/newsfirstlive-kannada/media/post_attachments/wp-content/uploads/2024/04/KL_RAHUL_RCB.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಕ್ತಾಯಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್ಸಿಬಿ ಈ ಮೂಲಕ ಮುಂದಿನ ಸೀಸನ್ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ವಿಶೇಷ ಎಂದರೆ ಆರ್ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಅವರೇ ಮತ್ತೆ ಮುನ್ನಡೆಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ವಿರಾಟ್ ಕೊಹ್ಲಿ, ಯಶ್ ದಯಾಳ್ ಹಾಗೂ ರಜತ್ ಪಾಟಿದಾರ್ ರೀಟೈನ್ ಮಾಡಿಕೊಂಡಿತ್ತು. ಈಗ ನಡೆದ ಮೆಗಾ ಹರಾಜಿನಲ್ಲೂ 19 ಆಟಗಾರರನ್ನು ಖರೀದಿ ಮಾಡಿತು. ಅಚ್ಚರಿ ಎಂದರೆ ಆರ್ಸಿಬಿ ಯಾವುದೇ ಕ್ಯಾಪ್ಟನ್ ಆಗೋ ಸಾಮರ್ಥ್ಯ ಇರೋ ಆಟಗಾರನನ್ನು ಬಿಡ್ ಮಾಡದಿರುವುದು. ಹಾಗಾಗಿ ಕೊಹ್ಲಿಯೇ ಮುಂದಿನ ಕ್ಯಾಪ್ಟನ್ ಎಂದು ಹೇಳಲಾಗುತ್ತಿದೆ.
ಬಲಿಷ್ಠ ತಂಡ ಕಟ್ಟಿದ ಆರ್ಸಿಬಿ
80ಕ್ಕೂ ಹೆಚ್ಚು ಕೋಟಿಯೊಂದಿಗೆ ಹರಾಜಿಗೆ ಬಂದ ಆರ್ಸಿಬಿ ಮೊದಲ ದಿನವೇ ಬರೋಬ್ಬರಿ 50 ಕೋಟಿ ಖರ್ಚು ಮಾಡಿತ್ತು. 2ನೇ ದಿನ ಉಳಿದ 30 ಕೋಟಿಯನ್ನು ಆಟಗಾರರ ಮೇಲೆ ಸುರಿಯಿತು. ಈ ಪೈಕಿ ಆರ್ಸಿಬಿ ಜೋಶ್ ಹೇಜಲ್ವುಡ್ಗೆ 12.50 ಕೋಟಿ, ಫಿಲ್ ಸಾಲ್ಟ್ಗೆ 11.50 ಕೋಟಿ ರೂ., ಜಿತೇಶ್ ಶರ್ಮಾಗೆ 11.00 ಕೋಟಿ ರೂ., ಭುವನೇಶ್ವರ್ ಕುಮಾರ್ಗೆ 10.75 ಕೋಟಿ ರೂ., ಲಿಯಾಮ್ ಲಿವಿಂಗ್ಸ್ಟೋನ್ಗೆ ಸುಮಾರು 8.75 ಕೋಟಿ ರೂ. ನೀಡಿ ಖರೀದಿ ಮಾಡಿದೆ.
ಆರ್ಸಿಬಿ ಬಕೆಟ್ ಲಿಸ್ಟ್ನಲ್ಲಿತ್ತು ಕೆ.ಎಲ್ ರಾಹುಲ್ ಹೆಸ್ರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಓಪನಿಂಗ್ ಸ್ಲಾಟ್ಗೆ ಮೊದಲು ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನೇ ಪರಿಗಣಿಸಿತ್ತು. ಆರ್ಸಿಬಿ ಫಸ್ಟ್ ಲಿಸ್ಟ್ನಲ್ಲೇ ಇವರ ಹೆಸರಿತ್ತು. ಓಪನಿಂಗ್ ಸ್ಲಾಟ್ಗೆ ಆರ್ಸಿಬಿ ಬಜೆಟ್ ಕೇವಲ 12 ಕೋಟಿ ಮೀಸಲಿಟ್ಟಿತ್ತು.
ರಾಹುಲ್ ಕೈ ಬಿಟ್ಟಿದ್ದೇಕೆ ಆರ್ಸಿಬಿ?
ಕೆ.ಎಲ್ ರಾಹುಲ್ ಖರೀದಿಗೆ ಆರ್ಸಿಬಿ, ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಗಿಬಿದ್ದಿದ್ದವು. ರಾಹುಲ್ ಅವರನ್ನು ಮೊದಲು ಬಿಡ್ ಮಾಡಿದ್ದು ಆರ್ಸಿಬಿ. ಬಳಿಕ ಸುಮಾರು 12 ಕೋಟಿವರೆಗೂ ಆರ್ಸಿಬಿ ಬಿಡ್ ಮಾಡಿತು. ಯಾವಾಗ ರಾಹುಲ್ ಬೆಲೆ ಏರುತ್ತಲೇ ಹೋಯ್ತು, ಅವಾಗ ಆರ್ಸಿಬಿ ಹಿಂದೇಟು ಹಾಕಿತು. ನಂತರ ಇವರ ಸ್ಥಾನಕ್ಕೆ ಫಿಲ್ ಸಾಲ್ಟ್ ಅವರನ್ನು ಖರೀದಿ ಮಾಡಲಾಗಿದೆ. ಈ ವಿಚಾರ ಆರ್ಸಿಬಿ ಇಂದು ರಿಲೀಸ್ ಮಾಡಿರೋ ವಿಡಿಯೋದಲ್ಲಿ ಬಯಲಾಗಿದೆ.
ಇದನ್ನೂ ಓದಿ:ಅಚ್ಚರಿ ಆಟಗಾರನಿಗೆ ಕ್ಯಾಪ್ಟನ್ಸಿ ಪಟ್ಟ; ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಆರ್ಸಿಬಿ ತಂಡ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ