Advertisment

ತಮಿಳುನಾಡಿಗೆ ಹರಿದ ಕಾವೇರಿ! ಜೂನ್​, ಜುಲೈನಲ್ಲಿ ಎಷ್ಟು ಪ್ರಮಾಣದ ನೀರು ಹರಿದು ಹೋಗಿದೆ?

author-image
AS Harshith
Updated On
ತಮಿಳುನಾಡಿಗೆ ಹರಿದ ಕಾವೇರಿ! ಜೂನ್​, ಜುಲೈನಲ್ಲಿ ಎಷ್ಟು ಪ್ರಮಾಣದ ನೀರು ಹರಿದು ಹೋಗಿದೆ?
Advertisment
  • ನಾಳೆ ದೆಹಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ
  • ಜೂನ್ 1 ರಿಂದ ಜುಲೈ 18 ರವರೆಗೆ ಎಷ್ಟು ನೀರು ಸಂಗ್ರಹವಾಗಿತ್ತು?
  • ಕಾವೇರಿ ತಮಿಳುನಾಡಿಗೆ ಹರಿದ ನೀರಿನ ವಿವರ ಇಲ್ಲಿದೆ

ರಾಜ್ಯದಾದ್ಯಂತ ಹಲವೆಡೆ ಮಳೆ ಬೀಳುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ವರುಣ ತನ್ನ ನರ್ತನ ಮುಂದುವರೆಸಿದ್ದಾನೆ. ಪರಿಣಾಮ ಕನ್ನಡಿಗರ ಜೀವಾಳ ಕಾವೇರಿ ಒಡಲು ತುಂಬಿಸುತ್ತಿದ್ದಾಳೆ.

Advertisment

ಮಳೆಯಿಂದ ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಏರಿಕೆಯಾಗಿದೆ. ಅತ್ತ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿದಿದೆ. ಅದರಂತೆಯೇ ಕಾವೇರಿ ತಮಿಳುನಾಡಿಗೆ ಹರಿದ ನೀರಿನ ವಿವರ ಹೀಗಿದೆ..

ಜೂನ್ 1 ರಿಂದ ಜುಲೈ 18 ರವರೆಗೆ 18 ಟಿಎಂಸಿ ನೀರು ಸಂಗ್ರವಾಗಿತ್ತು. ಜುಲೈ 18 ರ ಬಳಿಕ ಇಲ್ಲಿಯವರೆಗೂ ಮೆಟ್ಟೂರಿಗೆ 1.64 ಲಕ್ಷ ಕ್ಯೂಸೆಕ್ ಒಳ ಹರಿವು ಹರಿದುಬಂದಿದೆ. ಬಿಳಿಗುಂಡ್ಲು ಮೂಲಕ ಹರಿದು ಹೋದ ಕಾವೇರಿ ನೀರಿನ ಪ್ರಮಾಣ 26-28 ಟಿಎಂಸಿ ಅಡಿ ನೀರು. ಮುಂದಿನ 3 -4 ದಿನಗಳ ನೀರಿನ ಪ್ರಮಾಣವೂ ಸೇರಿದರೇ, 40 ಟಿಎಂಸಿಗಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದಿದೆ. ಜೂನ್, ಜುಲೈ ತಿಂಗಳ ಕೋಟಾದ 40 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಹೀಗಾಗಿ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪಾಲನೆ ಆಗಲಿದೆ. ಜೂನ್ , ಜುಲೈ ತಿಂಗಳ ಕೋಟಾದ ಕಾವೇರಿ ನೀರು ಅನ್ನು ತಮಿಳುನಾಡಿಗೆ ಬಿಟ್ಟಂತೆ ಆಗಲಿದೆ.

publive-image

ಇದನ್ನೂ ಓದಿ: KRS Dam: ಉಕ್ಕಿ ಹರಿಯುತ್ತಿದ್ದಾಳೆ ಕಾವೇರಿ! ಬೃಂದಾವನ ಬೋಟಿಂಗ್ ಪಾಯಿಂಟ್ ಜಲಾವೃತ

Advertisment

ನಾಳೆ ದೆಹಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಸಭೆಯಲ್ಲಿ ಕರ್ನಾಟಕದ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಅಂಶಗಳನ್ನು ವಿವರಿಸಲಿದ್ದಾರೆ. ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಮ್ ಗಳಲ್ಲಿ ಸದ್ಯ 108 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಹಾರಂಗಿ ಹೊರತುಪಡಿಸಿ ಉಳಿದ 3 ಡ್ಯಾಮ್ ಗಳಲ್ಲಿ ಶೇ.94 ರಷ್ಟು ನೀರು ಸಂಗ್ರಹವಾಗಿದೆ.

ಇದನ್ನೂ ಓದಿ: ತರುಣ್​-ಸೋನಲ್​ ನಡುವೆ ಪ್ರೀತಿ ಹುಟ್ಟಿದ್ದೇಗೆ? ಆ ಸ್ಟಾರ್​ ನಟನ ತಮಾಷೆಯೇ ಈ ಪ್ರೀತಿಗೆ ಕಾರಣವಾಯ್ತಾ?

ಡ್ಯಾಮ್ ಸುರಕ್ಷತೆ ದೃಷ್ಟಿಯಿಂದ ಡ್ಯಾಮ್ ಸಾಮರ್ಥ್ಯದ ಶೇ.95 ರಷ್ಟು ಮಾತ್ರ ನೀರು ಸಂಗ್ರಹ ಮಾಡಲಾಗುತ್ತಿದೆ. ಹೆಚ್ಚಿನ ಒಳ ಹರಿವು ಇದ್ದಾಗ ಅಧಿಕಾರಿಗಳು ನೀರನ್ನು ಹೊರ ಬಿಡಲಿದ್ದಾರೆ. ಹೀಗಾಗಿ ಈಗ ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಮ್ ಗಳಿಂದ 70 ಸಾವಿರ ಕ್ಯೂಸೆಕ್ ಹೊರ ಹರಿಸಲಾಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment