ಜೂನ್​ 5,2024 ರಿಂದ ಮಾರ್ಚ್​ 19,2025ರವರೆಗೆ.. ಹೇಗಿತ್ತು 286 ದಿನಗಳ ಬಾಹ್ಯಾಕಾಶದಲ್ಲಿ ಸುನೀತಾ ಕಳೆದ ದಿನಗಳು

author-image
Gopal Kulkarni
Updated On
ಜೂನ್​ 5,2024 ರಿಂದ ಮಾರ್ಚ್​ 19,2025ರವರೆಗೆ.. ಹೇಗಿತ್ತು 286 ದಿನಗಳ ಬಾಹ್ಯಾಕಾಶದಲ್ಲಿ ಸುನೀತಾ ಕಳೆದ ದಿನಗಳು
Advertisment
  • 286 ದಿನಗಳ ಸುದೀರ್ಘ ಬಾಹ್ಯಾಕಾಶದಲ್ಲಿ ಸುನೀತಾ ಜೀವನ
  • ಈ ಮೂರು ತಿಂಗಳಲ್ಲಿ ಏನೆಲ್ಲಾ ಕಾರ್ಯಗಳು ನಡೆದವು ಗೊತ್ತಾ?
  • ಹೇಗಿತ್ತು ಸುನೀತಾ ಮತ್ತು ವಿಲ್ಮೋರ್​ರನ್ನು ಭೂಮಿಗೆ ತಂದ ಸಾಹಸ

ಒಂದಲ್ಲ, ಎರಡಲ್ಲ, ನೂರಲ್ಲ, ಬರೋಬ್ಬರಿ 286 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇಬ್ಬರು ಗಗನಯಾತ್ರಿಗಳು ತಮ್ಮ ದಿನಗಳನ್ನು ದೂಡಿದ್ದಾರೆ. ಇದೊಂದು ಸುದೀರ್ಘ ಅವಧಿ. 8 ದಿನಗಳಕ್ಕೆಂದು ನಿಗದಿಯಾಗಿದ್ದ ಗಗನಯಾನ ಸುಮಾರು 286 ದಿನಗಳನ್ನು ನುಂಗಿ ಹಾಕಿತು. ಈ 286 ದಿನಗಳಲ್ಲಿ ಏನೆಲ್ಲಾ ನಡೆಯಿತು. ಸುನೀತಾ ವಿಲಿಯಮ್ಸ್ ಹಾಗೂ ಬಚ್​ ವಿಲ್ಮೋರ್​​ ಅವರ ಬಾಹ್ಯಾಕಾಶದ ದಿನಗಳು ಹೇಗೆಲ್ಲಾ ಇದ್ದವು ಅಂತ ನೋಡುವುದಾದ್ರೆ

2024 ಜೂನ್ 5ರಂದು ಸುನೀತಾ ವಿಲಿಯಮ್ಸ್​ ತಮ್ಮ ಗಗನಯಾತ್ರೆಯನ್ನು ಆರಂಭಿಸುತ್ತಾರೆ. ಬೋಯಿಂಗ್ ಸ್ಟಾರ್​ಲೈನರ್​ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಸುನೀತಾ ವಿಲಿಯಮ್ಸ್​ ಮತ್ತು ಬಚ್​ ವಿಲ್ಮೋರ್​​ ತಮ್ಮ ಬಾಹ್ಯಾಕಾಶ ಪ್ರಯಾಣವನ್ನು ಆರಂಭಿಸುತ್ತಾರೆ.

ಜೂನ್​ 6, 2024 ರಂದು ಅವರ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಲೀಕ್ ಆಗಿ ಥ್ರಸ್ಟರ್ಸ್​ಗಗಳ ಹಿಡಿತ ಕಡಿತಗೊಳ್ಳುತ್ತದೆ. ಅದೇ ತಿಂಗಳು 12ನೇ ತಾರೀಖಿನಂದು ಸುನೀತಾ ವಾಪಾಸತಿಯನ್ನು ಅನಿರ್ಧಿಷ್ಟಾವಧಿಗೆ ನಾಸಾ ಮುಂದೂಡಲಾಗುತ್ತದೆ. ಆಗಸ್ಟ್​ 7 ರಂದು ಸುನೀತಾ ಸ್ನಾಯು ಮತ್ತು ಮೂಳೆ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬರುತ್ತದೆ. ಫೆಬ್ರವರಿ ವೇಳೆಗೆ ಸುನೀತಾ ವಿಲಿಯಮ್ಸ್​ರನ್ನು ವಾಪಸ್ ಕರೆತರುವ ಯೋಜನೆ ಮಾಡಲಾಗಿದ್ದರು ಅದು ಯಶಸ್ವಿಯಾಗುವುದಿಲ್ಲ.

ಇದನ್ನೂ ಓದಿ:9 ತಿಂಗಳ ಬಾಹ್ಯಾಕಾಶ ವನವಾಸ ಅಂತ್ಯ.. ಹೇಗಿತ್ತು ISS to EARTH ನ ಆ 17 ಗಂಟೆಗಳ ಪ್ರಯಾಣ!

ಸೆಪ್ಟಂಬರ್ 6, 2024ಕ್ಕೆ ಸ್ಟಾರ್​ಲೈನರ್​​ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಖಾಲಿ ಹೊರಟು ಮೆಕ್ಸಿಕೋದಲ್ಲಿ ಲ್ಯಾಂಡ್ ಆಗುತ್ತದೆ. ಅದೇ ತಿಂಗಳು 12ನೇ ತಾರೀಖಿನಂದು ಮತ್ತಿಬ್ಬರ ಗಗನ ಯಾತ್ರಿಗಳ ಜೊತೆ ಸ್ಪೇಸ್​ ಎಕ್ಸ್ ಕ್ರ್ಯೂ-9 ಮಿಷನ್ ಉಡಾವಣೆ ಮಾಡಲಾಗುತ್ತದೆ. ಸೆಪ್ಟೆಂಬರ್​ 29 ರಂದು ಬಾಹ್ಯಾಕಾಶ ಕೇಂದ್ರಕ್ಕೆ ಸ್ಪೇಸ್​ ಎಕ್ಸ್ ಡ್ರ್ಯಾಗನ್ ತಲಪುತ್ತದೆ. ಅಕ್ಟೋಬರ್​ 31 ರಂದು ಬಾಹ್ಯಾಕಾಶದಿಂದ ನಾಲ್ವರು ಮಾರ್ಚ್​ನಲ್ಲಿ ಮರುಳುವುದಾಗಿ ನಾಸಾ ಘೋಷಣೆ ಮಾಡುತ್ತದೆ.


">March 18, 2025

ಡಿಸೆಂಬರ್ 8 ರಂದು ಸುನೀತಾ ವಿಲಿಯಮ್ಸ್ ವಿದ್ಯಾರ್ಥಿಗಳೊಂದಿಗೆ ಬಾಹ್ಯಾಕಾಶದಿಂದಲೇ ತಮ್ಮ ಅನುಭವವನ್ನು ಹಂಚಿಕೊಂಡ ವಿಶೇಷ ಘಟನೆಯೊಂದಕ್ಕೆ ಸಾಕ್ಷಿಯಾಗುತ್ತಾರೆ. ಜನವರಿ 30,2025ರಂದು ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ನಡಿಗೆಯನ್ನು ಕೈಗೊಳ್ಳುತ್ತಾರೆ. 2025, ಮಾರ್ಚ್​ 14ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕ್ರ್ಯೂ-10 ತನ್ನ ಪ್ರಯಾಣ ಆರಂಭಿಸುತ್ತದೆ. ಮಾರ್ಚ್​ 16 ರಂದು ಭಾನುವಾರ ಮಧ್ಯರಾತ್ರಿ ISSಗೆ ಕ್ರ್ಯೂ-10 ತಲಪುತ್ತದೆ. ಮಾರ್ಚ್​ 18 ರಂದು ಸುನೀತಾ ಸೇರಿ ನಾಲ್ವರೊಂದಿಗೆ ಸ್ಪೇಸ್​ ಎಕ್ಸ್ ಡ್ರ್ಯಾಗನ್​ ಬಾಹ್ಯಾಕಾಶ ನಿಲ್ದಾಣದಿಂದ ಹೊರಡುತ್ತದೆ. 2025 ಮಾರ್ಚ್​ 19, ಅಂದ್ರೆ ಇಂದು ಭಾರತೀಯ ಕಾಲಮಾನದ ಪ್ರಕಾರ ಸುಮಾರು 3.27 ನಿಮಿಷಕ್ಕೆ ಫ್ಲೋರಿಡಾದ ಕರಾವಳಿಯಲ್ಲಿ ಡ್ರ್ಯಾಗನ್ ಲ್ಯಾಂಡ್ ಆಗುತ್ತದೆ.

ಇದನ್ನೂ ಓದಿ: ವಸುದೈವ ಕುಟುಂಬಕಂ ಎಂಬುದೇ ಅವರ ಮಾರ್ಗದರ್ಶಕ ಮಂತ್ರ.. ಸುನೀತಾ ಸೋದರ ಸಂಬಂಧಿ ಹೇಳಿದ್ದೇನು?

ಲ್ಯಾಂಡ್ ಆದ ತಕ್ಷಣ ನಡೆಯಬೇಕಾಗಿದ್ದ ಎಲ್ಲಾ ಕಾರ್ಯಾಚರಣೆಯನ್ನು ನಡೆಸಿದ ನಾಸಾ ನಾಲ್ವರು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಆಚೆ ಕರೆದುಕೊಂಡು ಬಂದು ಅವರಿಗೆ ಮುಂದೆ ನೀಡಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತದೆ. ಒಟ್ಟು 9 ತಿಂಗಳುಗಳ ನಿರಂತರ ವನವಾಸವನ್ನು ಮುಗಿಸಿಕೊಂಡು ಕೊನೆಗೂ ಸುರಕ್ಷಿತವಾಗಿ ಸುನೀತಾ ವಿಲಿಯಮ್ಸ್ ಹಾಗೂ ಬಚ್​​ ವಿಲ್ಮೋರ್​ ಭೂಮಿಗೆ ಬಂದು ತಲುಪಿದ್ದಾರೆ. ವಿಶ್ವದ ಕೋಟ್ಯಾಂತರ ಜನರ ಪ್ರಾರ್ಥನೆ ಹಾಗೂ ನಾಸಾದ ವಿಜ್ಞಾನಿಗಳ ಶ್ರಮ ಕೊನೆಗೂ ಫಲ ನೀಡಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment