ಮಕ್ಕಳ ಕುರಿತಾಗಿ ಡಾಕ್ಟರ್ ಭಾಸ್ಕರ್ ಶೆಣೈಯವರ ವಿಶೇಷ ಸಂದರ್ಶನ
ಮಕ್ಕಳಿಗೆ ಇಮ್ಯುನಿಟಿ ಹೆಚ್ಚಿಸಲು ಏನು ಮಾಡಬೇಕು ಗೊತ್ತಾ?
ಡೆಂಗ್ಯೂ ತಡೆಗಟ್ಟಲು ಪೋಷಕರು ಮೊದಲು ಮಾಡಬೇಕಾದ ಕೆಲಸವಿದು
ಮಣಿಪಾಲ್ ಆಸ್ಪತ್ರೆಯ ಮಕ್ಕಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಭಾಸ್ಕರ್ ಶೆಣೈಯವರು ನ್ಯೂಸ್ಫಸ್ಟ್ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ. ಮಳೆಗಾಲದಲ್ಲಿ ಮಕ್ಕಳಲ್ಲಿ ಕಾಣುವ ಡೆಂಗ್ಯೂ ಮತ್ತು ವೈರಲ್ ಫೀವರ್ ಕುರಿತಾಗಿ ಹಿರಿಯ ಪತ್ರಕರ್ತೆಯಾದ ಅರ್ಚನಾ ರವಿಕುಮಾರ್ರವರು ಅವರ ವಿಶೇಷ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ವೈದ್ಯರು ಪೋಷಕರಿಗಾಗಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಹಲವು ವ್ಯಾಕ್ಸೀನ್ಗಳು ಬಂದಿವೆ.. ಎಲ್ಲಾ ವ್ಯಾಕ್ಸೀನ್ ಸೇಫ್ ಅನಿಸುತ್ತಾ?
ಒಂದು ವ್ಯಾಕ್ಸೀನ್ ಸಮಾಜದಲ್ಲಿ ಕೊಡಬೇಕಾದರೆ ಅದರೆ ಹಿಂದುಗಡೆ ತುಂಬಾ ಕೆಲಸವಿರುತ್ತೆ. ಅದರ ಕ್ಲೀನಿಕಲ್ ಟ್ರಯಲ್ಸ್ ಇರುತ್ತವೆ. ಅದು ಫೇಸ್1, ಫೇಸ್2, ಫೇಸ್3 ಇರುತ್ತೆ. ಎಲ್ಲಾ ವ್ಯಾಕ್ಸೀನನ್ನು ತುಂಬಾ ಸ್ಟಡಿ ಮಾಡಿ ಮನುಷ್ಯರಿಗೆ ಏನು ಪರಿಣಾಮ ಆಗಲ್ಲ ಎಂದು ಗೊತ್ತಾದ ಮೇಲೆ ಮಾರುಕಟ್ಟೆಗೆ ಬಿಡೋದು.
ಇದನ್ನೂ ಓದಿ: ಚಂಡೀಪುರ ವೈರಸ್ ಮೊದಲು ಪತ್ತೆಯಾಗಿದ್ದೆಲ್ಲಿ? ಇದರ ಲಕ್ಷಣಗಳೇನು?
ಭಾರತದಲ್ಲಿ 20 ವರ್ಷಕ್ಕಿಂತ ಈವಾಗ ಇರುವ ವ್ಯಾಕ್ಸೀನ್ ನಾಲ್ಕೈದು ಪಟ್ಟು ದ್ವಿಗುಣ ತ್ರಿಗುಣವಾಗಿದೆ. ಮೊದಲು ಡಿಪಿಟಿ, ಬಿಸಿಜಿ ಇತ್ತು. ಆಮೇಲೆ ಮೀಸೆಲ್ಸ್ ಬಂತು ಎಂಎಂಆರ್ ಆಯ್ತು. ಚಿಕನ್ ಫಾಕ್ಸ್, ಹೆಪಟೈಟೀಸ್ ಎ, ಹೆಪಟೈಟೀಸ್ ಬಿ, ನ್ಯೂಮೊ ಕೋಕಲ್ ವ್ಯಾಕ್ಸೀನ್, ಸರ್ವೈಕಲ್ ಕ್ಯಾನ್ಸರ್ ವ್ಯಾಕ್ಸೀನ್ ಇವೆಲ್ಲವು ಸೇಫ್. ಒಂದು ಪರ್ಸೆಂಟ್ ಸೈಡ್ ಇಫೆಕ್ಟ್ ಯಾವ ಔಷಧಿಯಲ್ಲೂ ಆಗ್ತದೆ.
ಇದನ್ನೂ ಓದಿ: ಡೆಂಗ್ಯೂ ಬಂದ ಮಗುವಿಗೆ ಮತ್ತೆ ಡೆಂಗ್ಯೂ ಬರಬಹುದು! ಆ್ಯಂಟಿಬಯೋಟಿಕ್ಸ್ ಕೊಡೋದು ಉತ್ತಮವೇ?
ವ್ಯಾಕ್ಸೀನ್ನಿಂದ ಏನೇನು ಒಳ್ಳೇದು ಆಗಿದೆ ಅನ್ನೋದು ಪೋಲಿಯೋ, ಸ್ಮಾಲ್ ಫಾಕ್ಸ್ನಿಂದ ನೋಡಿ ಕಲಿಯಬೇಕು. 1975-76ರ ನಂತರ ಒಂದೇ ಒಂದು ಕೇಸ್ ನೋಡಿಲ್ಲ. ಇವತ್ತು ಪೋಲಿಯೋ ಇದೆ ಎಂದು ಹೇಳೋದಕ್ಕೆ ಒಂದು ಕೇಸ್ ಸಿಗಲ್ಲ. ಅದೇ ರೀತಿ ಡಿಫ್ತೀರಿಯಾ, ನಾಯಿಕೆಮ್ಮು ಇಂಥಾ ಕಾಯಿಲೆಗಳು ಬಹಳ ಕಮ್ಮಿಯಾಗಿವೆ.
ಮಕ್ಕಳಿಗೆ ಇಮ್ಯುನಿಟಿ ಹೆಚ್ಚಿಸಲು ಏನು ಮಾಡಬೇಕು?
ವಾತಾವರಣ ಕಲುಷಿತವಾಗಿದೆ. ವೆಂಟಿಲೇಷನ್, ಗಾಳಿ, ಬೆಳಕಿನಲ್ಲಿ ವೈರಲ್ ಬೇಗ ಹರಡುತ್ತವೆ. ಇವು ಇಮ್ಯುನಿಟಿ ಕಡಿಮೆಯಾಗಿ ಬರೋದಲ್ಲ. ಎಕ್ಸ್ಪೋಜರ್ ಜಾಸ್ತಿಯಾಗಿ ಬರುತ್ತದೆ. ಹೀಗಾಗಿ ಇಮ್ಯುನಿಟಿ ಹೆಚ್ಚಿಸಲು ಏನು ಮಾಡೋಕಾಗಲ್ಲ.
ಪೋಷಕರಿಗೆ ಎನು ಹೇಳುತ್ತೀರಾ?
ಜ್ವರ ಬಂದಾಗ ಭಯ ಬೇಡ, 3 ದಿನ ಕಾದು ಟೆಸ್ಟ್ ಮಾಡಿ. ವೈದ್ಯರು ಹೇಳದೆ ಟೆಸ್ಟ್ ಮಾಡಬೇಡಿ. ಒಂದನೇ ದಿನ ಎರಡನೇ ದಿನ ಟೆಸ್ಟ್ ಮಾಡುವುದರಿಂದ ಏನು ಗೊತ್ತಾಗಲ್ಲ. ಡೆಂಗ್ಯೂ ಬಂದಾಗ ಪ್ಯಾರಾಸಿಟಮಾಲ್ ಮಾತ್ರ ಕೊಡಬೇಕು. ಪ್ಲೇಟೇಟ್ ಕೊಡೋದು ಮುಖ್ಯವಲ್ಲ. ನೀರು, ನೀರಿನಾಂಶ ಕೊಡೋದು ಮುಖ್ಯ. ಜ್ವರ ಬಂದು ಹೋದ ಮೇಲೆ ಸುಸ್ತಾದರೆ ವೈದ್ಯರನ್ನು ಭೇಟಿ ಮಾಡಬೇಕು.
ಇದನ್ನೂ ಓದಿ: ಮಕ್ಕಳಲ್ಲಿ ಡೆಂಗ್ಯೂ ಜ್ವರ ಬಂದ ಮೇಲೆ ಅಲ್ಲ, ಹೋದ ಮೇಲೆ ಆಪತ್ತು ಜಾಸ್ತಿ; ಡಾಕ್ಟರ್ ಭಾಸ್ಕರ್ ಶೆಣೈ
ಡೆಂಗ್ಯೂ ತಡೆಗಟ್ಟಲು ಮನೆ ಸುತ್ತಾ ನೀರು ನಿಲ್ಲದ ಹಾಗೆ ನೋಡಿಕೊಳ್ಳಿ. ನಗರ ಪಾಲಿಕೆಯನ್ನು ಭೇಟಿ ಮಾಡಿ, ಮನೆ ಸುತ್ತಾ ಡಿಡಿಟಿ ಸ್ಪ್ರೇ ಮಾಡಿಸಿ, ಸೊಳ್ಳೆ ಪರದೆ ಬಳಸಿ, ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಉದ್ದ ಪ್ಯಾಂಟ್-ಶರ್ಟ್ ಹಾಕಿಸಿ. ಡೆಂಗ್ಯೂ ಈಗಿನ ಕಾಲದಲ್ಲಿ ಭಯ ಪಡುವವಂತದ್ದಲ್ಲ. ಒಳ್ಳೆಯ ಆಹಾರ ನೀಡಿ. ಜಂಕ್ ಫುಡ್ ಕಡಿಮೆ ಮಾಡಿ. ಹಣ್ಣು-ತರಕಾರಿಯನ್ನು ನೀಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ