/newsfirstlive-kannada/media/post_attachments/wp-content/uploads/2024/12/SHWETHA-GOWDA.jpg)
ಸದ್ಯ ರಾಜ್ಯದಲ್ಲಿ ಇಬ್ಬರ ಹೆಸರು ಜೋರಾಗಿ ಸದ್ದು ಮಾಡುತ್ತಿದೆ. ಒಂದು ಐಶ್ವರ್ಯ ಗೌಡ ಮತ್ತೊಂದು ಶ್ವೇತಾಗೌಡ. ಈ ಶ್ವೇತಾಗೌಡಳ ಹಿನ್ನೆಲೆಯೂ ಕೂಡ ಐಶ್ವರ್ಯ ಗೌಡ ಹಿನ್ನೆಲೆಯಷ್ಟೇ ರೋಚಕವಾಗಿದೆ. 2022ರಲ್ಲಿ ಈ ಕಿಲಾಡಿ ಹೆಣ್ಣಿನ ಚಿನ್ನದ ಆಟ ಶುರುವಾಗಿದೆ. ಆಗಲೇ ಚಿನ್ನವನ್ನು ಗಿರವಿ ಇಡುವುದು ಬಿಡಿಕೊಳ್ಳುವುದು ಮಾಡುತ್ತಿದ್ದಳು ಶ್ವೇತಾಗೌಡ. ಇದೇ ವೇಳೆ ಪರಿಚಯನಾದವನು ಖತರ್ನಾಕ್ ಜ್ಯುವೆಲರಿ ವ್ಯಾಪಾರಿ ಚಿನ್ನಾರಾಮ್. ಚಿನ್ನರಾಮ್ ಹೇಳಿಕೆಯಂತೆಯೇ ಈಕೆ ಒಂದೊಂದೇ ಹೆಜ್ಜೆ ಹಾದಿಯನ್ನು ತಪ್ಪಲು ಶುರು ಮಾಡಿದಳು.
ಚಿನ್ನಾರಾಮ್ ಈಕೆಗೆ ದೊಡ್ಡ ದೊಡ್ಡವರನ್ನು ಪರಿಚಯ ಮಾಡಿಕೊಳ್ಳಲು ಹೇಳುತ್ತಾನೆ. ಗೋಲ್ಡ್ ಬ್ಯುಸಿನೆಸ್ ಮಾಡತೀವಿ ಅಂತ ಚೆನ್ನಾಗಿ ನಂಬಿಕೆ ಬರುವಂತೆ ಮಾತನಾಡು ಎಂದು ಹೇಳಿಕೊಟ್ಟಿರುತ್ತಾನೆ.ಮೊದಲೇ ಮಾತನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಈಕೆಗೆ ಅದೇನು ದೊಡ್ಡ ಮಾತಾಗಿರಲಿಲ್ಲ.
ಮಾತನ್ನು ತನ್ನ ಅಸ್ತ್ರದಂತೆ ಕರಗತ ಮಾಡಿಕೊಂಡಿದ್ದ ಶ್ವೇತಾ, ಕೆಲವೇ ತಿಂಗಳುಗಳಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಜ್ಯುವೆಲರಿಗಳನ್ನು ಕಲೆಕ್ಟ್ ಮಾಡಿದ್ದಳು . ಅದನ್ನು ಬಾಗಲಗುಂಟೆ ಚಿನ್ನಾರಾಮ್ ಮನೆಗೆ ತರುತ್ತಿದ್ದಳು. ಅದನ್ನು ಕರಗಿಸಿ ಚಿನ್ನದ ಬಿಸ್ಕೆಟ್ ಮಾಡಿ ಇಬ್ಬರೂ 50-50 ಹಂಚಿಕೊಳ್ಳುತ್ತಿದ್ದರು. ಮೊದಲೇ ಕದ್ದ ಮಾಲು ರಿಸೀವ್ ಮಾಡೋ ಕಳ್ಳರು ಇವರು, ಹೀಗಾಗಿ ಶ್ವೇತಾ ಬಳಸಿಕೊಂಡು ಮತ್ತಷ್ಟು ಚಿನ್ನ ಗಳಿಸಿತು ಚಿನ್ನಾರಾಮ್ ಅಂಡ್ ಗ್ಯಾಂಗ್. ಸದ್ಯ ಎಸಿಪಿ ಗೀತಾ ಅವರ ಟೀಮ್ಗಾಗಿ ಹುಡುಕಾಟ ನಡೆಸಿದೆ. ಇದರ ನಡುವೆ ಶ್ವೇತಾಗೌಡ ಮಾಡಿದ ಮತ್ತುಷ್ಟು ವಂಚನೆಯ ಆರೋಪಗಳು ಆಚೆ ಬರುತ್ತಿವೆ.
ಇದನ್ನೂ ಓದಿ: 9 ಕೋಟಿ ಗೋಲ್ಡ್ ಖರೀದಿಸಿ ವಂಚನೆ ಪ್ರಕರಣ; ಯಾರು ಈ ಐಶ್ವರ್ಯಗೌಡ? ಹಿನ್ನೆಲೆ ಏನು?
ಶ್ವೇತಾಗೌಡ ಯುಬಿ ಸಿಟಿಯ ಪಂಕಜ್ ಸೋನಿ ಶಾಪ್ನವರಿಗೆ ವಂಚನೆ ಮಾಡಿದ್ದಳು ಎಂದು ತಿಳಿದು ಬಂದಿದೆ. ಐಷಾರಾಮಿ ಲೈಫ್ ಲೀಡ್ ಮಾಡೋ ಜನರನ್ನು ಮೆಚ್ಚಿಸಲು ಈಕೆ ಗಿಫ್ಟ್ ಕೊಡುತ್ತಿದ್ದಳು ಎಂದು ಕೂಡ ತಿಳಿದುಬಂದಿದೆ. ವರ್ತೂರ್ ಪ್ರಕಾಶ್ ಮಗ ನಿತಿನ್ಗೆ ಶ್ವೇತಾ ಸುಮಾರು 50 ಸಾವಿರ ರೂಪಾಯಿ ಬೆಲೆಯ ಶರ್ಟ್ ಖರೀದಿಸಿ ಗಿಫ್ಟ್ ನೀಡಿದ್ದಳು ಎಂದು ತಿಳಿದು ಬಂದಿದೆ.
ಹೀಗೆ ಪಂಕಜ್ ಸೋನಿ ಶಾಪ್ಗೆ ಕರೆದುಕೊಂಡು ಹೋಗಿ ಶಾಪಿಂಗ್ ಮಾಡಿಸುತ್ತಿದ್ದ ಶ್ವೇತಾ ಬಳಿಕ ನಾನೇ ಬಿಲ್ ಕೊಡುತ್ತೇನೆ ಎಂದು ಹೇಳುತ್ತಿದ್ದಳಂತೆ 4 ಲಕ್ಷ ರೂಪಾಯಿ ಬಿಲ್ ಮಾಡಿರುವ ಶ್ವೇತ, ಇನ್ನೂ ಎರಡು ಲಕ್ಷ ಸಾಲ ಕೊಡಬೇಕಿದೆ ಎಂದು ಬಟ್ಟೆ ಶಾಪ್ ಮಾಲೀಕ ಪಂಕಜ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಒಂದು ಕೋನದಲ್ಲಿಯೂ ಕೂಡ ವಿಚಾರಣೆ ಈಗ ನಡೆಯುತ್ತಿದೆ.
ಇದನ್ನೂ ಓದಿ:ಅಭಿಮಾನಿಗಳಿಗೆ ಸಿಹಿಸುದ್ದಿ; ಶಿವಣ್ಣ ಅವರ ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯರು ಕೊಟ್ಟ ಮಾಹಿತಿ ಏನು..?
ಐಷಾರಾಮಿ ಬದುಕು.. ಸ್ಟಾರ್ ಹೋಟೆಲ್ಗಳಲ್ಲಿ ವಾಸ್ತವ್ಯ
ಇನ್ನು ಶ್ವೇತಾಗೌಡ ಬೆಂಗಳೂರಿನಲ್ಲಿ ಐಷಾರಾಮಿ ಬದುಕು ಬದುಕುತ್ತಿದ್ದಳು ಎಂದು ತಿಳಿದು ಬಂದಿದೆ. ನಗರದ ಸ್ಟಾರ್ ಹೋಟೆಲ್ನಲ್ಲಿಯೇ ಈಕೆಯ ವಾಸ್ತವ್ಯ ಇರುತ್ತಿತ್ತು. ಸಾವಿರಾರು ರೂಪಾಯಿ ಬಟ್ಟೆ ಬರೆಗೆ ಖರ್ಚು ಮಾಡುತ್ತಿದ್ದಳು ಹಾಗೂ ನಗರಿಂದ ನಗರಕ್ಕೆ ಫ್ಲೈಟ್ನಲ್ಲಿಯೇ ಓಡಾಟ ಮಾಡುತ್ತಿದ್ದಳು. ಶ್ರೀಮಂತರ ಒಡನಾಟವೇ ಈಕೆಯ ಮೊದಲ ಬಂಡವಾಳ ಎಂದು ತಿಳಿದು ಬಂದಿದೆ. ಚಿಕ್ಕ ಮೀನು ಬಿಟ್ಟು ದೊಡ್ಡ ಮೀನು ಹಿಡಿಯುವ ಕಾಯಕ ಇವಳದಾಗಿತ್ತು. ಲಕ್ಷ ಲಕ್ಷ ಹೂಡಿಕೆ ಮಾಡಿ ಕೋಟಿ ಕೋಟಿ ನುಂಗುವ ಸ್ಕೆಚ್ ಈಕೆಯದ್ದು ಎನ್ನುವ ಒಂದೊಂದೇ ಕಥೆ ತನಿಖೆಯ ವೇಳೆ ರಿವೀಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ