ನೀವು ದಿನಕ್ಕೆ ಎಷ್ಟು ಗಂಟೆ ಫೋನ್​​ ಬಳಸುತ್ತೀರಾ? ಸಮೀಕ್ಷೆಯಲ್ಲಿ ಶಾಕಿಂಗ್​ ಸತ್ಯ ಬಹಿರಂಗ!

author-image
Ganesh Nachikethu
Updated On
ಕೇವಲ 19 ರೂ.ಗೆ ಪ್ರೀಪೇಯ್ಡ್​ ಪ್ಲಾನ್​​; ವೊಡಾಫೋನ್​​ನಿಂದ ಭರ್ಜರಿ ಆಫರ್​​
Advertisment
  • ಫೋನ್​ ಇಲ್ಲದೆ ನಾನಿಲ್ಲ ಎಂಬಂತೆ ಬದುಕುತ್ತಿದ್ದಾರೆ ಜನ
  • ಇಂದು ಸ್ಮಾರ್ಟ್​ಫೊನಿಗೆ ಜೋತು ಬಿದ್ದ ಪುಟಾಣಿ ಮಕ್ಕಳು
  • Appany ಸಮೀಕ್ಷೆ ಏನು ಹೇಳಿದೆ ಗೊತ್ತಾ? ಈ ಸ್ಟೋರಿ ಓದಿ!

ಮಾರುಕಟ್ಟೆಯಲ್ಲಿ ನಾನಾ ವಿಶೇಷತೆ ಇರೋ ಸ್ಮಾರ್ಟ್​ಫೋನ್​ಗಳಿವೆ. ಒಂದಕ್ಕಿಂತ ಒಂದು ವಿಭಿನ್ನ ಎಂಬಂತೇ ಕ್ಯಾಮೆರಾ, ಪ್ರೊಸೆಸರ್​, RAM​, ಬ್ಯಾಟರಿಗಳನ್ನು ಅಳವಡಿಸುವುದರ ಮೂಲಕ ಗ್ರಾಹಕರನ್ನು ಆಕರ್ಷಿಸುವಂತ ದುಬಾರಿ ಬೆಲೆಯ ಫೋನ್​ಗಳು ಮಾರುಕಟ್ಟೆಯಲ್ಲಿವೆ. ಆದರೆ ವಿಚಾರ ಅದಲ್ಲ. ಸ್ಮಾರ್ಟ್​ಫೊನ್​ಗಳು ಬಂದ ಬಳಿಕ ಮಾನವನ ನಡವಳಿಕೆ, ವ್ಯವಹಾರ ಎಲ್ಲವೂ ಬದಲಾಗಿದೆ. ಬೆಳಗ್ಗೆ ಗುಡ್​ ಮಾರ್ನಿಂಗ್​ ಹೇಳುವುದರಿಂದ ರಾತ್ರಿ ಗುಡ್​ನೈಟ್​ ತನಕ ಎಲ್ಲಾ ಕಾರ್ಯವು ಅಂಗೈ ಅಗಲದ ಫೋನ್​ನಲ್ಲಿಯೇ ಮುಗಿದು ಹೋಗುತ್ತದೆ. ಅಷ್ಟರ ಮಟ್ಟಿಗೆ ಜನರು ಫೋನ್​ಗೆ ಅಡಿಕ್ಟ್​ ಆಗಿದ್ದಾರೆ.

ಎಷ್ಟೋ ಜನರು ಫೋನ್​ ಇಲ್ಲದೆ ನಾನಿಲ್ಲ ಎಂಬಂತೆ ಬದುಕುತ್ತಿದ್ದಾರೆ. ಅದರಲ್ಲೂ ಪುಟಾಣಿ ಮಕ್ಕಳು ಕೂಡ ಸ್ಮಾರ್ಟ್​ಫೋನಿಗೆ ಜೋತು ಬಿದ್ದಿರುತ್ತಾರೆ. ಆದರೆ ಒಬ್ಬ ವ್ಯಕ್ತಿ ಪ್ರತಿದಿನ ತಮ್ಮ ಮೊಬೈಲ್​ ಫೋನ್​ ಅನ್ನು ಎಷ್ಟು ಬಾರಿ ಚೆಕ್​ ಮಾಡುತ್ತಾನೆ ಅನ್ನೋ ಮಾಹಿತಿ ಇಲ್ಲಿದೆ..!

publive-image

ಸ್ಮಾರ್ಟ್​ಫೋನ್​ ಬಳಕೆದಾರ ದಿನಕ್ಕೆ 58 ಬಾರಿ ತನ್ನ ಫೋನನ್ನು ಪರಿಶೀಲಿಸುತ್ತಾನಂತೆ. ಅದರಲ್ಲೂ ಬೇರೊಬ್ಬರ ಫೋನ್​ ಸೌಂಡ್​ ಆದರೆ ಸಾಕು. ತನ್ನ ಫೋನ್​ ರಿಂಗ್​ ಆಗುತ್ತಿದ್ದೆಯಾ? ಎಂದು ಒಂದು ಬಾರಿ ತೆರೆದು ನೋಡುತ್ತಾನೆ. ಅಷ್ಟರ ಮಟ್ಟಿಗೆ ಜನರು ಫೋನಿನ ಮೇಲೆ ಅವಲಂಬಿತರಾಗಿರುವುದಲ್ಲದೆ, ಆಗಾಗ ಪರಿಶೀಲಿಸುತ್ತಿರುತ್ತಾರೆ.

ಆ್ಯಪ್​ಎನಿ 2022 ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಭಾರತೀಯರು ಪ್ರತಿದಿನ 4.9 ಗಂಟೆಗಳ ಕಾಲ ಸ್ಮಾರ್ಟ್​ಫೋನ್​ನಲ್ಲಿ ಸಮಯ ಕಳೆಯುತ್ತಾರಂತೆ. ಹೀಗಾಗಿ ಈ ವಿಚಾರದಲ್ಲಿ ಭಾರತ ವಿಶ್ವದಲ್ಲೇ 8ನೇ ಸ್ಥಾನದಲ್ಲಿದೆ. ಇನ್ನು ಅಮೆರಿಕನ್ನರು ಸ್ಮಾರ್ಟ್​ಫೋನ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ನಂತರದ ಸ್ಥಾನದಲ್ಲಿ ಚೀನಾ ಮತ್ತು ಇಂಡೋನೇಷ್ಯಾ ಜನರು ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment