newsfirstkannada.com

ರೇಣುಕಾಸ್ವಾಮಿ ಕೊಲೆ ಹೇಗಾಯ್ತು.. ದರ್ಶನ್ ಗ್ಯಾಂಗ್‌ ಪೈಶಾಚಿಕ ಕೃತ್ಯ ಎಂಥದ್ದು? ಇಂಚಿಂಚು ಮಾಹಿತಿ ಇಲ್ಲಿದೆ

Share :

Published June 19, 2024 at 9:14pm

  ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಗ್ಯಾಂಗ್​ ಪೈಶಾಚಿಕ ಕೃತ್ಯ

  ಬೆನ್ನ ಮೇಲೆಲ್ಲಾ ಬಾಸುಂಡೆಗಳು, ಕೈಗೆ ಕರೆಂಟ್ ಶಾಕ್ ಕೊಟ್ಟ ಗುರುತು

  ರೇಣುಕಾಸ್ವಾಮಿ ಮರ್ಮಾಂಗದ ಮೇಲೆ ಹಲ್ಲೆ ಮಾಡಿರೋದು ದೃಢ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ನಟ ದರ್ಶನ್ ಗ್ಯಾಂಗ್ ಅರೆಸ್ಟ್ ಆದ ಮೇಲೆ ಕ್ರೌರ್ಯದ ಕರಾಳ ಸತ್ಯಗಳು ಬಟಾ ಬಯಲಾಗಿದೆ. ದಿನ ಕಳೆದಂತೆ ಪ್ರಕರಣವನ್ನ ಪೊಲೀಸರು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಬಂದಿದ್ದು, ರೇಣುಕಾಸ್ವಾಮಿ ಕೊಲೆ ಹೇಗಾಯ್ತು ಅನ್ನೋ ಕಠೋರ ಸತ್ಯವನ್ನು ಕಲೆ ಹಾಕಿದ್ದಾರೆ. ರೇಣುಕಾಸ್ವಾಮಿ ಕೊಲೆಯ ಕ್ರೌರ್ಯ ಹೇಗಿತ್ತು ಅನ್ನೋ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ನೋಡಿ.

ರೇಣುಕಾಸ್ವಾಮಿ ಮೇಲೆ ದರ್ಶನ್ ಗ್ಯಾಂಗ್​ ಪೈಶಾಚಿಕ ಕೃತ್ಯ ನಡೆಸಿದ ಅನ್ನೋ ಕ್ರೌರ್ಯತೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಇದಕ್ಕೆ ಸಾಕ್ಷಿಯಾಗಿರೋದು ರೇಣುಕಾಸ್ವಾಮಿ ಮೃತದೇಹದ ಮೇಲಿನ ಗಾಯಗಳು. ಒಂದೊಂದು ಗಾಯದ ಗುರುತುಗಳು ದರ್ಶನ್ ಗ್ಯಾಂಗ್ ಅವರು ನಡೆಸಿದ್ದಾರೆ ಎನ್ನಲಾದ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿವೆ.

ಇದನ್ನೂ ಓದಿ: ಕಿವಿ ಕತ್ತರಿಸಿ, ಬೆನ್ನಿನ ಮೇಲೆ ಬಾಸುಂಡೆ.. ನಟ ದರ್ಶನ್‌ ಗ್ಯಾಂಗ್‌ ಕ್ರೂರಾತಿಕ್ರೂರ ಹಲ್ಲೆ; ಪಕ್ಕಾ ಸಾಕ್ಷಿಗಳು ಪತ್ತೆ! 

ಬೆನ್ನ ಮೇಲೆಲ್ಲಾ ಬಾಸುಂಡೆಗಳು, ಕೈಗೆ ಕರೆಂಟ್ ಶಾಕ್ ಕೊಟ್ಟ ಗುರುತು, ಎದೆ ಮೇಲೆಲ್ಲಾ ಸುಟ್ಟಗಾಯ, ಕಾಲುಗಳ ಮೇಲೆಲ್ಲಾ ಗಾಯದ ಗುರುತು. ಅಬ್ಬಬ್ಬಾ ರೇಣುಕಾಸ್ವಾಮಿ ಅವರನ್ನ ಡಿ-ಗ್ಯಾಂಗ್‌ ಬಹಳ ಕ್ರೂರವಾಗಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದೆ ಎನ್ನಲಾಗಿದೆ. ರೇಣುಕಾಸ್ವಾಮಿ ಅವರ ಡೆಡ್‌ಬಾಡಿ ನೋಡಿದ ಪೊಲೀಸರಿಗೆ ಇವ್ರು ಮನುಷ್ಯರೋ.. ರಾಕ್ಷಸರೋ ಅನ್ನೋ ಅನುಮಾನ ಬಂದಿದೆ.

ರೇಣುಕಾಸ್ವಾಮಿ ದೇಹದ 15 ಕಡೆಗಳಲ್ಲಿ ಗಾಯಗಳು ಪತ್ತೆಯಾಗಿದೆ. ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಇನ್ನು ಹಲವು ಆಘಾತಕಾರಿ ಸತ್ಯಗಳು ಪೊಲೀಸರಿಗೆ ಲಭ್ಯವಾಗಿದೆ. ರೇಣುಕಾಸ್ವಾಮಿಗೆ ಆರೋಪಿಗಳು ಮರದ ಪೀಸ್ ಹಾಗೂ ಬೆಲ್ಟ್‌ ಬಳಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ರೇಣುಕಾಸ್ವಾಮಿ ಮರ್ಮಾಂಗದ ಮೇಲೆ ಹಲ್ಲೆ ಮಾಡಿರೋದು ದೃಢವಾಗಿದೆ. ರಕ್ತ ಹೆಪ್ಪುಗಟ್ಟಿ ರೇಣುಕಾಸ್ವಾಮಿ ಸಾವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಮಾಡಿದ್ದು ಅತ್ಯಂತ ಕ್ರೂರ.. ದರ್ಶನ್ ಗ್ಯಾಂಗ್‌ ಮೇಲೆ ಈಗ ಸಿಕ್ಕಾಪಟ್ಟೆ ಆಕ್ರೋಶ! 

ಪೋಸ್ಟ್ ಮಾರ್ಟಂ ವರದಿಯಲ್ಲೇನಿದೆ? 

 • ರೇಣುಕಾ ಮರ್ಮಾಂಗಕ್ಕೆ ಹೊಡೆತ
 • ಮರ್ಮಾಂಗದಿಂದ ರಕ್ತ ಸೋರಿಕೆ
 • ಹೊಟ್ಟೆ ಭಾಗದಲ್ಲೂ ರಕ್ತ ಸೋರಿಕೆ
 • ಹೊಟ್ಟೆಗೆ ಮರದ ಪೀಸ್​ನಿಂದ ಹಲ್ಲೆ
 • ತಲೆಗೂ ಹೊಡೆತ, ಆದ್ರೆ ರಕ್ತ ಸೋರಿಲ್ಲ
 • ಕೈ ಮತ್ತು ಕಾಲುಗಳಲ್ಲೂ ರಕ್ತ ಸೋರಿಕೆ
 • ರೇಣುಕಾಸ್ವಾಮಿ ಬೆನ್ನಿನಲ್ಲಿ ರಕ್ತ ಬಂದಿದೆ
 • ರೇಣುಕಾ ಎದೆ ಭಾಗದಲ್ಲೂ ರಕ್ತ ಬಂದಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಹೇಗಾಯ್ತು.. ದರ್ಶನ್ ಗ್ಯಾಂಗ್‌ ಪೈಶಾಚಿಕ ಕೃತ್ಯ ಎಂಥದ್ದು? ಇಂಚಿಂಚು ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/06/renukaswami3.jpg

Load More