/newsfirstlive-kannada/media/post_attachments/wp-content/uploads/2024/09/DARSHAN_BALLARY_7.jpg)
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಹೋಗಿ ಇಂದಿಗೆ 9 ದಿನಗಳು. ಬಳ್ಳಾರಿಯ ಕೇಂದ್ರ ಕಾರಾಗೃಹ ಸೇರಿ 9 ದಿನಗಳನ್ನು ಕಳೆದಿದ್ದಾರೆ. ಒಂಭತ್ತು ದಿನದಲ್ಲಿ ದರ್ಶನ್​​​ 735 ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಕಾಫಿ, ಟೀಗಾಗಿ ದರ್ಶನ್ ಜೈಲಿನಲ್ಲಿ ಖರ್ಚು ಮಾಡಿದ್ದಾರೆ. ಪಿಪಿಸಿ ಅಕೌಂಟ್ ನಲ್ಲಿದ್ದ ಹಣವನ್ನು ದರ್ಶನ್​ ಖರ್ಚು ಮಾಡಿದ್ದಾರೆ ಎಂದು ಜೈಲು ಕ್ಯಾಂಟೀನ್ ಮೂಲಗಳಿಂದ ಮಾಹಿತಿ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/09/DARSHAN-13.jpg)
ಟೆನ್ಶನ್​​ ಕಳೆಯಲು ದರ್ಶನ್​​ ಜೈಲಿನಲ್ಲಿ ಕಾಫಿ, ಟೀ ಸೇವಿಸಿದ್ದಾರೆ. ಹೀಗಾಗಿ ಇಲ್ಲಿಯವರೆಗೆ 735 ರೂಪಾಯಿ ಖರ್ಚು ಮಾಡಿದ್ದಾರೆ. ಪ್ರೀಜ್‌ನಸ್೯ ಪ್ರೈವೇಟ್ ಕ್ಯಾಸ್​​ನಲ್ಲಿದ್ದ ಹಣವನ್ನು ಖರ್ಚು ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ 35,000 ರೂ ಹಣ ಪಿಪಿಸಿ ಅಕೌಂಟ್‌ನಲ್ಲಿತ್ತು. ದರ್ಶನ್ ಬಳ್ಳಾರಿ ಜೈಲಿಗೆ ಬಂದ ಬಳಿಕ ಕಾಫಿ, ಟೀ ಮೊರೆ ಹೋಗುವ ಮೂಲಕ A2 ಆರೋಪಿ ಹಣ ವ್ಯಯ ಮಾಡಿದ್ದಾರೆ ಎಂದು ಜೈಲು ಕ್ಯಾಂಟೀನ್ ಮೂಲಗಳಿಂದ ಮಾಹಿತಿ ದೊರೆತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us