/newsfirstlive-kannada/media/post_attachments/wp-content/uploads/2025/03/RANYA-RAO-3.jpg)
ರಾಜ್ಯದಲ್ಲಿ ಚಿನ್ನ (Gold) ಭಾರೀ ಸದ್ದು ಮಾಡ್ತಿದೆ. ಬಂಗಾರ ಬೆಲೆ ಏರಿಕೆ ವಿಚಾರಕ್ಕೆ ಅಲ್ಲ. ನಟಿ ರನ್ಯಾ ರಾವ್ ಅವರಿಂದಾಗಿ. ದುಬೈನಿಂದ ಬರೋಬ್ಬರಿ 14.2 ಕೆಜಿ ಚಿನ್ನವನ್ನು ಅಕ್ರಮವಾಗಿ ತಂದು ಜೈಲು ಸೇರಿದ್ದಾರೆ. ಮಾರ್ಚ್ 3 ರಂದು ರನ್ಯಾ ತಂದಿರುವ ಚಿನ್ನದ ಒಟ್ಟು ಮೌಲ್ಯ 12.56 ಕೋಟಿ ಎಂದು ಹೇಳಲಾಗಿದೆ.
ಭಾರತಕ್ಕೆ ಹೋಲಿಸಿದರೆ ದುಬೈನಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ. ದುಬೈನಲ್ಲಿ ಚಿನ್ನ ಮತ್ತು ಆಭರಣಗಳ ಮೇಲೆ ಜಿಎಸ್ಟಿ ಇರುವುದಿಲ್ಲ. ಉತ್ಪಾದನಾ ವೆಚ್ಚವೂ ತುಂಬಾ ಕಡಿಮೆ ಇರುತ್ತದೆ. ಇದೇ ಕಾರಣಕ್ಕೆ ದುಬೈನಲ್ಲಿ ಚಿನ್ನದ ಬೆಲೆ ಕಡಿಮೆ. ಹೀಗಾಗಿ ಭಾರತೀಯರು ಚಿನ್ನ ಖರೀದಿ ಮಾಡೋದಕ್ಕಾಗಿಯೇ ದುಬೈಗೆ ಹೋಗ್ತಾರೆ.
ಇದನ್ನೂ ಓದಿ: ರನ್ಯಾ ರಾವ್ ಕೇಸ್‌ಗೆ ಕಿಂಗ್‌ಪಿನ್.. ಯಾರು ಈ ತರುಣ್ ರಾಜು? ಇವನ ಆ್ಯಕ್ಟಿಂಗ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!
ಆದರೆ ದುಬೈನಿಂದ ಭಾರತಕ್ಕೆ ಚಿನ್ನ ತರಲು ಇತಿ, ಮಿತಿಗಳು ಇವೆ. ಕೇಂದ್ರ ಸರ್ಕಾರ ಚಿನ್ನ ತರುವ ಭಾರತೀಯರಿಗೆ ಕಸ್ಟಮ್ಸ್ ಸುಂಕ ವಿಧಿಸುತ್ತದೆ. ಸಿಬಿಐಟಿಸಿ (Central Board of Indirect Taxes and Customs) ಸುಂಕ ವಿಧಿಸುತ್ತದೆ. ದುಬೈನಿಂದ ಭಾರತಕ್ಕೆ ಒಂದು ಕೆಜಿ ಚಿನ್ನವರೆಗೆ ಚಿನ್ನ ತರಬಹುದು. ಆದರೆ ಅದಕ್ಕೆ ಪೂರಕವಾದ ದಾಖಲೆಗಳು ಬೇಕು. ಜೊತೆಗೆ ಅದಕ್ಕೆ ಅನ್ವಯ ಆಗುವ ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕು. ಭಾರತದ ವಿಮಾನ ನಿಲ್ದಾಣಕ್ಕೆ ಪ್ರವೇಶ ಮಾಡ್ತಿದ್ದಂತೆಯೇ ಪರಿಶೀಲನೆಗೆ ದಾಖಲೆಗಳನ್ನು ನೀಡಬೇಕಾಗುತ್ತದೆ. ದಾಖಲೆಗಳಲ್ಲಿ ಚಿನ್ನದ ಬೆಲೆ, ಶುದ್ಧತೆ ಮತ್ತು ದಿನಾಂಕ ನಮೂದಿಸಿರಬೇಕು.
ಲಿಂಗದ ಪ್ರಕಾರ ಚಿನ್ನದ ಮಿತಿ..!
ದುಬೈನಿಂದ ಚಿನ್ನವನ್ನು ತರಲು ಲಿಂಗದ ಪ್ರಕಾರ ಮಿತಿ ಇದೆ. ದುಬೈಗೆ ಹೋಗೋರು ನೆನಪಿನಲ್ಲಿಡಬೇಕಾದ ಕೆಲವು ವಿಚಾರಗಳು ಹೀಗಿದೆ. ಪುರುಷ ಪ್ರಯಾಣಿಕರು 20 ಗ್ರಾಂವರೆಗೆ ಸುಂಕ ರಹಿತ ಚಿನ್ನವನ್ನು ತರಬಹುದು. ಅಂದರೆ 50,000 ಸಾವಿರ ರೂಪಾಯಿ ವರೆಗೆ ಯಾವುದೇ ಟ್ಯಾಕ್ಸ್ ಇಲ್ಲದೇ ಚಿನ್ನವರನ್ನು ಖರೀದಿಸಿ ತರಬಹುದಾಗಿದೆ.
ಮಹಿಳಾ ಪ್ರಯಾಣಿಕರು/ಮಕ್ಕಳು 40 ಗ್ರಾಂವರೆಗೆ ಸುಂಕ ರಹಿತ (ಗರಿಷ್ಠ ₹1 ಲಕ್ಷ) ಚಿನ್ನ ತರಬಹುದು. ದುಬೈನಲ್ಲಿ 6 ತಿಂಗಳಿಗಿಂತ ಹೆಚ್ಚು ಕಾಲ ಉಳಿದುಕೊಂಡರೆ ಕಮ್ಮಿ ಕಸ್ಟಮ್ಸ್ ಸುಂಕಕ್ಕೆ ಅರ್ಹತೆರಾಗುತ್ತಾರೆ. ಇನ್‌ವಾಯ್ಸ್, ನಿಖರತೆಯ ಪ್ರಮಾಣಪತ್ರ ಮತ್ತು ಗುರುತಿನ ಪುರಾವೆಯಂತಹ ದಾಖಲೆಗಳು ಬೇಕೇಬೇಕು.
ಇದನ್ನೂ ಓದಿ: ಸೊಂಟದ ಸುತ್ತ, ಮಂಡಿ ಕೆಳಗೆ, ಶೂ ಒಳಗೆ.. ರನ್ಯಾ ರಾವ್ ಮೈ ಮೇಲೆಲ್ಲಾ ಚಿನ್ನ; ಅಧಿಕಾರಿಗಳಿಗೆ ಬಿಗ್ ಶಾಕ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್