/newsfirstlive-kannada/media/post_attachments/wp-content/uploads/2025/06/IPL_TROPHY_CAPTAINS.jpg)
ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಪಂದ್ಯ ಆಡಲಿದೆ. ಎರಡು ತಂಡಗಳು ಬಲಿಷ್ಠವಾಗಿದ್ದು ಯಾವ ತಂಡ ಜಯಭೇರಿ ಬಾರಿಸೋತ್ತೋ ಆ ತಂಡ ಚೊಚ್ಚಲ ಟ್ರೋಫಿಗೆ ಮುತ್ತಿಡಲಿದೆ. ಆರ್ಸಿಬಿ ಫೈನಲ್ ಪ್ರವೇಶ ಮಾಡಿದ್ದರಿಂದ ಫೈನಲ್ ಮ್ಯಾಚ್ ಹೆಚ್ಚು ಮಹತ್ವ ಪಡೆದಿದೆ. ಇದರ ಜೊತೆ ಫೈನಲ್ನಲ್ಲಿ ಟ್ರೋಫಿ ಎತ್ತಿ ಹಿಡಿಯುವ ತಂಡಕ್ಕೆ ಎಷ್ಟು ಕೋಟಿ ಹಣ ನೀಡಲಾಗುತ್ತದೆ?.
2025 ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಫೈನಲ್ನಲ್ಲಿ ಭರ್ಜರಿ ಪೈಪೋಟಿ ನಡೆಸಲಿವೆ. ಲೀಗ್ ಪಂದ್ಯ, ಎಲಿಮಿನೇಟರ್, ಕ್ವಾಲಿಫೈಯರ್ ಪಂದ್ಯಗಳಲ್ಲಿ ಉಳಿದ ಎಂಟು ತಂಡಗಳು ಹೊರ ಹೋಗಿವೆ. ಹೀಗಾಗಿ ಫೈನಲ್ನಲ್ಲಿ ಈ ಎರಡರಲ್ಲಿ ಯಾವುದಾದರೂ ಒಂದು ತಂಡ ಮಾತ್ರ ಕಪ್ ಗೆಲ್ಲುವುದು ಖಚಿತವಾಗಿದೆ. ಗೆದ್ದ ತಂಡ ಹಾಗೂ ಸೋತ ತಂಡಕ್ಕೆ ಎರಡಕ್ಕೂ ಕೋಟಿ, ಕೋಟಿ ಹರಿದು ಬರಲಿದೆ.
ಇದನ್ನೂ ಓದಿ:ಫೈನಲ್ ಪಂದ್ಯಕ್ಕೂ ಮೊದಲೇ RCBಗೆ ಬಿಗ್ ಶಾಕ್.. ಸ್ಫೋಟಕ ಓಪನರ್ ಫಿಲ್ ಸಾಲ್ಟ್ ಎಲ್ಲಿಗೆ ಹೋದರು?
ಇಂದಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿಗಳು ಹಾಗೂ ಟ್ರೋಫಿ ಸಿಗಲಿದೆ. ರನ್ನರ್ ಅಪ್ ಟೀಮ್ಗೆ 5 ಕೋಟಿ ಅಲ್ಲ, 10 ಕೋಟಿ ಅಲ್ಲ.. ಒಟ್ಟು 13 ಕೋಟಿ ರೂಪಾಯಿ ಹಣ ಸಿಗುತ್ತದೆ. ಏಕೆಂದರೆ 2022ರಿಂದಲೂ ಐಪಿಎಲ್ ಟ್ರೋಫಿಯಲ್ಲಿ ಗೆಲ್ಲುವ ತಂಡಕ್ಕೆ ಇದೇ ಮೊತ್ತದ ಹಣವನ್ನು ನೀಡುತ್ತ ಬರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಐಪಿಎಲ್ ಸೀಸನ್ಗಳಲ್ಲಿ ಬಹುಮಾನ ಮೊತ್ತ ಏರುತ್ತಲೇ ಬರುತ್ತಿದೆ. 2008ರಲ್ಲಿ ಇದು ಆರಂಭವಾದಾಗ ಚೆನ್ನೈ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ಪಡೆದು 4.8 ಕೋಟಿ ರೂಪಾಯಿಗಳ ಬಹುಮಾನ ಪಡೆದಿತ್ತು. ರನ್ನರ್ ಅಪ್ಪ ಆಗಿದ್ದ ಚೆನ್ನೈ ಕೇವಲ 2.4 ಕೋಟಿ ಹಣ ಪಡೆದಿತ್ತು. ಆದರೆ ಈಗ ಇದರ ಮೊತ್ತದಲ್ಲಿ ಬದಲಾವಣೆ ಆಗಿದ್ದು ಗೆದ್ದ ತಂಡಕ್ಕೆ 20 ಕೋಟಿ ರೂಪಾಯಿ ಹಾಗೂ ರನ್ನರ್ ಅಪ್ ತಂಡಕ್ಕೆ 13 ಕೋಟಿ ಹಣ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ