newsfirstkannada.com

₹15 ಸಮೋಸಾ, ₹10 ಚಹಾ.. ಎಲೆಕ್ಷನ್‌ಗೆ ಅಭ್ಯರ್ಥಿಗಳು ಎಷ್ಟು ಖರ್ಚು ಮಾಡಬೇಕು; ಪ್ರತಿಯೊಂದಕ್ಕೂ ರೇಟ್‌ ಫಿಕ್ಸ್‌!

Share :

Published March 29, 2024 at 8:44pm

Update March 29, 2024 at 8:47pm

    ಒಂದು ಸಮೋಸಾ 15 ರೂ. ಹಾಗೂ ಒಂದು ಚಹಾ 15 ರೂಪಾಯಿ ಫಿಕ್ಸ್!

    ಹಲವು ರಾಜ್ಯಗಳಲ್ಲಿ ಚಿಕನ್ ಕೆಜಿಗೆ 250 ರೂ. ಮಟನ್ ಕೆಜಿಗೆ 500 ರೂ

    ಇಡ್ಲಿ, ವಡಾ, ಸಂಬಾರ್ - 20 ರೂ. ದೋಸೆ, ಉಪ್ಮಾ - 30 ರೂಪಾಯಿ ನಿಗದಿ

ನವದೆಹಲಿ: ಲೋಕಸಭಾ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಮೊದಲ ಹಾಗೂ ಎರಡನೇ ಹಂತದ ಚುನಾವಣೆಗೆ ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಪ್ರಚಾರ ರಂಗೇರುತ್ತಿರುವಾಗಲೇ ಎಲೆಕ್ಷನ್‌ಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ. ಚುನಾವಣಾ ಪ್ರಚಾರದ ವೇಳೆ ಬೇಕಾಬಿಟ್ಟಿ ಖರ್ಚು ಮಾಡೋದಕ್ಕೆ ಕಡಿವಾಣ ಹಾಕಿದ್ದು, ಸಮೋಸಾದಿಂದ ಹಿಡಿದು ಊಟ, ತಿಂಡಿ, ಚಹಾದವರೆಗೂ ರೇಟ್‌ ಫಿಕ್ಸ್ ಮಾಡಿದೆ.

ಇದನ್ನೂ ಓದಿ: ಚಿಯಾ ಬೀಜಗಳ ಸೇವನೆ ಮಾಡ್ತಾ ಇಲ್ವಾ; ಈಗಲೇ ಕುಡಿಯೋದಕ್ಕೆ ಶುರು ಮಾಡಿ.. ಇದ್ರಿಂದ ಆಗೋ ಪ್ರಯೋಜನ ಏನು?

2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನದಿಂದ ಮಾಡುವ ಖರ್ಚಿಗೆ ಲೆಕ್ಕ ಕೊಡಬೇಕು. ನಾಮಪತ್ರ ಸಲ್ಲಿಸಿದ ಮೇಲೆ ಮತದಾನ ನಡೆಯುವವರೆಗೂ ಓರ್ವ ಅಭ್ಯರ್ಥಿ 95 ಲಕ್ಷ ರೂಪಾಯಿ ಒಳಗೆ ಖರ್ಚು ಮಾಡಿ ಲೆಕ್ಕ ಕೊಡಬೇಕು. ಚುನಾವಣಾ ಆಯೋಗ ನಿಗದಿ ಮಾಡಿರೋ ರೇಟ್‌ಗಳ ವಿವರ ಇಲ್ಲಿದೆ.

ಯಾವ ರಾಜ್ಯದಲ್ಲಿ ಎಷ್ಟು ರೇಟ್‌!
ಪಂಜಾಬ್‌ (ಜಲಂಧರ್)
ಒಂದು ಸಮೋಸಾ 15 ರೂ.
ಒಂದು ಚಹಾ 15 ರೂ.
ನಿಂಬೆ ಜ್ಯೂಸ್ 15- 20 ರೂ.
ಚಿಕನ್ ಕೆಜಿಗೆ 250 ರೂ
ಮಟನ್ ಕೆಜಿಗೆ 500 ರೂ

ಪಂಜಾಬ್‌ನ ಜಲಂಧರ್‌ ಪ್ರಾಂತ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಪ್ರಚಾರದಲ್ಲಿ ಭಾಗಿಯಾಗುವ ಜನರಿಗೆ ಒಂದು ಸಮೋಸಾ ಕೊಡಿಸಿದರೆ 15 ರೂಪಾಯಿ ಲೆಕ್ಕ ಕೊಡಬೇಕು. ಅದೇ ರೀತಿ ಒಂದು ಚಹಾ ಕೊಡಿಸಿದರೂ 15 ರೂಪಾಯಿ ಲೆಕ್ಕ ಕೊಡಬೇಕಿದೆ. ನಿಂಬೆ ಜ್ಯೂಸ್ 20 ರೂಪಾಯಿ ಫಿಕ್ಸ್ ಮಾಡಲಾಗಿದ್ದು, ಒಂದು ಗ್ಲಾಸ್‌ಗೆ 15 ರೂಪಾಯಿ. ಇನ್ನು ಒಂದು ಕೆಜಿ ಚಿಕನ್‌ಗೆ 250 ರೂ, ಮಟನ್ ಕೆಜಿಗೆ 500 ರೂಪಾಯಿ ನಿಗದಿ ಮಾಡಲಾಗಿದೆ.

ಯಾವ ರಾಜ್ಯದಲ್ಲಿ ಎಷ್ಟು ರೇಟ್‌!

ಮಧ್ಯಪ್ರದೇಶ (ಮಂಡಲ)
ಒಂದು ಸಮೋಸಾ 7.50 ರೂ.
ಒಂದು ಚಹಾ 7 ರೂ.

ಮಧ್ಯಪ್ರದೇಶ (ಬಾಲಘಾಟ್)
ಚಹಾ – 5 ರೂಪಾಯಿ
ಸಮೋಸಾ – 10 ರೂಪಾಯಿ
ಇಡ್ಲಿ, ವಡಾ, ಸಂಬಾರ್ – 20 ರೂ.
ದೋಸೆ, ಉಪ್ಮಾ – 30 ರೂ.

ಈಶಾನ್ಯ ರಾಜ್ಯಗಳು
ಬ್ಲ್ಯಾಕ್ ಟೀ – 5 ರೂ.
ಟೀ – 10 ರೂ.
ಬಾತುಕೋಳಿ, ಹಂದಿ ಮಾಂಸ – ಕೆಜಿಗೆ 300 ರೂ. ಮತ್ತು 400 ರೂ.

ಮಣಿಪುರ
ಚಹಾ, ಸಮೋಸ, ಕಚೋರಿ, ಖಜೂರ್ – ಒಂದಕ್ಕೆ ತಲಾ 10 ರೂ.

ಗ್ರೇಟರ್ ನೋಯ್ಡಾ
ಸಮೋಸ, ಟೀ – ಒಂದಕ್ಕೆ 10 ರೂ.
ಕಚೋರಿ – 15 ರೂ.
ಸ್ಯಾಂಡ್‌ವಿಚ್‌ – 25 ರೂ.
ಜಿಲೇಬಿ – ಕೆಜಿಗೆ 90 ರೂ

ತಮಿಳುನಾಡು (ಚೆನ್ನೈ)
ಟೀ – 15 ರೂ.
ಕಾಫಿ – 15 – 20 ರೂ.
ಚಿಕನ್ ಬಿರಿಯಾನ್ – 150 ರೂ.

ಉತ್ತರ ಗೋವಾ
ಬಟಾಟಾ ವಡಾ – 15 ರೂ.
ಕಾಫಿ – 20 ರೂ.

ಹೀಗೆ ಪ್ರತಿಯೊಂದು ರಾಜ್ಯಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಲಾಗಿದ್ದು, ಜಿಲ್ಲಾಡಳಿತ ಈ ಖರ್ಚುಗಳ ಮೇಲೆ ನಿಗಾ ಇಡಲಿದೆ. ಚುನಾವಣಾ ಅಭ್ಯರ್ಥಿಗಳು ಬಳಸುವ ಕಾರು, ಹೆಲಿಕಾಪ್ಟರ್‌, ಫಾರ್ಮ್ ಹೌಸ್‌, ಕೂಲರ್, ಎಸಿ, ಸೋಫಾ ಸೇರಿದಂತೆ ಬಳಸುವ ದುಬಾರಿ ಮೂಲಭೂತ ಸೌಕರ್ಯಗಳು ಈ ಖರ್ಚಿನ ಒಳಗೆ ಬರುತ್ತವೆ.

ಲೋಕಸಭಾ ಚುನಾವಣೆಯಲ್ಲಿ ರಾಜ್ಯಗಳಲ್ಲಿ ಸ್ಪರ್ಧಿಸುವ ಓರ್ವ ಅಭ್ಯರ್ಥಿ 95 ಲಕ್ಷ ರೂಪಾಯಿ ಖರ್ಚು ಮಾಡಬಹುದು. ಕೇಂದ್ರಾಡಳಿತ ಪ್ರದೇಶ, ಗೋವಾ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ 75 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹15 ಸಮೋಸಾ, ₹10 ಚಹಾ.. ಎಲೆಕ್ಷನ್‌ಗೆ ಅಭ್ಯರ್ಥಿಗಳು ಎಷ್ಟು ಖರ್ಚು ಮಾಡಬೇಕು; ಪ್ರತಿಯೊಂದಕ್ಕೂ ರೇಟ್‌ ಫಿಕ್ಸ್‌!

https://newsfirstlive.com/wp-content/uploads/2024/03/samosa-and-tea.jpg

Load More