/newsfirstlive-kannada/media/post_attachments/wp-content/uploads/2025/04/Rana_Extradition.jpg)
26/11 ದಾಳಿಯ ಮಾಸ್ಟರ್ ಮೈಂಡ್ ತಹಾವೂರ್ ರಾಣಾನನ್ನು 16 ವರ್ಷಗಳ ಬಳಿಕ ಅಮೆರಿಕಾದಿಂದ ಭಾರತಕ್ಕೆ ಮರಳಿ ಕರೆತರಲಾಗಿದೆ. ಸದ್ಯ ಕೋರ್ಟ್ 18 ದಿನಗಳ ಕಾಲ NIA ಕಸ್ಟಡಿಗೆ ನೀಡಿದೆ. ಎನ್ಐಎ ಸಂಸ್ಥೆಯು 2008ರ ದಾಳಿಗೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆಸಲಿದೆ.
ಇನ್ನು, ರಾಣಾನನ್ನು ಭಾರತಕ್ಕೆ ಕರೆ ತರಲು ಕೋಟಿ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ವರದಿಗಳ ಪ್ರಕಾರ, ಗಲ್ಫ್ ಸ್ಟ್ರೀಮ್ ಜಿ -550 (gulfstream g550) ಐಷಾರಾಮಿ ಚಾರ್ಟರ್ ವಿಮಾನ (charter private jet) ಮೂಲಕ ಉಗ್ರನನ್ನು ಕರೆ ತರಲಾಗಿದೆ. ಇದರ ಬೆಲೆ ಗಂಟೆಗೆ ಸುಮಾರು 9 ಲಕ್ಷ ರೂಪಾಯಿ.
ಎಷ್ಟು ಖರ್ಚಾಯಿತು?
ಕಳೆದ ಬುಧವಾರ ಬೆಳಗಿನ ಜಾವ 2.15ರ ಸುಮಾರಿಗೆ ಅಮೆರಿಕಾ ಮಿಯಾಮಿದಿಂದ ವಿಮಾನ ಹೊರಟಿತ್ತು. ಅದೇ ದಿನ ಸಂಜೆ 7 ಗಂಟೆಗೆ ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ತಲುಪಿತ್ತು. ಇಲ್ಲಿ ಸುಮಾರು 11 ಗಂಟೆಗಳ ಕಾಲ ವಿಮಾನಕ್ಕೆ ವಿರಾಮ ನೀಡಲಾಯಿತು. ಗುರುವಾರ ಸಂಜೆ 6:22 ರ ಸುಮಾರಿಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಒಟ್ಟು ಪ್ರಯಾಣದ ಅವಧಿ 40 ಗಂಟೆಯಾಗಿದೆ. ರಾಣಾನನ್ನು ಕರೆದುಕೊಂಡು ಬರಲು ಸುಮಾರು 4 ಕೋಟಿ ರೂಪಾಯಿ ಅಷ್ಟು ಖರ್ಚು ಆಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ವಿಚಾರಣೆಯ ರಣವ್ಯೂಹದಲ್ಲಿ ಉಗ್ರ ರಾಣಾ.. ಭಾರತಕ್ಕೆ ಕರೆ ತರ್ತಿದ್ದಂತೆ ಏನೆಲ್ಲ ಆಯ್ತು..?
ಸಾಮಾನ್ಯವಾಗಿ ಮಿಯಾಮಿಯಿಂದ ದೆಹಲಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದರೆ 4 ಲಕ್ಷ ರೂಪಾಯಿ ಬೇಕು. ತಹಾವೂರ್ ರಾಣಾನನ್ನು ಮರಳಿ ತರಲು ಭಾರತ ಸರ್ಕಾರ 100 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿದೆ.
ಯಾಕೆ ಅಷ್ಟೊಂದು ಖರ್ಚು..?
ಯಾಕೆ ಈ ಉಗ್ರನ ಕರೆ ತರಲು ಅಷ್ಟೊಂದು ಖರ್ಚು ಮಾಡಲಾಯ್ತು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದಕ್ಕೆ ಸರಳ ಉತ್ತರ ಭದ್ರತಾ ದೃಷ್ಟಿಕೋನದಿಂದ. ವಾಸ್ತವವಾಗಿ ರಾಣಾ, ದೊಡ್ಡ ಮಟ್ಟದ ಭಯೋತ್ಪಾದಕ. ಹೀಗಾಗಿ ಅಮೆರಿಕ ಮತ್ತು ಭಾರತ ಎರಡೂ ದೇಶಗಳನ್ನು ಆತನನ್ನು ಕರೆ ತರಲು ಭಾರೀ ಎಚ್ಚರಿಕೆಯನ್ನು ವಹಿಸಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಪ್ಪಿಸಲು ವಿಶೇಷ ವಿಮಾನ ಬಾಡಿಗೆ ಪಡೆಯಾಗಿದೆ.
ಇದನ್ನೂ ಓದಿ: ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್ ಎಸ್ಕೇಪ್..! Video
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ