Advertisment

ಸದೃಢ ಆರೋಗ್ಯಕ್ಕೆ ಬೇಕು ಸರಿಯಾದ ನಿದ್ರೆ: ಯಾವ ವಯಸ್ಸಲ್ಲಿ ಎಷ್ಟು ಗಂಟೆ ನಿದ್ರಿಸಬೇಕು ಗೊತ್ತಾ..?

author-image
Gopal Kulkarni
Updated On
ಹೃದಯ ಸಂಬಂಧಿ ಕಾಯಿಲೆ ಇದ್ಯಾ? ನಿದ್ದೆ ಬರ್ತಿಲ್ಲವೇ?  ಹಾಗಾದ್ರೆ ಈ ಸ್ಟೋರಿ ನೀವು ಓದಲೇಬೇಕು
Advertisment
  • ನಿಮ್ಮ ಸದೃಢ ಆರೋಗ್ಯಕ್ಕೆ ಜೀವನ ಶೈಲಿಗೆ ಬೇಕು ಸರಿಯಾದ ಗಂಟೆಗಳ ನಿದ್ದೆ
  • ನಿದ್ದೆಗೂ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಿದೆ ಒಂದು ಬಿಡಿಸಲಾರದ ನಂಟು
  • ಕಡಿಮೆ ನಿದ್ರಿಸುವುದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು

ಆರೋಗ್ಯ ಹಾಗೂ ನಿದ್ರೆಗೆ ಒಂದು ಅವಿನಾಭಾವ ನಂಟಿದೆ. ನಿದ್ರೆ ದೇಹಕ್ಕೆ ಅನಿವಾರ್ಯವಾದ ಒಂದು ಚಟುವಟಿಕೆ. ಊಟದ ಹಾಗೆ ಕುಡಿಯುವ ನೀರಿನ ಹಾಗೆ ದೇಹದಲ್ಲಿ ಹುಟ್ಟುವ ಒಂದು ಬಯಕೆ. ಅದಕ್ಕೆ ಅದರದೆ ಆದ ಪ್ರಾಧಾನ್ಯತೆ ಇದೆ. ನೀವು ನಿಮ್ಮ ಆರೋಗ್ಯವನ್ನು ಸರಿಯಾದ ನಿಟ್ಟಿನಲ್ಲಿ ಕಾಪಾಡಿಕೊಳ್ಳಬೇಕು ಅಂದ್ರೆ ಪೌಷ್ಠಿಕ ಆಹಾರ ಎಷ್ಟು ಮುಖ್ಯವೋ ಸರಿಯಾದ ನಿದ್ರೆ ಕೂಡ ಅಷ್ಟೇ ಮುಖ್ಯವಾಗುತ್ತೆ. ಹಾಗಿದ್ರೆ ನಮ್ಮ ಆರೋಗ್ಯದ ಒಂದು ಭಾಗವಾದ ನಿದ್ರೆಯನ್ನು ಎಷ್ಟು ಗಂಟೆಯವರೆಗೆ ಮಾಡಬೇಕು. ಎಷ್ಟು ಗಂಟೆಯ ನಿದ್ದೆ ಮಾಡುವುದರಿಂದ ನಮ್ಮ ಆರೋಗ್ಯ ಮತ್ತಷ್ಟು ವೃದ್ಧಿಯಾಗಬಹುದು ಅಂತ ನೋಡ್ತಾ ಹೋಗುವುದಾದ್ರೆ, ಇತ್ತೀಚೆಗೆ ನಡೆಸಲ್ಪಟ್ಟ ಸಿಡಿಸಿ ಅಂದ್ರೆ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರದ ಅಧ್ಯಯನ ಹೇಳುವ ಪ್ರಕಾರ ಆಯಾ ವಯಸ್ಸಿಗೆ ಆಯಾ ಆಯಾ ಸಮಯ ನಿದ್ದೆ ಮಾಡಬೇಕು ಎಂದು ಹೇಳಲಾಗಿದೆ. ರೀವಿಲ್ಸ್ ಅಧ್ಯಯನದಲ್ಲಿ ಬಹಿರಂಗವಾಗಿರುವ ನಿದ್ರೆಗೆ ಸಂಬಂಧಿಸಿದ ವಿಷಯವೇನು ಅಂತ ನೋಡುವುದಾದ್ರೆ..

Advertisment

ಇದನ್ನೂ ಓದಿ:ದಿನಕ್ಕೆ ಎರಡೇ ಹೊತ್ತು ಊಟ.. ಕತ್ರಿನಾ ಕೈಫ್ ಸೌಂದರ್ಯದ ಗುಟ್ಟು ಬಿಚ್ಚಿಟ್ಟ ಖ್ಯಾತ ನ್ಯೂಟ್ರಿಷನಿಸ್ಟ್‌; ಹೇಳಿದ್ದೇನು?

publive-image

18-60 ವಯಸ್ಸಿನವರು 7 ಗಂಟೆ ನಿದ್ರೆ ಮಾಡಬೇಕು

ನಿದ್ರೆಯ ವಿಷಯವಾಗಿ ನಡೆದಿರುವ ಈ ಅಧ್ಯಯನದಲ್ಲಿ 18 ರಿಂದ 60 ವಯಸ್ಸಿನವರೆಲ್ಲಾ ಕಡ್ಡಾಯವಾಗಿ 7 ಗಂಟೆಗಳ ಕಾಲ ನಿದ್ರೆಯನ್ನು ಮಾಡಲೇಬೇಕು ಅಂತ ಹೇಳಲಾಗಿದೆ. ಸಿಡಿಸಿ ಮಾಡಿರುವ ಅಧ್ಯಯನದಲ್ಲಿ ಹೇಳಿರುವ ಪ್ರಕಾರ, ಈ ವಯಸ್ಸಿನವರು ಕಡ್ಡಾಯವಾಗಿ ಕನಿಷ್ಠ 7 ಗಂಟೆಯವರೆಗೆ ನಿದ್ದೆಯನ್ನು ಮಾಡಲೇಬೇಕು. ಇದರಿಂದಾಗಿನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢವಾಗಿರುತ್ತದೆ ಎಂದು ಹೇಳಲಾಗಿದೆ.

publive-image
ಕೇವಲ 18 ರಿಂದ 60 ವರ್ಷದವರು ಮಾತ್ರವಲ್ಲ, ನವಜಾತ ಶಿಶುಗಳಿಂದ ಹಿಡಿದು 65ಕ್ಕೂ ಮೇಲ್ಪಟ್ಟ ವಯಸ್ಸಿನವರು ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂಬುದುನ್ನು ಕೂಡ ಈ ಅಧ್ಯಯನ ಬಹಿರಂಗ ಮಾಡಿದೆ. ಅದರ ವಿವರ ಇಲ್ಲಿದೆ.

Advertisment
  • ನವಜಾತ ಶಿಶು- 0-3 ತಿಂಗಳು: 14 ರಿಂದ 17 ಗಂಟೆ
  • ಪುಟ್ಟ ಮಕ್ಕಳು- 4 ರಿಂದ 12 ತಿಂಗಳು: 12 ರಿಂದ 16 ತಾಸು
  • 1 ರಿಂದ 2 ವರ್ಷದ ಮಕ್ಕಳು: 11 ರಿಂದ 14 ಗಂಟೆಗಳ ನಿದ್ರೆ
  • 3-5 ವರ್ಷದ ಮಕ್ಕಳು: 10 ರಿಂದ 13 ತಾಸುಗಳು
  • ಶಾಲಾ ವಯಸ್ಸಿನ ಮಕ್ಕಳು: 6 ರಿಂದ 12 ವರ್ಷದ ಮಕ್ಕಳು: 9 ರಿಂದ 12 ತಾಸು
  • ಹದಿಹರೆಯದ ಯುವಕರು: 8 ರಿಂದ 10 ತಾಸು
  • ವಯಸ್ಕರರು: 18 ರಿಂದ 60 ವರ್ಷ: 7 ತಾಸುಗಳ ನಿದ್ರೆ
  • ವಯಸ್ಕರರು 61 ರಿಂದ 64 ವರ್ಷದವರು: 7 ರಿಂದ 9 ತಾಸು
  • 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು: 7 ರಿಂದ 8 ತಾಸು

ವಯಸ್ಸಾದಂತೆಲ್ಲಾ ನಿದ್ದೆ ಅನ್ನೋದು ಸದೃಢ ಆರೋಗ್ಯದ ಒಂದು ಭಾಗವಾಗುತ್ತದೆ. ನಮಗೆ ವಯಸ್ಸಾಯ್ತು ನಿದ್ದೆ ಊಟ ಇನ್ಮೇಲೆ ಕಡಿಮೆ ಆಗುತ್ತೆ ಅನ್ನುವವರು ಈ ವಿಷಯವನ್ನು ಗಂಭೀರವಾಗಿ ನೋಡಬೇಕು. ನಿಮ್ಮ ಆರೋಗ್ಯ ಸರಿಯಾಗಿ ಇರಬೇಕು ಅಂದ್ರೆ ನೀವು 7 ರಿಂದ 9 ತಾಸು ನಿದ್ದೆ ಮಾಡಲೇಬೇಕು. ನಿದ್ರಾಹೀನತೆ ಕಾಡಿದರೆ ತಪ್ಪದೇ ವೈದ್ಯರನ್ನು ಕಂಡು ಬೇಕಾದ ಸಲಹೆಗಳನ್ನು ಪಡೆಯಬೇಕು.

ಇದನ್ನೂ ಓದಿ:ಮೇಕಪ್​​ ಮಾಡೋ ಹೆಣ್ಣುಮಕ್ಕಳೇ ಹುಷಾರ್​​.. ಸಿಕ್ಕಸಿಕ್ಕಲ್ಲಿ ಬ್ಯೂಟಿ ಪ್ರಾಡಕ್ಟ್​​ ಖರೀದಿಸೋ ಮುನ್ನ ಎಚ್ಚರ!

Advertisment

ಒಂದು ವೇಳೆ ನೀವು ಕೆಲವು ದಿನಗಳ ಕಾಲ ಕಡಿಮೆ ನಿದ್ದೆ ಮಾಡಿದ್ದರೆ ನಿಮ್ಮ ದೇಹ ನಿದ್ರೆಗೆಟ್ಟಷ್ಟು ಸಮಯ ಮತ್ತೆ ನಿದ್ರಿಸಲು ಬೇಡಿಕೆ ಇಡುತ್ತದೆ ಅದನ್ನು ತಪ್ಪದೇ ಮಾಡಬೇಕು. ಹಿಂದೆ ನಿದ್ದೆಗೆಟ್ಟ ಸಮಯದಷ್ಟು ಮತ್ತೆ ನಿದ್ದೆ ಮಾಡಬೇಕು. ಗರ್ಭಿಣಿಯರಲ್ಲೂ ಕೂಡ ನಿದ್ದೆ ತುಂಬಾ ಪ್ರಮುಖವಾದ ವಿಷಯವಾಗುತ್ತದೆ. ನೀವು ಒಂದು ವೇಳೆ ನಿದ್ದೆಗೆಟ್ಟರೆ ಹಾರ್ಮೋನಲ್​ನಲ್ಲಿ ಬದಲಾವಣೆ ಹಾಗೂ ದೈಹಿಕವಾಗಿ ಆಯಾಸದೊಂದಿಗೆ ನರಳುವ ಸಾಧ್ಯತೆ ಇದೆ.

ಸರಿಯಾದ ಸಮಯದಷ್ಟು ನಿದ್ದೆ ಮಾಡುವುದರಿಂದ ಆಗಲಿರುವ ಲಾಭವೇನು ಗೊತ್ತಾ..?

  • ನಿದ್ರೆ, ಹಸಿವು ನೀರಡಿಕೆ, ಕಾಮ ಇವೆಲ್ಲವೂ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳು. ಇವುಗಳನ್ನು ಸರಿಯಾಗಿ ನಿರ್ವಹಿಸಿದರೆ ರೋಗ ರುಜಿನೆಗಳಿಂದ ನಿಮ್ಮನ್ನು ನೀವು ದೂರ ಇಡಬಹುದು
  • ಸಮೃದ್ಧ ನಿದ್ದೆಯೂ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವಾರು ಇನ್​ಫೆಕ್ಷನ್​ಗಳಿಂದ ಕಾಪಾಡುತ್ತದೆ
  • ನಿದ್ರೆಯೂ ನಮ್ಮ ಹಾರ್ಮೋನ್ಸ್ ಮೇಲೆ, ಹಸಿವಿನ ಮೇಲೆ ಹಾಗೂ ದೇಹದ ತೂಕದ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ಸರಿಯಾದ ನಿದ್ದೆ ಮಾಡುವ ಮೂಲಕ ನಾವು ನಮ್ಮ ದೇಹದ ತೂಕವನ್ನು ಸರಿಯಾಗಿ ನಿರ್ವಹಿಸಬಹುದು
  • ನಿದ್ದೆಗೂ ಮಾನಸಿಕ ನೆಮ್ಮದಿಗೂ ಸಹ ಒಂದು ನಂಟು ಇದೆ. ಆಯಾ ವಯಸ್ಸಿಗೆ ದಿನಕ್ಕೆ ಸರಿಯಾದ ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಭಾವತೀವ್ರತೆಗಳನ್ನು ನಿಯಂತ್ರಿಸುವ ಮೂಲಕ ನಮ್ಮ ಮಾನಸಿಕ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಬಹುದು
  • ಸರಿಯಾದ ಗಂಟೆಗಳಷ್ಟು ನಿದ್ದೆ ಮಾಡುವುದರಿಂದ ರಕ್ತದೊತ್ತಡ, ಕೊಲೆಸ್ಟ್ರಾಲ್ ಹಾಗೂ ಹೃದಯಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು
  • ಕಡಿಮೆ ನಿದ್ರೆ ಮಾಡುವುದರಿಂದಾಗಿ ಮಧಮೇಹ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ , ಅತೀ ರಕ್ತದೊತ್ತಡ ಹಾಗೂ ಪಾರ್ಶ್ವವಾಯುವಿನಂತ ಕಾಯಿಲೆಗಳಿಗೆ ಆಹ್ವಾನ ಕೊಟ್ಟಂತೆಸರಿಯಾದ ನಿದ್ರೆ ನಿಮ್ಮ ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯವನ್ನು ವೃದ್ಧಿಸುತ್ತದೆ
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment