newsfirstkannada.com

ವಯಸ್ಸು 30, ಮದುವೆ 50.. ಅಬ್ಬಾ!! ಕಿಲಾಡಿ ಲೇಡಿಯ ಕಲ್ಯಾಣದ ಕಥೆಯೇ ರೋಚಕ; ಸಿಕ್ಕಿಬಿದ್ದಿದ್ದು ಹೇಗೆ?

Share :

Published July 9, 2024 at 9:31pm

Update July 9, 2024 at 9:41pm

    ಈ ಸುಂದರಿ ಮದುವೆಯಾಗಿರೋದು ಬರೋಬ್ಬರಿ 50 ಬಾರಿ

    ಹಾಫ್ ಸೆಂಚುರಿ ಮ್ಯಾರೇಜ್​ನಲ್ಲಿ ಪೊಲೀಸ್ ಅಧಿಕಾರಿಗಳು ಇದ್ದಾರೆ

    ಯಾಕಮ್ಮಾ ಹಿಂಗ್​ ಮಾಡ್ದೆ ಅಂತ ಕೇಳಿದ್ರೆ ಹೇಳಿದ್ದೇನು ಗೊತ್ತಾ?

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋ ಒಂದು ಮಾತಿದೆ. ಆದ್ರೆ ಈ ಗಾದೆ ಮಾತೇನಾದ್ರೂ ಒಂದು ಸುಳ್ಳು ಹೇಳಿ, ಸಾವಿರ ಮದುವೆ ಆಗು ಅಂತ ಆಗೋಕೆ ಸಾಧ್ಯಾನಾ? ಆದರೆ ಅದು ಸಾವಿರ ಅಲ್ಲದೇ ಇದ್ರೂ ಬೇಜಾನ್​ ಸುಳ್ಳು ಹೇಳಿ. ಈ ಮಹಿಳೆ ಮದುವೆಯಾಗಿರೋದು ಬರೋಬ್ಬರಿ 50 ಬಾರಿ.

ಹೌದು ಈ ಶಾಕಿಂಗ್​ ಘಟನೆ ನಮ್ಮ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಬಯಲಾಗಿದೆ. ತಿರುಪ್ಪೂರು ನಿವಾಸಿಯಾಗಿರೋ ಸಂಧ್ಯಾ, ಈ ಘನಕಾರ್ಯ ಮಾಡಿರೋ ಮಹಾತಾಯಿ. ಅಷ್ಟಕ್ಕೂ ಈ ಮಹಿಳೆ ಮೋಸ ಮಾಡಿ ಮದುವೆಯಾಗಿರೋದು ಯಾವುದೇ ಸಾಮಾನ್ಯ ವ್ಯಕ್ತಿಗಳನಲ್ಲ. ಅಸಲಿಗೆ ಈಕೆಯ ಲಿಸ್ಟ್​ನಲ್ಲಿ ಅಂದ್ರೆ ಈ ಹಾಫ್ ಸೆಂಚುರಿ ಮ್ಯಾರೇಜ್​ನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಅನೇಕ ಇನ್ಸ್‌ಪೆಕ್ಟರ್​ಗಳೂ ಇದ್ದಾರಂತೆ.

ಅಷ್ಟಕ್ಕೂ ಈಕೆಯ ಮದುವೆ ಆಟ ಬಯಲಾಗಿದ್ದೇ ಈಕೆ ಕಟ್ಟಿಕೊಂಡಿರೋ ಓರ್ವ ಪತಿಯಿಂದಲೇ. ತಿರುವೂರ್​ ಗ್ರಾಮದ ಓರ್ವ ಈಕೆಯನ್ನು ಮದುವೆಯಾಗಿದ್ದ. ಆದ್ರೆ ಮದುವೆಯಾದ ಮೂರೇ ತಿಂಗಳಿಗೆ ಈಕೆಯ ವರ್ತನೆ ಹಾಗೂ ನಡವಳಿಕೆಯಲ್ಲಿ ಚೇಂಜಸ್​ ಕಾಣಿಸ್ತಂತೆ. ಹಾಗಾಗಿ ಈಕೆಯ ಬಗ್ಗೆ ಅನುಮಾನಗೊಂಡ ಪತಿರಾಯ ಅಂತೂ ಇಂತೂ ಈಕೆಯ ಬ್ಯಾಕ್​​ಗ್ರೌಂಡ್​ ಪತ್ತೆ ಹಚ್ಚೋಕೆ ಮುಂದಾಗಿದ್ದಾನೆ. ಆಕೆಯ ಆಧಾರ್ ಕಾರ್ಡ್​ ನೋಡಿ ಒಂದು ಕ್ಷಣಕ್ಕೆ ಆತನಿಗೂ ದಂಗಾಗಿದೆ. ಯಾಕಂದ್ರೆ ಈಕೆಯ ಆಧಾರ್​ ಕಾರ್ಡ್​ನಲ್ಲಿ ಪತಿಯ ಹೆಸರಿನ ಜಾಗದಲ್ಲಿ ಬೇರೆ ವ್ಯಕ್ತಿಯ ಹೆಸರಿರೋದು ಪತ್ತೆಯಾಗಿದೆ. ಇಷ್ಟಾದ ಮೇಲೆ ಯಾವ ಗಂಡ ತಾನೆ ಸುಮ್ಮನೆ ಇರೋಕೆ ಸಾಧ್ಯ ಅಲ್ವಾ?? ಆಗಲೇ ಈ ವ್ಯಕ್ತಿ ಪೊಲೀಸರ ಮೊರೆ ಹೋಗಿ ಕಂಪ್ಲೇಂಟ್​ ಕೊಟ್ಟಿದ್ದಾನೆ.

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಹಳದಿ ಶಾಸ್ತ್ರ; ಬಾಲಿವುಡ್ ತಾರೆಯರ ರಂಗು ಹೇಗಿದೆ ನೋಡಿ! 

ಆಗಲೇ ಗೊತ್ತಾಗಿದ್ದು ಈಕೆಯ ಮದುವೆಯ ಕಥೆ. ಆರಂಭದಲ್ಲಿ ಈಕೆ 50 ಮದುವೆ ಆಗಿದ್ದಾಳೆ ಅಂತ ಆತನಿಗೂ ಗೊತ್ತಿರಲಿಲ್ಲವಂತೆ. ಆದ್ರೆ ಚೈನ್​​ನಲ್ಲಿ ಒಂದು ಲಿಂಕ್​ ಎಳೆದ್ರೆ ಯಾವ ರೀತಿ ಹಿಂದಿಂದೆ ಒಂದೊಂದೇ ಲಿಂಕ್ ಬರುತ್ತೋ.. ಅದೇ ಥರಾ.. ಈಕೆಯ ಮ್ಯಾರೇಜ್​ ಕಹಾನಿ ಕೂಡ ಬಯಲಾಗಿದೆ.. ಒಂದು ಹತ್ತಾಗಿ, ಹತ್ತು ಐವತ್ತಾಗಿದೆ.

ಇದನ್ನೂ ಓದಿ: ಸೂಪರ್​​ ಸ್ಟಾರ್​ ರಜನಿಕಾಂತ್​​ ಕೂಲಿ ಸಿನಿಮಾದಲ್ಲಿ ಕರ್ನಾಟಕದ ಹುಡುಗ! ಯಾರು ಈ Mr. ಇಂಡಿಯನ್​​?

ಈ ಗ್ರೇಟ್​ ತಮಿಳುನಾಡು ಮ್ಯಾರೇಜ್​ ಸ್ಟೋರಿ ಬಯಲಾದ ಮೇಲೆ ಪೊಲೀಸರು ಈಕೆಯನ್ನು ಕರೆಸಿ. ಯಾಕಮ್ಮಾ ಹಿಂಗ್​ ಮಾಡ್ದೆ ಅಂತ ಕೇಳಿದ್ರೆ ಈಕೆ ಕೊಟ್ಟ ಉತ್ತರವೇ ಹಣ ಮತ್ತು ಆಭರಣಕ್ಕಾಗಿ ಅಂತ. ಆನ್​ಲೈನ್​ನಲ್ಲಿ ಭೇಟಿ ಮಾಡೋದು, ಸಲುಗೆ ಬೆಳೆಸಿಕೊಳ್ಳೋದು, ಆಮೇಲೆ ಮದುವೆ ನಾಟಕ ಆಡಿ ಕೈಕೊಟ್ಟು, ಬೇರೆ ಮಿಕ ಹುಡುಕೋದು ಇದೆಲ್ಲವನ್ನೂ ಆಕೆ ಬಾಯ್ಬಿಟ್ಟಿದ್ದಾಳೆ.

ನೋಡಿ ಮದುವೆ ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತೆ.. ಆದ್ರೆ ಈ ಸಂಧ್ಯಾಗೆ ಮಾತ್ರ ಇದೊಂಥರಾ ಹವ್ಯಾಸ ಇದ್ದಂಗೆ. ಇಂತವರಿಂದಾನೋ ಏನೋ.. ಅದೆಷ್ಟೋ ಹುಡುಗರಿಗೆ ಮನೇಲಿ ಬಲವಂತ ಮಾಡ್ತಾ ಇದ್ರೂ ಮದುವೆ ಬಗ್ಗೆ ನಂಬಿಕೆ ಇಲ್ಲ.. ಮದುವೆ ಮಾಡಿಕೊಳ್ಳೋ ಧೈರ್ಯಾನೂ ಇಲ್ಲ ಅನ್ಸುತ್ತೆ.

ವಿಶೇಷ ವರದಿ: ರಾಹುಲ್ ದಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಯಸ್ಸು 30, ಮದುವೆ 50.. ಅಬ್ಬಾ!! ಕಿಲಾಡಿ ಲೇಡಿಯ ಕಲ್ಯಾಣದ ಕಥೆಯೇ ರೋಚಕ; ಸಿಕ್ಕಿಬಿದ್ದಿದ್ದು ಹೇಗೆ?

https://newsfirstlive.com/wp-content/uploads/2024/07/50-marriage-Woman.jpg

Load More