಾಳಾ? ಇಲ್ಲ ತಾನೇ ಎಲ್ಲಾ ಅಂತ ಘರ್ಜಿಸೋಕೆ ಹೋಗಿ ಕಾವೇರಿ ಮಾನಸಿಕ ಸಮತೋಲನ ಕಳೆದಕೊಂಡು ಯೋಚಿಸ್ತಿದ್ದಾಳಾ? ಹೀಗೆ ಸಾಲು ಸಾಲು ಪ್ರಶ್ನೆಗಳ ಜೊತೆಗೆ ಸ್ಟೋರಿ ಸಾಗ್ತಿದ್ದು, ಟಿಆರ್​ಪಿಯಲ್ಲೂ ಟಾಪ್​ 5ರ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ ರಾರಾಜಿಸುತ್ತಿದೆ. ಇದಿಷ್ಟು ಧಾರಾವಾಹಿಯ ಸದ್ಯದ ಸಾರಾಂಶ. ವಿಶೇಷ ಅಂದ್ರೇ ಕೀರ್ತಿ ಪಾತ್ರ ಮಾಡ್ತಿರೋ ತನ್ವಿ ರಾವ್ ಬಗ್ಗೆ ಒಂದು​ ಇಂಟ್ರಸ್ಟಿಂಗ್​ ಮಾಹಿತಿ ಸಿಕ್ಕಿದೆ. ತನ್ವಿಗೆ ಡ್ಯಾನ್ಸ್​ ಅದ್ರೇ ಸಿಕ್ಕಾಪಟ್ಟೆ ಇಷ್ಟ.
ಇದನ್ನೂ ಓದಿ:BBK11: 50ನೇ ದಿನಕ್ಕೆ ಬಿಗ್​ಬಾಸ್​ ಮನೆಯ ಆಟ ಮುಗಿಸಿದ ಸ್ಪರ್ಧಿ ಇವರೇ ನೋಡಿ
/newsfirstlive-kannada/media/post_attachments/wp-content/uploads/2024/06/tanvi.jpg)
ಪಕ್ಕಾ ಕ್ಲಾಸಿಕಲ್​ ಡ್ಯಾನ್ಸರ್​ ಕೂಡ ಹೌದು. ಅವರನ್ನು ಸೋಷಿಯಲ್​ ಮೀಡಿಯಾದಲ್ಲಿ ಫಾಲೋ ಮಾಡೋರಿಗೆ ತನ್ವಿ ಡ್ಯಾನ್ಸ್​ ಪ್ರೀತಿ ಎಂಥಹದ್ದು ಅಂತ ಗೊತ್ತಿರುತ್ತೆ. ತನ್ವಿ ಆಗಾಗ ವಿಭಿನ್ನ ಡ್ಯಾನ್ಸ್​ ರೀಲ್ಸ್​ ಮಾಡ್ತಾನೇ ಇರ್ತಾರೆ. ಅದು ಸುಖಾ​ ಸುಮ್ನೆ ಮಾಡೋಲ್ಲ. ಪಕ್ಕಾ ಪ್ಲ್ಯಾನ್​ ಮಾಡ್ಕೊಂಡು ಕಾನ್ಸೆಪ್ಟ್​ ಜೊತೆಗೆ ಕ್ಯಾಮರಾ ಮುಂದೆ ಕಲಾ ಪ್ರದರ್ಶನ ಮಾಡ್ತಾರೆ. ಇತ್ತೀಚೆಗೆ ಅವರು ಮಾಡಿದ ಒಂದಿಷ್ಟು ರೀಲ್ಸ್ ವೈರಲ್​ ಆಗ್ತಿವೆ. ಜಸ್ಟ್​ ವಾವ್​ ಎನ್ನುವಂತಿದೆ ತನ್ವಿ ಡ್ಯಾನ್ಸಿಂಗ್​ ಸ್ಕಿಲ್ಸ್​.
/newsfirstlive-kannada/media/post_attachments/wp-content/uploads/2024/11/laxmi-1.jpg)
ತನ್ವಿ ಜೊತೆಗೆ ಸಖತ್​ ಆಗಿ ಡ್ಯಾನ್ಸ್ ಮಾಡ್ತಿರೋ ಹುಡುಗ ಯಾರು ಅನ್ನೋ ಪ್ರಶ್ನೆ ಮೂಡಬಹುದು. ತನ್ವಿ ಅವರ ಜೊತೆಗೆ ಹೆಜ್ಜೆ ಹಾಕಿದ್ದು ಶರಣ್​. ತನ್ವಿ ಅವರ ಕಾಲೇಜಿನ ಗೆಳಯ. ಕಾಲೇಜು ದಿನಗಳಿಂದಲೂ ಈ ಜೋಡಿ ಡ್ಯಾನ್ಸ್ ಪಾರ್ಟನರ್ಸ್​. ಇನ್ನೂ ಬೀಚ್​ನಲ್ಲಿ ಹಿಂದಿ ಹಾಡಿಗೆ ಸ್ಟೇಪ್ ಹಾಕಿದೆ ಈ ಜೋಡಿ ಕಣ್ಣೀಗೆ ಹಬ್ಬದಂತೆ ಇತ್ತು ನೃತ್ಯ ವೈಭವ. ಒಟ್ಟಿನಲ್ಲಿ ಕೀರ್ತಿ ಪಾತ್ರಕ್ಕೆ ವೀಕ್ಷಕರು ಕಾಯ್ತಾಯಿದ್ದು, ಸದ್ಯ ಅವರ ರೀಲ್ಸ್​ಗಳು ಅಭಿಮಾನಿಗಳಿಗೆ ಮುದ ನೀಡ್ತಿವೆ. ಲಕ್ಷ ಲಕ್ಷ ಜನ ವೀಕ್ಷಿಸಿ ತನ್ವಿಗೆ ಹರಸಿ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us