newsfirstkannada.com

108 KG ತೂಕ ಇಳಿಸಿಕೊಂಡಿದ್ದ ಅನಂತ್​​ ಅಂಬಾನಿ; ಮತ್ತೆ ದಪ್ಪ ಆಗಿದ್ದೇಕೆ..?

Share :

Published March 2, 2024 at 6:18am

Update March 2, 2024 at 10:07am

  ನನ್ನ ಮಗ ಅಸ್ತಮಾದಿಂದ ಬಳಲುತ್ತಿದ್ದ ಎಂದ ತಾಯಿ ನೀತಾ ಅಂಬಾನಿ!

  ಅನಂತ್​ ಅಂಬಾನಿ ದೇಹದ ತೂಕದಲ್ಲಿ ಬದಲಾವಣೆ ಕಂಡಿದ್ದು ಹೇಗೆ?

  ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಕೋಟಿ, ಕೋಟಿ ಖರ್ಚು

ಉದ್ಯಮಿ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಪ್ರೀ ವೆಡ್ಡಿಂಗ್‌ ಸಂಭ್ರಮ ಶುರುವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹ ಮಹೋತ್ಸವ ನಡೆಯುತ್ತಿದೆ.

ಇದನ್ನು ಓದಿ: ಅಬ್ಬಾ.. ಪಾಪ್ ಸಿಂಗರ್‌ ರಿಹಾನ್ನಾಗೆ 60 ಕೋಟಿ; ಅಂಬಾನಿ ಮಗನ ಮದುವೆಯ ಒಟ್ಟು ಖರ್ಚು ಎಷ್ಟು ಗೊತ್ತಾ?

ಹೀಗಾಗಿ ಗುಜರಾತ್‌ನ ಜಾಮ್‌ನಗರಕ್ಕೆ ದೇಶ, ವಿದೇಶದ ಪ್ರಖ್ಯಾತ ಗಣ್ಯರು ಆಗಮಿಸುತ್ತಿದ್ದಾರೆ. ಈ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಇದರ ನಡುವೆ 18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿ ಮತ್ತೆ ಅವರು ದಪ್ಪ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ನೀತಾ ಅಂಬಾನಿ ಅವರು ಅಸಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನೀತಾ ಅಂಬಾನಿ, ಅನಂತ್ ಯಾವುದೇ ರೀತಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿಲ್ಲ. ಆದರೆ ದೇಹದ ತೂಕವನ್ನು ಹೊರ ಹಾಕಲು ಕಟ್ಟುನಿಟ್ಟಾದ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸುತ್ತಿದ್ದರು. ಆದರೆ ಅಷ್ಟೊತ್ತಿಗೆ ಅನಂತ್​ ತೀವ್ರ ಅಸ್ತಮಾದಿಂದ ಬಳಲುತ್ತಿದ್ದ. ಜೊತೆಗೆ ಅವರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಆದ್ದರಿಂದ ಸಾಕಷ್ಟು ಸ್ಟೀರಾಯ್ಡ್‌ಗಳನ್ನು ನೀಡಬೇಕಾಯಿತು. ಇದರ ಪರಿಣಾಮದಿಂದಾಗಿ ಅನಂತ್ ತೂಕ ಮತ್ತೆ ಹೆಚ್ಚಾಯಿತು ಎಂದು ಹೇಳಿಕೊಂಡಿದ್ದಾರೆ.

ಅಸ್ತಮಾ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಔಷಧಿಗಳ ಬಳಕೆಯು ಉಸಿರಾಟದ ರಂಧ್ರವನ್ನು ತೆರೆಯಲು ಸಹಾಯ ಮಾಡುತ್ತದೆ. ಇದು ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಆದರೆ ಇದರ ಅಡ್ಡಪರಿಣಾಮವೆಂದರೆ ತೂಕ ಹೆಚ್ಚಾಗುತ್ತದೆ. ಹೀಗೆ ಸ್ಟೀರಾಯ್ಡ್ ಔಷಧಿಗಳ ಬಳಕೆಯಿಂದ ಅನಂತ್​ ಅಂಬಾನಿ ದೇಹದ ತೂಕದಲ್ಲಿ ಬದಲಾವಣೆ ಕಂಡಿದೆ. ಸದ್ಯ ಜಾಮ್‌ನಗರಕ್ಕೆ ಈಗಾಗಲೇ ಬಾಲಿವುಡ್, ಹಾಲಿವುಡ್‌ನ ಗಣ್ಯರ ದಂಡು ಹರಿದು ಬಂದಿದೆ. ಇಂದು ಸಂಜೆ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಪಾಪ್ ರಾಣಿ ರಿಹಾನ್ನಾ ಅವರ ಶೋ ವಿಶೇಷವಾಗಿದೆ. ಪಾಪ್ ಸಿಂಗರ್ ರಿಹಾನ್ನಾ ನಿನ್ನೆಯೇ ಭಾರತಕ್ಕೆ ಆಗಮಿಸಿದ್ದು, ಕಲರ್‌ಫುಲ್ ಕಾರ್ಯಕ್ರಮಕ್ಕೆ ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

108 KG ತೂಕ ಇಳಿಸಿಕೊಂಡಿದ್ದ ಅನಂತ್​​ ಅಂಬಾನಿ; ಮತ್ತೆ ದಪ್ಪ ಆಗಿದ್ದೇಕೆ..?

https://newsfirstlive.com/wp-content/uploads/2024/03/anant-ambani-1.jpg

Load More