Advertisment

ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಾಯಿ ಬಳಿಯಿರೋ ಆಸ್ತಿ ಎಷ್ಟು ಗೊತ್ತಾ?

author-image
Veena Gangani
Updated On
ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಾಯಿ ಬಳಿಯಿರೋ ಆಸ್ತಿ ಎಷ್ಟು ಗೊತ್ತಾ?
Advertisment
  • ರಿಲಯನ್ಸ್ ಸಾಮ್ರಾಜ್ಯ ಕಟ್ಟಿದ್ದೇ ಮುಖೇಶ್ ಅಂಬಾನಿ ತಂದೆ ಧೀರೂಭಾಯಿ ಅಂಬಾನಿ
  • ಧೀರೂಭಾಯಿ ಅಂಬಾನಿಗೆ ಬೆನ್ನೆಲುಬಾಗಿ ನಿಂತಿದ್ದೇ ಪತ್ನಿ ಕೋಕಿಲಾ ಬೆನ್ ಅಂಬಾನಿ
  • ಬ್ಯುಸಿನೆಸ್​ನಲ್ಲಿ ಮಕ್ಕಳಿಗೂ ಮಾರ್ಗದರ್ಶನ ಮಾಡಿದ್ದ ತಾಯಿ ಕೋಕಿಲಾ ಬೆನ್ ಅಂಬಾನಿ

ಎಲ್ಲೆಲ್ಲೂ ಈಗ ಅಂಬಾನಿ ಕುಟುಂಬದ್ದೇ ಸುದ್ದಿ. ಅಂಬಾನಿ ಕುಟುಂಬದ 3ನೇ ತಲೆಮಾರು, ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಕೇವಲ ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಜನ ಮಾತಾಡಿಕೊಳ್ಳುವಂತೆ ನಡೆದಿದೆ. ಅನಂತ್ ಅಂಬಾನಿ ಮದುವೆಗೆ 5 ಸಾವಿರ ಕೋಟಿ ಖರ್ಚು ಮಾಡಿದ್ದಾರಂತೆ. ಭಾರತದ ಸೆಲೆಬ್ರಿಟಿಗಳು, ಇಂಟರ್​ನ್ಯಾಷನಲ್ ಸೆಲೆಬ್ರಿಟಿಗಳೂ ಭಾಗಿ ಆಗಿದ್ರು. ಬಾಲಿವುಡ್​ ನಟ, ನಟಿಯರು, ಸೌತ್ ಸ್ಟಾರ್ಸ್, ಹಾಲಿವುಡ್ ಸ್ಟಾರ್​ಗಳೂ ಮನರಂಜನೆ ನೀಡಿದ್ರು. ಅಬ್ಬಾ ಸುದ್ದಿ ಒಂದೆರಡಲ್ಲ.

Advertisment

ಇದನ್ನೂ ಓದಿ: ​ಅಣ್ಣನನ್ನು ಭೇಟಿಯಾಗಲು ಜೈಲಿಗೆ ಬಂದ ತಮ್ಮ ದಿನಕರ್ ತೂಗುದೀಪ; ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸಾಥ್‌

publive-image

ಆದ್ರೆ, ಅಂಬಾನಿ ಕುಟುಂಬ ಈ ಮಟ್ಟಕ್ಕೆ ಬೆಳೆಯೋಕೆ ಕಾರಣವಾದ, ಈಗಲೂ ಅಂಬಾನಿ ಕುಟುಂಬದ ಯಾವುದೇ ಬ್ಯುಸಿನೆಸ್​ನಲ್ಲೂ ನೇರವಾಗಿ ಭಾಗಿಯಾಗದ, ಎಲೆ ಮರೆ ಕಾಯಿಯಂತೆ ಇದ್ದರೂ, ಕುಟುಂಬದ ಬ್ಯುಸಿನೆಸ್​ನ ಬೆಳವಣಿಗೆಗೆ ತಮ್ಮ ಶ್ರಮವನ್ನ ಧಾರೆ ಎರೆದ ಅಂಬಾನಿ ಕುಟುಂಬದ ಹಿರಿಯ ತಲೆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿಯೇ ಧೀರೂಭಾಯಿ ಅಂಬಾನಿಯವರ ಕಥೆ. ಅವ್ರು ಹೇಗೆ ತಮ್ಮ ಸಾಮ್ರಾಜ್ಯವನ್ನ ಕಟ್ಟಿ ಬೆಳೆಸಿದ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ಅದೇ ಧೀರೂಭಾಯಿ ಅಂಬಾನಿಯವರಿಗೆ ಶಕ್ತಿಯಾಗಿ ನಿಂತಿದ್ದೋರು, ಕುಟುಂಬನ್ನ ನೋಡಿಕೊಂಡೋರು, ಸಮಾಜಕ್ಕೂ ತಮ್ಮ ಕೊಡುಗೆಯನ್ನ ಕೊಡ್ತಿರೋರು ಅವ್ರ ಪತ್ನಿ ಕೋಕಿಲಾ ಬೆನ್ ಧೀರೂಭಾಯಿ ಅಂಬಾನಿ.

ಫೆಬ್ರವರಿ 24, 1934ರಲ್ಲಿ ಗುಜರಾತ್​ನ ಜಮ್​ನಗರದಲ್ಲಿ ಹುಟ್ಟಿದ ಕೋಕಿಲಾ ಬೆನ್, 1955ರಲ್ಲಿ ಧೀರೂಭಾಯಿ ಅಂಬಾನಿಯವರು ಮದುವೆಯಾದಾಗ, ಅಂಬಾನಿ ಇನ್ನೂ ಬ್ಯುಸಿನೆಸ್ ದುನಿಯಾದ ಕನಸು ಕಾಣ್ತಿದ್ದೋರು. ಮುಂದೆ ಜಾಮ್​ನಗರ್​ನಿಂದಲೇ ತಮ್ಮ ರಿಲಯನ್ಸ್​ ಉದ್ಯಮವನ್ನೂ ಸ್ಥಾಪಿಸಿದ್ರು. ಉದ್ಯಮದಲ್ಲಿ ಅತೀ ಎತ್ತರಕ್ಕೆ ಧೀರೂಭಾಯಿ ಅಂಬಾನಿ ಬೆಳೆಯೋದಕ್ಕೆ ಅವರ ಪತ್ನಿ ಕೋಕಿಲಾ ಬೆನ್ ಮಾಡಿದ ತ್ಯಾಗದ ಕಾಣಿಕೆಯೂ ಹೆಚ್ಚಿದೆ. ಕೋಕಿಲಾ ಬೆನ್​ರ ಬೆಂಬಲದಿಂದಾಗಿಯೇ ಅಂಬಾನಿ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಸಾಧ್ಯವಾಯ್ತು. ಅಂಬಾನಿ ಜೊತೆ ಸ್ಟ್ರಾಂಗ್ ಪಿಲ್ಲರ್ ಆಗಿ ನಿಂತಿದ್ದು, ಮನೆಯ ಸಂಪೂರ್ಣ ಹೊಣೆಯನ್ನ ಹೊತ್ತಿದ್ದು ಅವರ ಪತ್ನಿ ಕೋಕಿಲಾ ಬೆನ್. ಪತಿ ಉದ್ಯಮ ಜಗತ್ತಿನಲ್ಲಿ ಬೆಳೆದಂತೆಲ್ಲಾ ಅಂದಿನ ಕಾಲಕ್ಕೆ 10ನೇ ತರಗತಿ ಪಾಸ್ ಆಗಿದ್ದ ಕೋಕಿಲಾ ಬೆನ್, ತಮ್ಮ ಜೀವನದಲ್ಲೂ ಬದಲಾವಣೆ ತಂದುಕೊಂಡ್ರು. ಇಂಗ್ಲೀಷ್​ನಲ್ಲಿ ಜನರ ಜೊತೆ ವ್ಯವಹರಿಸೋದನ್ನ ಕಲಿತುಕೊಂಡ್ರು.

Advertisment

publive-image

ನೇರವಾಗಿ ರಿಲಯನ್ಸ್​​ನ ಯಾವುದೇ ಉದ್ಯಮದಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿಲ್ಲ. ಆದ್ರೆ, ಅಂಬಾನಿ ಕುಟುಂಬದ ಬ್ಯುಸಿನೆಸ್ ಜರ್ನಿಯಲ್ಲಿ ಕೋಕಿಲಾ ಬೆನ್​ರ ಕೊಡುಗೆ ದೊಡ್ಡದು. ಇವತ್ತಿಗೂ ಅಂಬಾನಿ ಕುಟುಂಬದಲ್ಲಿ ಕೋಕಿಲಾ ಬೆನ್​ರ ಸಲಹೆ, ಸೂಚನೆಗಳಿಗೆ ತುಂಬಾನೇ ಗೌರವ ನೀಡಲಾಗುತ್ತೆ. ತಮ್ಮ ಮಕ್ಕಳ ಅಂದ್ರೆ ಮುಖೇಶ್ ಹಾಗೂ ಅನಿಲ್ ಅಂಬಾನಿಯವರ ಬ್ಯುಸಿನೆಸ್​ನ ಆರಂಭಿಕ ದಿನಗಳಲ್ಲಿ ಅವ್ರಿಗೆ ಸೂಕ್ತ ಸಲಹೆಗಳನ್ನ ನೀಡಿ, ಗೈಡ್ ಮಾಡಿ ಮುನ್ನಡೆಸಿದ್ದು ಕೋಕಿಲಾ ಬೇನ್. 2005ರಲ್ಲಿ ಮುಖೇಶ್ ಹಾಗೂ ಅನಿಲ್ ಅಂಬಾನಿ ಬೇರೆಯಾದಾಗ, ಹಂಚಿಕೆ ವಿಚಾರದಲ್ಲೂ ಮುಂದಾಳತ್ವ ವಹಿಸಿದ್ದು ಕೋಕಿಲಾ ಬೆನ್. ಇವತ್ತಿಗೂ ಅಂಬಾನಿ ಕುಟುಂಬದಲ್ಲಿ ಏನೇ ಕೆಲಸಗಳು ಆದ್ರೂ, ಅದಕ್ಕೆ ಮೊದಲು ಕೋಕಿಲಾ ಬೆನ್​ರ ಸಲಹೆಯನ್ನ ಪಡೆಯಲಾಗುತ್ತೆ.

ಇದನ್ನೂ ಓದಿ:ಮಹಾನಟಿ ವಿನ್ನರ್​ ಪ್ರಿಯಾಂಕ ಆಚಾರ್​​ಗೆ ಅಭಿಮಾನಿಗಳಿಂದ ಸ್ಪೆಷಲ್ ವಿಶ್​​; ಏನದು?

publive-image

ಅಷ್ಟೇ ಅಲ್ಲ, ಕೋಕಿಲಾ ಬೇನ್ ಕೂಡ ಹತ್ತಾರು ಸಾವಿರ ಕೋಟಿಯ ಒಡತಿ. ಎಲ್ಲೂ ಸಾರ್ವಜನಿಕವಾಗಿ ಕೋಕಿಲಾ ಬೆನ್ ಅಂಬಾನಿಯ ಆಸ್ತಿ ಮೌಲ್ಯ ಎಷ್ಟು ಅನ್ನೋದು ಜಗಜ್ಜಾಹೀರಾಗಿಲ್ಲ. ಆದ್ರೆ, ಹಲವು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ಕೋಕಿಲಾ ಬೆನ್​ರ ಒಟ್ಟು ಆಸ್ತಿಯ ಮೌಲ್ಯ 18 ಸಾವಿರ ಕೋಟಿ ಅಂತ ತಿಳಿದು ಬಂದಿದೆ. ರಿಲಯನ್ಸ್ ಇಂಡಸ್ಟ್ರಿಯ ಸಾಮ್ರಾಜ್ಯ, ಕುಟುಂಬದ ಆಸ್ತಿಯ ಮೌಲ್ಯ ಇದೆಲ್ಲವನ್ನೂ ಪರಿಗಣಿಸಿದಾಗ 18 ಸಾವಿರ ಕೋಟಿಗಿಂತಲೂ ಹೆಚ್ಚೂ ಇರಬಹುದು ಅಂತ ಅಂದಾಜಿಸಬಹುದು. ರಿಲಯನ್ಸ್ ಇಂಡಸ್ಟ್ರಿಯಲ್ಲಿ ಮುಖೇಶ್ ಅಂಬಾನಿ ಹಾಗೂ ಅವರ ಖಾಸಗಿ ಸಂಸ್ಥೆಗಳು ಒಟ್ಟಾಗಿ ಶೇಕಡ 47.29 ಷೇರುಗಳನ್ನ ಹೊಂದಿದೆ. ಆದ್ರೆ, ವೈಯಕ್ತಿಕವಾಗಿ ನೋಡಿದ್ರೆ ಮುಖೇಶ್, ನೀತಾ, ಆಕಾಶ್, ಇಶಾ, ಅನಂತ್ ಅಂಬಾನಿಗಿಂತಲೂ ಹೆಚ್ಚಿನ ಷೇರುಗಳನ್ನ, ಒಂದರ್ಥದಲ್ಲಿ ಕುಟುಂಬದ ಎಲ್ಲರಿಗಿಂತ ಅತೀ ಹೆಚ್ಚು ಷೇರುಗಳನ್ನ ಹೊಂದಿರೋದು ಕೂಡ ಕೋಕಿಲಾ ಬೇನ್. ಮುಖೇಶ್, ನೀತಾ, ಆಕಾಶ್, ಇಶಾ, ಅನಂತ್ ಅಂಬಾನಿ ತಲಾ ಶೇಕಡ 0.12ರಷ್ಟು ಅಂದ್ರೆ 75 ಲಕ್ಷ ಷೇರುಗಳನ್ನ ಹೊಂದಿದ್ದಾರೆ. ಆದ್ರೆ ಕೋಕಿಲಾ ಬೆನ್ ಅಂಬಾನಿ ಇವರಿಗಿಂತ ದುಪಟ್ಟು ಅಂದ್ರೆ ಶೇಕಡ 0.24ರಷ್ಟು, ಒಟ್ಟಾರೆ 1.5 ಕೋಟಿ ಷೇರುಗಳನ್ನ ಹೊಂದಿದ್ದಾರೆ.

Advertisment

publive-image

ಕೋಕಿಲಾ ಬೆನ್ ಲೋ ಪ್ರೊಫೈಲ್ ಮೆಂಟೇನ್ ಮಾಡುತ್ತಾರೆ. ಐಷಾರಾಮಿ ಬಂಗಲೆಯಲ್ಲೇ ಇದ್ರೂ ಸಿಂಪಲ್ ಆಗಿ ಇರ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಕೂಡ ತೀರಾ ಕಡಿಮೆ. ಆದ್ರೆ, ಕೋಕಿಲಾ ಬೆನ್ ಧೀರೂಭಾಯಿ ಅಂಬಾನಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರಮುಖವಾಗಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನ ನೀಡುತ್ತಲೇ ಬಂದಿದ್ದಾರೆ. ಪ್ರತಿಷ್ಠಿತ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಆರೋಗ್ಯ ಸೇವೆಯನ್ನ ನೀಡುವ ಕೋಕಿಲಾ ಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯನ್ನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಿಲಯನ್ಸ್ ಫೌಂಡೇಷನ್ ಮೂಲಕ ಹಲವು ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಮಾಜಕ್ಕೆ ಅವರು ಕೊಟ್ಟ ಕೊಡುಗೆ ಅವರ ಕುಟುಂಬದ ಬ್ಯುಸಿನೆಸ್ ಎಂಪೈರ್ ಇದೆಲ್ಲವನ್ನೂ ಮೀರಿ, ಮಹಿಳಾ ಶಕ್ತಿಯಾಗಿ, ಬಲಿಷ್ಠ ವ್ಯಕ್ತಿಯಾಗಿ, ಸಹಾನುಭೂತಿ ಇರುವ ಮಹಿಳೆಯಾಗಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.

ವಿಶೇಷ ವರದಿ: ನವೀನ್​ ಕುಮಾರ್ ಬಾಗೇಪಲ್ಲಿ, ನ್ಯೂಸ್​​ಫಸ್ಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment