ಚಾರ್ಜ್ ಶೀಟ್ ಸಲ್ಲಿಕೆ ಹಂತಕ್ಕೆ ತಲುಪಿದ ಬೆನ್ನಲ್ಲೇ ಅಧಿಕಾರಿಗಳಿಗೆ ಹಣ ಬಿಡುಗಡೆ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸ್ವಂತ ಹಣದಿಂದ ತನಿಖೆ ನಡೆಸಿದ್ದ ಪೊಲೀಸರು
ಹೈದ್ರಾಬಾದ್ CFSLಗೆ ನೀಡಬೇಕಿರುವ ಹಣದ ಡಿಟೈಲ್ಸ್ ಕೊಟ್ಟಿರುವ ಅಧಿಕಾರಿಗಳು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಿಖೆ ನಡೆಸಿದ ಪೊಲೀಸರು 17 ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನಡೆಸುತ್ತಿದ್ದ ದರ್ಶನ್ ಅವರನ್ನು ಮೊನ್ನೆಯಷ್ಟೇ ಬಳ್ಳಾರಿ ಸೆಂಟ್ರಲ್ ಜೈಲಿಗೆ ಹಾಕಿದ್ದಾರೆ. ಉಳಿದ ಆರೋಪಿಗಳನ್ನು ಬೇರೆ ಬೇರೆ ಜಿಲ್ಲೆಯ ಜೈಲಿಗಟ್ಟಿದ್ದಾರೆ. ಈವರೆಗೆ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಪೊಲೀಸರು ತನಿಖೆ ವೇಳೆ ಖರ್ಚು ಮಾಡಿದ್ದು 5 ಲಕ್ಷ ರೂಪಾಯಿ ಆಗಿದೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ರಾಮಾಚಾರಿ ಚಾರು; ಮೌನ ಗುಡ್ಡಮನೆ ಈಗ ಸ್ಟಾರ್ ನಟಿ!
ಪೊಲೀಸ್ ಅಧಿಕಾರಿಗಳು ತಮ್ಮ ಸ್ವಂತ ಹಣದಿಂದ ಕೊಲೆ ಕೇಸ್ ಬಗ್ಗೆ ತನಿಖೆ ನಡೆಸಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಪೊಲೀಸರಿಗೆ ಹಣ ವಾಪಸ್ ನೀಡಿದೆ. ಪೊಲೀಸ್ ಇಲಾಖೆ ಒಟ್ಟು 5 ಲಕ್ಷ ಹಣ ಬಿಡುಗಡೆ ಮಾಡಿದೆ. ಈ ಹಿಂದೆ ತಮ್ಮ ಸ್ವಂತ ಖರ್ಚಿನಲ್ಲಿ ಪೊಲೀಸರು ತನಿಖೆ ಮಾಡ್ತಿದ್ದಾರೆ. ಸರ್ಕಾರ ಹಣ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಸಿಎಫ್ಎಸ್ಎಲ್ ಹಣ ಪಾವತಿ ಬಾಕಿ ಉಳಿದಿದೆ. ಹೈದ್ರಾಬಾದ್ನಿಂದ 8 ರಿಪೋರ್ಟ್ ತಲುಪಬೇಕಿದೆ. ಗೃಹ ಇಲಾಖೆ ಈ ರಿಪೋರ್ಟ್ಗಳಿಗೆ ಹಣ ಪಾವತಿ ಮಾಡಬೇಕಿದೆ. ಪೊಲೀಸರು ಹೈದ್ರಾಬಾದ್ ಸಿಎಫ್ಎಸ್ಎಲ್ಗೆ ನೀಡಬೇಕಿರುವ ಹಣದ ಡಿಟೈಲ್ಸ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಕೊಲೆ ಪ್ರಕರಣ ತನಿಖೆ ಖರ್ಚಾಗುವುದು ಕೇವಲ 1 ರಿಂದ 2 ಲಕ್ಷ ಮಾತ್ರ. ಹೈ-ಪ್ರೋಫೈಲ್ ಕೇಸ್ ಆಗಿದ್ದರಿಂದ ಪೊಲೀಸರು ಕುಲಂಕುಷವಾಗಿ ತನಿಖೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ