Advertisment

ಮನೆಯ ರೂಮ್​ನಲ್ಲಿಯೇ ಗಾಂಜಾ ಬೆಳೆದ ಭೂಪ; ರೇಡ್ ಮಾಡಿದ ಪೊಲೀಸರಿಗೆ ಶಾಕ್​

author-image
Gopal Kulkarni
Updated On
ಮನೆಯ ರೂಮ್​ನಲ್ಲಿಯೇ ಗಾಂಜಾ ಬೆಳೆದ ಭೂಪ; ರೇಡ್ ಮಾಡಿದ ಪೊಲೀಸರಿಗೆ ಶಾಕ್​
Advertisment
  • ಗ್ರೇಟರ್​ ನೊಯ್ಡಾದಲ್ಲಿ ನಿಲ್ಲದ ಮಾದಕ ವಸ್ತುಗಳ ಬೆಳೆಯುವಿಕೆ
  • ತನ್ನ ಅಪಾರ್ಟ್​ಮೆಂಟ್ ರೂಮ್​ನಲ್ಲಿಯೇ ಗಾಂಜಾ ಬೆಳೆದ ಭೂಪ
  • ದಾಳಿ ಮಾಡಿದ ಪೊಲೀಸರು ಬೆಕ್ಕಸ ಬೆರಗಾಗಿ ಹೋಗಿದ್ದು ಏಕೆ?

ಇತ್ತೀಚೆಗಷ್ಟೇ ಮಾದಕ ದ್ರವ್ಯ ತಯಾರಿಸುತ್ತಿದ್ದ ಲ್ಯಾಬ್ ಒಂದರ ಮೇಲೆ ದಾಳಿ ನಡೆಸಿದ್ದ ಗ್ರೇಟರ್ ನೊಯ್ಡಾ ಪೊಲೀಸರು. ಈಗ ಮತ್ತೊಂದು ಮಹಾಜಾಲವನ್ನು ಭೇದಿಸಿದ್ದಾರೆ. ತಾನು ವಾಸವಿದ್ದ ಅಪಾರ್ಟ್​ಮೆಂಟ್​ನ  ರೂಮ್​ನಲ್ಲಿಯೇ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯನ್ನು ನೋಯ್ಡಾ ಪೊಲೀಸರು ಹಾಗೂ ನಾರ್ಕೊಟಿಕ್ಸ್ ಡಿಪಾರ್ಟ್​​ಮೆಂಟ್ ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಕಳೆದ ತಿಂಗಳಷ್ಟೇ ನ್ಯಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೊ ಹಾಗೂ ದೆಹಲಿ ಪೊಲೀಸರು ಸೇರಿ ನಡೆಸಿದ 95 ಕೆಜಿ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದ ಅಧಿಕಾರಿಗಳು ಪ್ರಕರಣದಲ್ಲಿ ಐದು ಮಂದಿಯನ್ನು ಬಂಧಿಸಿತ್ತು. ಅದರಲ್ಲಿ ಒಬ್ಬರು ಮ್ಯಾಕ್ಸಿಕನ್ ರಾಷ್ಟ್ರದವನಾಗಿದ್ದ.

Advertisment


">November 12, 2024


ಈ ಪ್ರಕರಣಗಳು ಇನ್ನೂ ನೆನಪಿನಲ್ಲಿರುವಾಗಲೇ ಈಗ ಇದೇ ರೀತಿಯ ಮತ್ತೊಂದು ಮಹಾಜಾಲವನ್ನು ಪೊಲೀಸರು ಹಾಗೂ ನಾರ್ಕೊಟಿಕ್ಸ್ ಇಲಾಖೆ ಸೇರಿ ಭೇದಿಸಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ರಾಹುಲ್ ಚೌದರಿ ಎಂದು ಗುರುತಿಸಲಾಗಿದೆ. ಮೀರತ್ ಜಿಲ್ಲೆಯ ಮೂಲದವನಾದ ಈತ ಇಂಗ್ಲಿಷ್​ನಲ್ಲಿ ಮಾಸ್ಟರ್​ ಪದವಿ ಪಡೆದಿದ್ದಾನೆ. ಇಷ್ಟೆಲ್ಲಾ ಬುದ್ಧವಂತನಾದ ಈತ ತೋಟಗಾರಿಕೆ ನೆಪದಲ್ಲಿ ತಾನು ಬಾಡಿಗೆಗೆ ಇದ್ದ ಅಪಾರ್ಟ್​ಮೆಂಟ್​ನ ಒಂದು ರೂಮ್​ನಲ್ಲಿ ಗಾಂಜಾ ಬೆಳೆಯನ್ನು ಬೆಳೆದಿದ್ದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:200 ಜನರಿಗೆ ಪಂಗನಾಮ ಹಾಕಿದ ಇನ್ನೂ ಮೀಸೆ ಚಿಗುರದ ಹುಡುಗ! ಟೋಪಿ ಹಾಕಿದ್ದು ಎಷ್ಟು ಲಕ್ಷ ಗೊತ್ತಾ?

Advertisment

ತನ್ನ ಮನೆಯಲ್ಲಿ ಬಗೆ ಬಗೆಯ ಗಾಂಜಾ ಬೆಳೆಗಳನ್ನು ಈತ ಬೆಳೆದಿದ್ದಾನೆ. ಹಲವು ವೆಬ್​ ಸಿರೀಸ್​ಗಳಿಂದ ಪ್ರಭಾವಿತನಾದ ಈತ ಗಾಂಜಾ ಕೃಷಿಯನ್ನು ಹೇಗೆ ಮಾಡಬೇಕು ಎಂಬುದನ್ನು ಅರಿತುಕೊಂಡಿದ್ದ. ಅಂತಾರಾಷ್ಟ್ರೀಯ ಕಳ್ಳ ಮಾರುಕಟ್ಟೆಯಿಂದ ಗಾಂಜಾ ಬೀಜಗಳನ್ನು ಖರೀದಿಸಿದ್ದ ಈತ ಅವರಿಗೆ ಪೇಮೆಂಟ್​ನ್ನು ಪೇಯ್ ಪಲ್ ಮೂಲಕ ಮಾಡಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಯೂಟ್ಯೂಬ್ ನೋಡಿದರು, ಮನೆಯಲ್ಲೇ ಕೆಲಸ ಶುರುಮಾಡಿದರು.. ಆಮೇಲೆ ನಡೆದಿದ್ದೇ ಬೇರೆ..!

ಮನೆಯ ರೂಮಿನೊಳಗೊಡೆ ಬೆಳೆದಿದ್ದರಿಂದ ಅವುಗಳಿಗೆ ಸೂರ್ಯನ ಕಿರಣಗಳು ಬೀಳುತ್ತಿರಲಿಲ್ಲ. ಅವುಗಳಿಗೆ ಸರಿಯಾದ ತಾಪಮಾನ ಸಿಗಲಿ ಎಂದು ಆರೋಪಿ ರಾಹುಲ್ ಏರ್ ಕಂಡಿಷನರ್ ಹಾಗೂ ಫುಲ್ ಸ್ಪೆಕ್ಟ್ರಮ್ ಲೈಟ್ಸ್​ಗಳನ್ನು ಉಪಯೋಗಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಹೂವಿನ ಪಾಟ್​ಗಳ ನಡುವೆಯೇ ಗಾಂಜಾ ಕೃಷಿಯನ್ನು ಮಾಡುತ್ತಿದ್ದ ಈತ ಅದನ್ನು ಡಾರ್ಕ್​ ವೆಬ್​ನಲ್ಲಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ರಾಹುಲ್​ನನ್ನು ಬಂಧಿಸಿರುವ ಅಧಿಕಾರಿಗಳು ಬರೋಬ್ಬರಿ 2 ಕೆಜಿ ಗಾಂಜಾವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment