/newsfirstlive-kannada/media/post_attachments/wp-content/uploads/2024/08/Gold.jpg)
ಇಡೀ ರಾಜ್ಯಾದ್ಯಂತ ಸೆಪ್ಟೆಂಬರ್‌ನಿಂದ ಹಬ್ಬದ ಮೇಲೆ ಹಬ್ಬಗಳು ಬರುತ್ತಿವೆ. ಈಗ ನವರಾತ್ರಿ ಕೂಡ ಶುರುವಾಗಿದೆ. ಗ್ರಾಹಕರನ್ನು ಸೆಳೆಯಲು ಬಂಗಾರದ ಅಂಗಡಿಯವ್ರು ಸಾಕಷ್ಟು ಸರ್ಕಸ್ ನಡೆಸುತ್ತಿದ್ದಾರೆ. ಹಾಗಾಗಿ ಎಲ್ಲಿ ನೋಡಿದ್ರೂ ಬಂಗಾರದ ಅಂಗಡಿಯದ್ದೇ ಜಾಹೀರಾತು. ಆಫರ್ ಮೇಲೆ ಆಫರ್ ಕೊಡುತ್ತಿದ್ದಾರೆ.
ಹಬ್ಬದ ಸೀಸನ್ನಲ್ಲಿ ಬಂಗಾರದ ಮೇಲೆ ಆಫರ್ ಸಾಮಾನ್ಯ. ಇದೇ ಕಾರಣಕ್ಕೆ ಗ್ರಾಹಕರು ಚಿನ್ನ ಖರೀದಿ ಮಾಡುತ್ತಾರೆ. ಬಂಗಾರ ಖರೀದಿಗೆ ಹಬ್ಬ ನೆಪವಾದ್ರೂ ಒಳ್ಳೆಯ ಹೂಡಿಕೆ. ಇದು ಉಳಿತಾಯವ ಕೂಡ ಹೌದು. ಅದರಲ್ಲೂ ಭಾರತದಲ್ಲೇ ಅತ್ಯಂತ ಮೌಲ್ಯಯುತ ವಸ್ತುಗಳಲ್ಲಿ ಚಿನ್ನ ಕೂಡ ಒಂದು.
ಚಿನ್ನ ಖರೀದಿ ಎಷ್ಟು ಸೇಫ್?
ಬಂಗಾರ ಖರೀದಿ ಕೇವಲ ಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇದು ನಮಗೆ ಆರ್ಥಿಕ ಸಂಕಷ್ಟ ಎದುರಾದಾಗ ಸಹಾಯಕ್ಕೆ ಬರುತ್ತದೆ. ನಮ್ಮಲ್ಲೂ ಸ್ವಲ್ಪ ಚಿನ್ನ ಇದ್ರೆ ಮಾರಿ ಆದ್ರೂ ಕಷ್ಟ ನಿವಾರಣೆ ಮಾಡಬಹುದು. ಇದೇ ಕಾರಣಕ್ಕೆ ಬಂಗಾರ ಖರೀದಿ ಮಾಡಲು ಎಲ್ಲರೂ ಮುಂದಾಗುತ್ತಾರೆ. ಇದು ಯಾವಾಗಲೂ ಸೇಫ್ ಇನ್ವೆಸ್ಟ್ಮೆಂಟ್.
ಯಾವಾಗಲೂ ಚಿನ್ನ ದುಬಾರಿ
ಸದ್ಯ ಬೆಂಗಳೂರಲ್ಲಿ 22 ಕ್ಯಾರಟ್ ಬಂಗಾರದ ಬೆಲೆ 1 ಗ್ರಾಮ್ಗೆ ಬರೋಬ್ಬರಿ 7,110 ರೂ. ಇದೆ. ಮಾರುಕಟ್ಟೆಯಲ್ಲಿ ಪ್ರತಿ ಗ್ರಾಮ್ 18 ಕ್ಯಾರಟ್ ಆಭರಣ ಚಿನ್ನದ ಬೆಲೆ 5,817 ರೂ. ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,110 ರೂ. ಇದೆ. 24 ಕ್ಯಾರಟ್ ಬಂಗಾರದ ಬೆಲೆ 7,756 ರೂ. ಇದ್ದು, ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಹಾಗಾಗಿ ಬಂಗಾರದ ಮೇಲೆ ಹೂಡಿಕೆ ನಮ್ಮ ಜೀವನಕ್ಕೆ ಒಂದಲ್ಲ ಒಂದು ಆಧಾರವಾಗಲಿದೆ.
ಇದನ್ನೂ ಓದಿ: 4,4,4,4,4,4,4,4,4,4,4,4,4,4,4,4; ಟೀಮ್ ಇಂಡಿಯಾದ ಯುವ ಬ್ಯಾಟರ್ ಭರ್ಜರಿ ಶತಕ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ