/newsfirstlive-kannada/media/post_attachments/wp-content/uploads/2025/04/boys-vs-girls4.jpg)
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಬಾಯ್ಸ್ vs ಗರ್ಲ್ಸ್ (boys vrs girls) ಶೋ ಅಂತ್ಯ ಕಂಡಿದೆ. ಕನ್ನಡದ ಬಿಗ್ಬಾಸ್ ಸೀಸನ್ 11 ಮುಕ್ತಾಯವಾಗುತ್ತಿದ್ದಂತೆ ಈ ಶೋ ಪ್ರಸಾರ ಕಂಡಿತ್ತು. ಇದೀಗ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಕೊನೆಗೊಂಡಿದೆ.
ಇದನ್ನೂ ಓದಿ:ಬಿಗ್ಬಾಸ್ ವೀಕ್ಷಕರಿಗೆ ಶಾಕಿಂಗ್ ಸುದ್ದಿ; ಆರಂಭಕ್ಕೂ ಮುನ್ನವೇ ಶೋಗೆ ಭಾರೀ ಸಂಕಷ್ಟ!
ಹೌದು, ಅನುಪಮಾ ಗೌಡ ಅವರ ನಿರೂಪಣೆಯ ಸಾರಥ್ಯದಲ್ಲಿ ಮೂಡಿ ಬಂದಿತ್ತು ಬಾಯ್ಸ್ vs ಗರ್ಲ್ಸ್ ಶೋ. ಈ ಶೋನಲ್ಲಿ ಬಾಯ್ಸ್ ತಂಡದ ನಾಯಕ ವಿನಯ್ ಗೌಡ ಆಗಿದ್ದರೇ, ಗರ್ಲ್ಸ್ ತಂಡದ ನಾಯಕಿ ಶುಭಾ ಪೂಂಜಾ ಆಗಿದ್ದರು. ಈ ಇಬ್ಬರು ತಮ್ಮ ತಮ್ ತಂಡವನ್ನು ಹ್ಯಾಂಡಲ್ ಮಾಡುತ್ತಿದ್ದರು.
ಈ ತಂಡಗಳಲ್ಲಿ ಬಿಗ್ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್, ಚೈತ್ರಾ ಕುಂದಾಪುರ, ಧನರಾಜ್ ಆಚಾರ್ಯ, ಶೋಭಾ ಶೆಟ್ಟಿ, ಐಶ್ವರ್ಯ ಶಿಂಧೋಗಿ, ಕಾಮಿಡಿ ಕಿಲಾಡಿಗಳ ಖ್ಯಾತಿಯ ಸೂರಜ್, ಅಂತರಪಟ ಖ್ಯಾತಿಯ ಚಂದನಾ, ಕರಿಮಣಿ ನಾಯಕಿ ಸಾಹಿತ್ಯ ಪಾತ್ರಧಾರಿ ಸ್ಪಂದನಾ, ಗಿಚ್ಚಿಗಿಲಿಗಿಲಿ ಖ್ಯಾತಿಯ ಪ್ರಶಾಂತ್, ಮಂಜು ಪಾವಗಡ, ಸ್ಪೂರ್ತಿ ಗೌಡ, ಕೋಳಿ ರಮ್ಯಾ, ವಿವೇಕ್ ಸಿಂಹ ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಿದ್ದರು.
ಜಿಗರ್ ಇರೋ ಹುಡುಗ-ಹುಡುಗೀರ ಜಿದ್ದಾಜಿದ್ದಿ ಎಂಬ ಟ್ಯಾಗ್ ಲೈನ್ನ್ನೊಂದಿಗೆ ಫೆಬ್ರುವರಿ 1ರಿಂದ ಈ ಶೋ ತೆರೆಗೆ ಬಂದಿತ್ತು. ಇದೊಂದು ಸೆಲಿಬ್ರಿಟಿ ಶೋ ಆಗಿತ್ತು. ಸಿಕ್ಕಾಪಟ್ಟೆ ವಾಕ್ ಸಮರ, ಜಬರ್ದಸ್ತ್ ಮನರಂಜನೆ ನೀಡುತ್ತಿದ್ದರು. ಇದೀಗ ಬಾಯ್ಸ್ vs ಗರ್ಲ್ಸ್ ಅಂತ್ಯ ಕಂಡಿದೆ. ಹೀಗಾಗಿ ಕೊನೆಯಲ್ಲಿ ಬಾಯ್ಸ್ vs ಗರ್ಲ್ಸ್ ಫಿನಾಲೆಯ ಗೆಲುವಿನ ಪಟ್ಟ ಯಾರ ತೆಕ್ಕೆಗೆ ಸೇರಲಿದೆ ಎಂದು ವೀಕ್ಷಕರಲ್ಲಿ ಕೂತುಹಲ ಮನೆ ಮಾಡಿತ್ತು. ಇದೀಗ ಅದಕ್ಕೆ ಬ್ರೇಕ್ ಬಿದ್ದಿದೆ. ಈ ಭಾರೀ ಬಾಯ್ಸ್ ಗೆದ್ದು ಬೀಗಿದ್ದಾರೆ. ಆ ಮಧುರ ಗೆಲುವಿನ ಕ್ಷಣವನ್ನು ಎಲ್ಲ ಬಾಯ್ಸ್ ಎಂಜಾಯ್ ಮಾಡಿದ್ದಾರೆ.
ವೀಕ್ಷಕರ ವೋಟಿಂಗ್ ಹಾಗೂ ಇಷ್ಟು ದಿನಗಳ ಪರ್ಫಾಮನ್ಸ್ ಆಧಾರದ ಮೇಲೆ ಶೋನ ವಿನ್ನರ್ ಬಾಯ್ಸ್ ಎಂದು ಡಿಕ್ಲೇರ್ ಮಾಡಲಾಗಿದೆ. ಲೂಸ್ ಮಾದ ಯೋಗಿ ಹಾಗೂ ನಟಿ ಮೇಘನಾ ರಾಜ್ ಅವರು ಟ್ರೋಫಿ ಜೊತೆಗೆ 10 ಲಕ್ಷ ಕ್ಯಾಶ್ ಪ್ರೈಸ್ ನೀಡಿದ್ದಾರೆ. ಸದ್ಯ ವೀಕೆಂಡ್ನಲ್ಲಿ ಯಾವ ಕಾರ್ಯಕ್ರಮ ಬರಲಿದೆ ಅನ್ನೋದನ್ನ ವಾಹಿನಿ ಇನ್ನು ಅನೌನ್ಸ್ ಮಾಡಿಲ್ಲ. ಈ ವಾರ ಮಜಾ ಟಾಕೀಸ್ ಸ್ಪೆಷಲ್ ಸಂಚಿಕೆ ಪ್ಲ್ಯಾನ್ ಮಾಡಿದೆ ಅಂತೆ ತಂಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ