/newsfirstlive-kannada/media/post_attachments/wp-content/uploads/2025/01/TAJ-MAHAL.jpg)
ಜಗತ್ತಿನ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಕೂಡ ಒಂದು. ಅದರ ಸೌಂದರ್ಯಕ್ಕೆ ಮರುಳಾಗದವರು ಯಾರು ಕೂಡ ಇರಲಿಕ್ಕಿಲ್ಲ. ಬರೀ ದೇಶವಲ್ಲ ವಿದೇಶಿಗರೂ ಕೂಡ ಈ ಒಂದು ತಾಜ್ ಮಹಲ್ ಸೌಂದರ್ಯಕ್ಕೆ ಮನಸೋತು ವರ್ಷಕ್ಕೆ ಲಕ್ಷಾಂತರ ಜನ ಬಂದು ತಾಜ್ ಮಹಲ್ ನೋಡಿಕೊಂಡು ಹೋಗುತ್ತಾರೆ. ಕೇವಲ ಅದರ ಸೌಂದರ್ಯ ಮಾತ್ರವಲ್ಲ ಅದು ನಿರ್ಮಾಣವಾದ ಹಿಂದಿನ ಕಥೆಯೂ ಕೂಡ ಅಷ್ಟೇ ಆಸಕ್ತಿದಾಯಕವಾಗಿದೆ. ಮೊಘಲ ಸಾಮ್ರಾಜ್ಯದ ದೊರೆ ಶಾಹ್ ಜಹಾನ್ ತನ್ನ ಪ್ರೀತಿಯ ಪತ್ನಿ ಮಮತಾಜ್ ಅಸುನೀಗಿದ ನಂತರ ಸ್ಮಾರಕವಾಗಿ ಇದನ್ನು ಕಟ್ಟಿಸಿದನು ಎಂದು ಹೇಳಲಾಗತ್ತದೆ. ಇದು ಪ್ರೀತಿಯ ಸಂಕೇತವಾಗಿ, ಸಾಕ್ಷಿಯಾಗಿ ನೂರಾರು ವರ್ಷಗಳಿಂದ ಹೀಗೆ ಜಗತ್ತನ್ನು ಆಕರ್ಷಿಸುತ್ತಾ ನಿಂತಿದೆ. ಈ ಸ್ಮಾರಕ ಭಾರತೀಯ ಪುರಾತತ್ವದ ಒಂದು ಸಂಕೇತವಾಗಿಯೂ ಕೂಡ ಗುರುತಿಸಿಕೊಂಡಿದೆ.
ಇದನ್ನೂ ಓದಿ:ತಿಮ್ಮಪ್ಪನ ಸನ್ನಿಧಿಯಲ್ಲಿ ಬಂಗಾರದ ಮನುಷ್ಯರು.. ವರ್ಷದ ಮೊದಲ ದಿನ ಭಕ್ತರಿಗೆ ಸರ್ಪ್ರೈಸ್..! Photos
ತಾಜ್ ಮಹಲ್ ಅಂದ್ರೆನೇ ಭಾರತೀಯರ ಒಂದು ಗರ್ವ. ಇಂತಹ ತಾಜ್ಮಹಲ್ನ್ನು ಅಂದು ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಸರ್ಕಾರ ಹರಾಜು ಮಾಡಲು ಮುಂದಾಗಿತ್ತು 1831ರಲ್ಲಿ ತಾಜ್ಮಹಲ್ನ ಹಲವು ಭಾಗಗಳನ್ನು ಮಾರಲು ನಿರ್ಧಾರ ಮಾಡಿತ್ತು. ಅಂದಿನ ಗವರ್ನರ್ ಲಾರ್ಡ್ ವಿಲಿಯಮ್ ಬೆನ್ಟಿಕ್ ಇಂತಹದೊಂದು ಕಾರ್ಯಕ್ಕೆ ಕೈಹಾಕಿದ್ದರು. ಅವರ ಹರಾಜಿನ ಪ್ಲ್ಯಾನ್ ಪ್ರಕಾರ ತಾಜ್ ಮಹಲ್ನ ಹಲವು ಭಾಗಗಳನ್ನಾಗಿ ವಿಂಗಡಿಸಿ ಮತ್ತು ಅವುಗಳ ಮಾರ್ಬಲ್ಗಳನ್ನು0 ಕಿತ್ತು ಹರಾಜು ಮಾಡುವ ಪ್ಲಾನ್ ಹಾಕಿಕೊಳ್ಳಲಾಗಿತ್ತು.
ಇದನ್ನೂ ಓದಿ:ಅನಂತ್ ಅಂಬಾನಿಗೆ ವಾಚ್ ಕ್ರೇಜ್; ದಿಗಿಲು ಹುಟ್ಟಿಸುತ್ತೆ ಕೈಯಲ್ಲಿರುವ ವಾಚ್ನ ಬೆಲೆ..!
ಸದ್ಯ ತಾಜ್ ಮಹಲ್ನಲ್ಲಿ ಧ್ವಂಸಗೊಂಡಿರುವ ಕೆಲವು ಮಾರ್ಬಲ್ಗಳನ್ನ ಅಂದು ಹರಾಜಿಗಿಡಲಾಗಿತ್ತು ಎಂಬ ಅನುಮಾನಗಳು ಕೂಡ ಇದೆ. ಈ ಬಗ್ಗೆ ಹಲವು ವರದಿಗಳು ಕೂಡ ಬಂದಿವೆ. ಆಗ್ರಾದ ಸೇಠ್ ಲಕ್ಷ್ಮೀ ಚೆಂದ್ ಎನ್ನುವವರು 7 ಲಕ್ಷ ರೂಪಾಯಿಗೆ ತಾಜ್ ಮಹಲ್ ಕೊಂಡುಕೊಳ್ಳಲು ಬಿಡ್ ಮಾಡಿದ್ದರು ಎಂದು ಕೂಡ ಮಾಹಿತಿಗಳಿವೆ. ಅಂದಿನ ಕಾಲಕ್ಕೆ 7 ಲಕ್ಷ ರೂಪಾಯಿ ಅಂದ್ರೆ ಅದು ನಿಜಕ್ಕೂ ಕೂಡ ಭಾರೀ ದೊಡ್ಡ ಮೊತ್ತ.
ಮೊದಲ ಬಾರಿ ಹರಾಜು ಪ್ರಕ್ರಿಯೆ ವೇಳೆ ಲಕ್ಷ್ಮೀಚೆಂದ್ ಸುಮಾರು 2 ಲಕ್ಷ ರೂಪಾಯಿಗೆ ಬಿಡ್ ಮಾಡಿದ್ದರು. ಇದು ತುಂಬಾ ಕಡಿಮೆ ಬೆಲೆಯಾಗಿದ್ದರಿಂದ ಸರ್ಕಾರ ತಿರಸ್ಕರಿಸಿತು. ಎರಡನೇ ಬಾರಿ ಹರಾಜು ಪ್ರಕ್ರಿಯೆ ನಡೆದಾಗ ಸೇಠ ಲಕ್ಷ್ಮೀಚೆಂದ್ ಸುಮಾರು 7 ಲಕ್ಷ ರೂಪಾಯಿಗೆ ಬಿಡ್ ಮಾಡಿದ್ದರು. ಆದ್ರೆ ತಾಜ್ ಮಹಲ್ ಮಾರಾಟ ಪ್ರಕ್ರಿಯೆ ಮುಂದುವರಿಯಲೇ ಇಲ್ಲ. ದೊಡ್ಡ ಮಟ್ಟದ ಕೋಮು ಗಲಭೆ ಜರುಗುವ ಸಂಭವ ಹಾಗೂ ಬ್ರಿಟಿಷ್ ಸಮುದಾಯದಲ್ಲಿಯೇ ವ್ಯಕ್ತವಾದ ವಿರೋಧ ತಾಜ್ ಮಹಲ್ ಮಾರಾಟವನ್ನು ತಡೆಯಿತು.
ಈ ಒಂದು ಘಟನೆ ದೇಶದ ಅನೇಕರಿಗೆ ಗೊತ್ತೆ ಇಲ್ಲ. ಭಾರತದ ಬಹುದೊಡ್ಡ ಐತಿಹಾಸಿಕ ಗುರುತನ್ನು ಬ್ರಿಟಷರು ಮಾರಲು ಹೊರಟಿದ್ದರು. ಆದ್ರೆ ಅನೇಕ ಕಾರಣಗಳಿಂದ ತಾಜ್ ಮಹಲ್ ಕೊನೆಗೂ ಇಂತಹ ಕೈಗಳಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ, ದೇಶದ ಪಾರಂಪರಿಕ ಗುರುತಾಗಿ ಇಂದಿಗೂ ಹಾಗೆಯೇ ನಿಂತುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ