/newsfirstlive-kannada/media/post_attachments/wp-content/uploads/2024/07/cancer2.jpg)
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹೆಚ್ಚಾಗಿ ಲಂಗ್ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಈ ಕ್ಯಾನ್ಸರ್ನಲ್ಲಿ ವಿಧ ವಿಧವಾದ ಕ್ಯಾನ್ಸರ್ಗಳಿವೆ. ಅದರಲ್ಲೀ 3ನೇ ಅತಿ ಭಯಾನಕ ಕ್ಯಾನ್ಸರ್ ಆಗಿದೆ ಶ್ವಾಸಕೋಶ ಕ್ಯಾನ್ಸರ್. ಇತ್ತೀಚಿನ ದಿನಗಳಲ್ಲಿ ವಿದೇಶಕ್ಕಿಂತ 10 ವರ್ಷಕ್ಕೂ ಮುಂಚಿತವಾಗಿ ಭಾರತೀಯರಲ್ಲಿ ಶ್ವಾಸಕೋಶ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ವಿದೇಶದ ಜನರಲ್ಲಿ 70 ವರ್ಷದ ನಂತರ ಕ್ಯಾನ್ಸರ್ ಪತ್ತೆಯಾಗುತ್ತೆ.
ಆದರೆ ಭಾರತೀಯರಲ್ಲಿ 54ರಿಂದ 70 ವಯಸ್ಸಿನಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಇನ್ನು, ಶ್ವಾಸಕೋಶದ ಕ್ಯಾನ್ಸರ್‌ಗೆ ಹಾಗಾದ್ರೆ ಚಿಕಿತ್ಸೆ ಯಾವ ರೀತಿ? ಯಾವ ಸ್ಟೇಜ್‌ನಲ್ಲಿ ಪತ್ತೆಯಾದ್ರೆ ಯಾವ ರೀತಿಯ ಚಿಕಿತ್ಸೆ ನೀಡ್ಲಾಗುತ್ತೆ? ಯಾವ ಸ್ಟೇಜ್‌ವರೆಗೂ ರೋಗಿಗಳಿಗೆ ಬಚಾವ್ ಮಾಡೋದಕ್ಕೆ ಸಾಧ್ಯ ಇರುತ್ತೆ ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿ ಜನರಲ್ಲಿ ಗೊಂದಲ ಮನೆ ಮಾಡಿದೆ.
ಇದನ್ನೂ ಓದಿ: ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ?
ಇನ್ನು, ಲಂಗ್ ಕ್ಯಾನ್ಸರ್‌ಗೆ ತುತ್ತಾದವರಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡುತ್ತಾರೆ ಎಂಬುವುದರ ಬಗ್ಗೆ ಸೀನಿಯರ್ ಆಂಕಾಲಜಿಸ್ಟ್ ಡಾ.ಸಂಪತ್ ಕುಮಾರ್ ನ್ಯೂಸ್‌ಫಸ್ಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಲಂಗ್ ತುಂಬಾ ಭಯಾನಕವಾಗಿದೆ. ಈ ಲಂಗ್ ಕ್ಯಾನ್ಸರ್‌ಗೆ ತುತ್ತಾದವರೂ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡರೇ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಲಂಗ್ನಿಂದ ಮೂಳೆಗಳಿಗೆ ಹೋದರೆ ತುಂಬಾ ಕಷ್ಟ. ಮೊದಲು ಇದರಲ್ಲಿ ಮೂರು ಭಾಗಗಳಾಗಿ ವಿಂಗಡಣೆ ಮಾಡುತ್ತೇವೆ. ಸ್ಟೇಜ್ 1 ಸರ್ಜರಿ, ಸ್ಟೇಜ್ 2 ಸರ್ಜರಿ, ಸ್ಟೇಜ್ 3 ಸರ್ಜರಿಯನ್ನು ಮಾಡುತ್ತೇವೆ. ರೇಡಿಯೊ ಥೆರಪಿ, ಕಿಮೋ ಥೆರಪಿಯನ್ನು, ಟಾರ್ಗೆಟ್ ಥೆರಪಿ ಮಾಡಬಹುದು. ಆದರೆ ಇದಕ್ಕೂ ಮುಂದೆ ಹೋದಾಗ ತುಂಬಾ ಕಷ್ಟವಾಗುತ್ತದೆ. ಯಾವುದಾದರೂ ವ್ಯಕ್ತಿ ಈ ಕ್ಯಾನ್ಸರ್ ಕಾಣಿಸಕೊಂಡರೇ ಅವರಿಗೆ ಹಿಮಿನೋ ಥೆರಪಿ ನೀಡುತ್ತೇವೆ. ಉದಾಹರಣೆಗೆ ನಟ ಸಂಜಯ್ ದತ್ ಅವರು ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ಬಂದಾಗ ಅವರಿಗೆ ಹಿಮಿನೋ ಥೆರಪಿ ಮಾಡಿದ್ದಕ್ಕೆ ಅವರು ಈಗಲೂ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ:Lung cancer: ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲೇ ಶ್ವಾಸಕೋಶದ ಕ್ಯಾನ್ಸರ್; ಆಘಾತಕಾರಿ ಅಂಶ ಇದು!
ಇನ್ನು, ಕ್ಯಾನ್ಸರ್ ಬಂದವಿಗೆ ಮೊದಲು ಕೀಮೋಥೆರಪಿ ಚಿಕಿತ್ಸೆ ನೀಡುತ್ತೇವೆ. ಈ ಕೀಮೋಥೆರಪಿಯಿಂದ ಸಾಕಷ್ಟ ಅಡ್ಡ ಪರಿಣಾಮಗಳು ಇವೆ. ಕೂದಲು ಉದುರುವುದು, ವಾಂತಿ ಬರುತ್ತೆ, ಬಾಯಲ್ಲಿ ಹುಣ್ಣು ಆಗುತ್ತೆ, ಮೈ ಕೈ ನೋವು ಆಗುತ್ತೆ. ಈಗ ಹಿಮಿನೋ ಥೆರಪಿ ಸಾಕಷ್ಟು ಉಪಾಯಕಾರಿಯಾಗಿದೆ. ಈ ಹಿಮಿನೋ ಥೆರಪಿಯನ್ನು ಎಲ್ಲರೂ ತೆಗೆದುಕೊಳ್ಳಲು ಆಗುವುದಿಲ್ಲ. ಈ ಹಿಮಿನೋ ಥೆರಪಿ ಯಾರ ದೇಹಕ್ಕೆ ತಡೆದುಕೊಳ್ಳುವ ಶಕ್ತಿ ಇರುತ್ತದೆ ಅವರಿಗೆ ಮಾತ್ರ ಇದನ್ನು ನೀಡುತ್ತೇವೆ. ಹಿಮಿನೋ ಥೆರಪಿಯೂ ಲಂಗ್ ಕ್ಯಾನ್ಸರ್ನಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಲಂಗ್ ಕ್ಯಾನ್ಸರ್ ಬಂದವರಿಗೆ ಎರಡು ಹಿಮಿನೋ ಥೆರಪಿ ಕೊಟ್ಟು ರೋಗಿಗಳನ್ನು ಉಳಿಸಿಕೊಂಡಿರೋ ಉದಾಹರಣೆ ಇದೆ. ಈ ಹಿಮಿನೋ ಥೆರಪಿ ಚಿಕಿತ್ಸೆ ನೀಡಬೇಕು ಅಂದ್ರೆ ಒಂದು ವರ್ಷಕ್ಕೆ ಬರೋಬ್ಬರಿ 10 ಲಕ್ಷ ರೂಪಾಯಿ ಖರ್ಚು ಆಗುತ್ತೆ ಎಂದು ಹಂತ ಹಂತವಾಗಿ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ