/newsfirstlive-kannada/media/post_attachments/wp-content/uploads/2024/09/Gold-2.jpg)
ಚಿನ್ನ, ಭಾರತದಲ್ಲಿ ದೀರ್ಘಕಾಲದಿಂದಲೂ ಸಂಪತ್ತಿನ, ಪರಂಪರೆಯ ಹಾಗೂ ಸಂಸ್ಕೃತಿಯ ಗುರುತಾಗಿ ಗುರುತಿಸಿಕೊಂಡು ಬಂದಿದೆ.ಅದರಲ್ಲೂ ಭಾರತೀಯ ಮಹಿಳೆಯರು ಚಿನ್ನದೊಂದಿಗೆ ಸಹಸ್ರಾರು ವರ್ಷಗಳಿಂದ ಒಂದು ಭಾವನಾತ್ಮಕ ಬಾಂಧವ್ಯವನ್ನು ಹೊಂದಿದ್ದಾರೆ. ಇದು ಸಂಭ್ರಮಾಚರಣೆಯ ಕೇಂದ್ರವಾಗಿ ಗುರುತಿಸಿಕೊಂಡು ಬಂದಿದೆ. ಅದರಲ್ಲೂ ಮದುವೆಯಂತಹ ಸಮಾರಂಭದಲ್ಲಿ ಇದು ಸಂಪತ್ತಿನ ಸೌಂದರ್ಯದ ಪ್ರತೀಕವಾಗಿ ಗುರುತಿಸಿಕೊಂಡು ಬಂದಿದೆ. ಯಾವುದೇ ಮದುವೆಯಿರಲಿ ಅಲ್ಲಿ ನೆಂಟರು ಬಂಗಾರವನ್ನು ಉಡುಗೊರೆಯಾಗಿ ನೀಡದೇ ಇದ್ದರೆ ಆ ಸಮಾರಂಭ ಪರಿಪೂರ್ಣವೇ ಆಗುವುದಿಲ್ಲ.
ಇದು ಭಾರತೀಯರು ತಲೆಮಾರುಗಳಿಂದ ತಲೆಮಾರುಗಳಿಗೆ ದಾಟಿಸಿಕೊಂಡು ಬಂದಿರುವ ಚಿನ್ನದ ಮೇಲಿನ ಪ್ರೀತಿ ಅದರಲ್ಲೂ ಮಹಿಳೆಯರಿಗೆ ಬಂಗಾರವೆಂದರೇ ಕೇವಲ ಒಂದು ಬಾಂಧವ್ಯ ಅಲ್ಲ ವ್ಯಾಮೋಹವು ಕೂಡ ಇದೆ ಎಂಬುದನ್ನು ನಾವು ಸಹಸ್ರಾರು ವರ್ಷಗಳಿಂದ ನೋಡಿದ್ದೇವೆ. ಇದರ ಪರಿಣಾಮವೇ ಇಂದು ಭಾರತವೂ ಜಾಗತಿಕವಾಗಿ ಅತಿಹೆಚ್ಚು ಬಂಗಾರ ಹೊಂದಿರುವ ದೇಶಗಳ ನಾಯಕನಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಮನೆಯಲ್ಲಿ ಕೂಡಿಟ್ಟಿರುವ ಬಂಗಾರದಲ್ಲಿ ಭಾರತವನ್ನು ಯಾವ ದೇಶಗಳು ತಲುಪಲು ಆಗಿಲ್ಲ.
ಹಲವು ದೇಶಗಳ ಒಟ್ಟು ಚಿನ್ನದ ಮೀಸಲು ಮೀರಿದ ಬಂಗಾರದ ಶೇಖರಣೆ ನಮ್ಮ ಭಾರತದ ಮನೆ ಮನೆಗಳಲ್ಲೂ ಇವೆ. ಭಾರತೀಯ ಮಹಿಳೆಯರು ಒಟ್ಟು 40 ಸಾವಿರ ಟನ್ ಬಂಗಾರದ ಒಡೆಯರು ಎಂದರೆ ನೀವು ನಂಬಲೇಬೇಕು. ಇದು ವಿಶ್ವದ ಗೋಲ್ಡ್ ರಿಸರ್ವ್ನ (ಚಿನ್ನ ಮೀಸಲು) ಶೇಕಡಾ 11 ರಷ್ಟು ಎಂದು ವರದಿಯೊಂದು ಹೇಳಿದೆ.
ಇದನ್ನೂ ಓದಿ:ನಾನ್ ವೆಜ್ ಊಟ.. ಬಾಯ್ ಫ್ರೆಂಡ್ ಮಾತಿಗೆ ಜೀವ ಬಿಟ್ಟ ಏರ್ ಇಂಡಿಯಾ ಪೈಲಟ್; ಅಸಲಿಗೆ ಆಗಿದ್ದೇನು?
ಜಾಗತಿಕವಾಗಿ ಶ್ರೀಮಂತ ಟಾಪ್ ಐದು ದೇಶಗಳ ಒಟ್ಟು ಚಿನ್ನದ ರಿಸರ್ವ್ನ್ನು ಮೀರಿಸುತ್ತೆ ಭಾರತೀಯ ಮಹಿಳೆಯರು ಧರಿಸುವ ಚಿನ್ನಾಭರಣಗಳು.ಒಂದು ವರದಿಯ ಪ್ರಕಾರ ಯುನೈಟೆಡ್ ಸ್ಟೇಟಸ್ ಬಳಿ ಒಟ್ಟು ಚಿನ್ನದ ಮೀಸಲು ಇರುವುದು 8 ಸಾವಿರ ಟನ್, ಜರ್ಮನಿಯ ಬಳಿ ಇರುವುದು 3,300 ಟನ್ ಮತ್ತು ಇಟಲಿಯ ಬಳಿ 2,450 ಟನ್ ಫ್ರಾನ್ಸ್ ಬಳಿ ಇರೋದು 2400ಟನ್ ಹಾಗೂ ರಷ್ಯಾ ಬಳಿ ಇರೋದು 1,900ಟನ್. ಈ ಎಲ್ಲಾ ದೇಶಗಳ ಒಟ್ಟು ಗೋಲ್ಡ್ ರಿಸರ್ವ್ ಒಟ್ಟು ಮಾಡಿದರು ಕೂಡ ಭಾರತೀಯ ಮಹಿಳೆಯ ಬಳಿ ಇರುವ ಬಂಗಾರದ ಪ್ರಮಾಣವನ್ನು ಅದು ತಲುಪುವಿದಲ್ಲ. ಅಷ್ಟು ಪ್ರಮಾಣದ ಚಿನ್ನದ ಒಡತಿಯರು ನಮ್ಮ ಭಾರತೀಯ ಮಹಿಳೆಯರು.
ಯಾವ ರಾಜ್ಯದ ಮಹಿಳೆಯರು ಅತಿಹೆಚ್ಚು ಚಿನ್ನ ಹೊಂದಿದ್ದಾರೆ?
ಕ್ಸ್ಫರ್ಡ್ ಗೋಲ್ಡ್ ಗ್ರೂಪ್ ನೀಡಿರುವ ವರದಿಯ ಪ್ರಕಾರ ಭಾರತೀಯ ಮನೆಗಳಲ್ಲಿ ವಿಶ್ವದ ಶೇಕಡಾ 11 ರಷ್ಟು ಇದೆ. ಚಿನ್ನದ ಮಾಲೀಕತ್ವದ ವಿಚಾರ ಬಂದಾಗ ದಕ್ಷಿಣ ಭಾರತದ ಮಹಿಳೆಯರು ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತಾರೆ. ದೇಶದ ಒಟ್ಟು ಶೇಕಾಡ 40 ರಷ್ಟು ಚಿನ್ನ ದಕ್ಷಿಣ ಭಾರತದ ಮಹಿಳೆಯರಲ್ಲಿದೆ. ತಮಿಳುನಾಡು ಒಂದರಲ್ಲಿಯೇ ಇದರ ಪ್ರಮಾಣ ಶೇಕಡಾ 28ರಷ್ಟಿದೆ.
ಇದನ್ನೂ ಓದಿ:ಧನುಷ್ -ಐಶ್ವರ್ಯ ರಜಿನಿಕಾಂತ್ಗೆ ಡಿವೋರ್ಸ್ ಮಂಜೂರು; ಅಧಿಕೃತವಾಗಿ ಬೇರೆಯಾದ ‘ಲವ್ಲಿ ಕಪಲ್’
ವಿಶ್ವ ಚಿನ್ನದ ಮಂಡಳಿಯ ಭಾರತದ ನಿರ್ದೇಶಕ ಸೋಮ ಸುಂದರಂ ಹೇಳುವ ಪ್ರಕಾರ 2020-21ರ ಅಧ್ಯಯನದ ಪ್ರಕಾರ ಭಾರತೀಯರ ಮನೆಯಲ್ಲಿ ಸುಮಾರು 21,000-23,000 ಟನ್ ಬಂಗಾರವಿದೆ ಎಂದು ಅಂದಾಜಿಸಲಾಗಿತ್ತು. ಈಗ ಅಂದ್ರೆ 2023ರ ಸಾಲಿಗೆ ಅದರ ಪ್ರಮಾಣ 24 ಸಾವಿರ ಟನ್ ಮುಟ್ಟಿದೆ ಎಂದು ಹೇಳಿದ್ದಾರೆ. ಇಷ್ಟು ಪ್ರಮಾಣದ ಬಂಗಾರ ನಮ್ಮ ದೇಶದ ಶೇಕಡಾ 40 ಜಿಡಿಪಿಗೆ ಸಮ ಎಂದು ಕೂಡ ಸೋಮ ಸುಂದರಂ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಪ್ರಕಾರ ಚಿನ್ನದ ಮಿತಿ ಎಷ್ಟಿದೆ.
ಆದಾಯ ತೆರಿಗೆ ಇಲಾಖೆಯ ನಿಯಮದ ಪ್ರಕಾರ ಭಾರತದಲ್ಲಿ ವಿವಾಹಿತ ಮಹಿಳೆಯರು 500 ಗ್ರಾಂನಷ್ಟು ಚಿನ್ನವನ್ನು ಟ್ಯಾಕ್ಸ್ ಇಲ್ಲದೇ ಇಟ್ಟುಕೊಳ್ಳಬಹುದು. ಅವಿವಾಹಿತ ಮಹಿಳೆಯರು 250 ಗ್ರಾಂ, ಇನ್ನು ಪುರುಷರಿಗೆ ಕೇವಲ ನೂರು ಗ್ರಾಂನಷ್ಟು ಮಾತ್ರ ಬಂಗಾರವನ್ನು ತೆರಿಗೆಯಿಲ್ಲದೇ ಇಟ್ಟುಕೊಳ್ಳಲು ಅವಕಾಶವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ