newsfirstkannada.com

ಜಸ್ಟ್‌ 10 ರೂಪಾಯಿಗೆ ಮಾಡ್ತಾರೆ ಮಹಾ ದೋಖಾ; ಕೆಲಸ ಹುಡುಕುತ್ತಾ ಇರೋರು ಈ ಸ್ಟೋರಿ ತಪ್ಪದೇ ಓದಿ!

Share :

Published February 19, 2024 at 4:33pm

Update February 19, 2024 at 4:24pm

    ಯಾರಿಗೆ ಕೆಲಸ ಇರೋದಿಲ್ವೋ ಅಂತವರೇ ವಂಚಕರ ಟಾರ್ಗೆಟ್​

    ನೀವು ಅಂತಹ ವಂಚಕರಿಂದ ಮೋಸ ಹೋಗೋ ಮುನ್ನ ಹುಷಾರ್!

    ಒಟಿಪಿ, ಪ್ಯಾನ್​ ಕಾರ್ಡ್‌, ಎಟಿಎಂ, ಮ್ಯಾಟ್ರಿಮೋನಿಯಿಂದಲೂ ದೋಖಾ

10 ರೂಪಾಯಿಗೆ ಈ ದುಬಾರಿ ದುನಿಯಾದಲ್ಲಿ ಏನ್​ ಬರುತ್ತೆ ನೀವೇ ಹೇಳಿ? ಒಂದು ಡೈರಿ ಮಿಲ್ಕ್​ ಚಾಕಲೇಟ್ ಬರಬೋದು, ಇಲ್ಲಾ ಒಂದು ಚಿಪ್ಸ್​ ಪ್ರಾಕೆಟ್​ ಬರಬೋದು. ಯಾಕಂದ್ರೆ ಕೇವಲ 10 ರೂಪಾಯಿಯಲ್ಲಿ ಒಂದು ಬ್ಯಾಂಕ್​ ಖಾತೆನೇ ಖದೀಬೋದು ಅಂದ್ರೆ ನೀವು ನಂಬುತ್ತಿರಾ? ಒಟಿಪಿ ದೋಖಾ, ಕಾರ್ಡ್‌ ದೋಖಾ, ಎಟಿಎಂ ದೋಖಾ, ಮ್ಯಾಟ್ರಿಮೋನಿ ದೋಖಾ, ಡಾಗ್ ದೋಖಾ. ಈ ಎಲ್ಲಾ ದೋಖಾಗಳ ಬಗ್ಗೆ ನಾವು ನಿಮಗೆ ಎಚ್ಚರಿಸಿದ್ದೇವೆ ಹಾಗೇ ನೀವೂ ಕೂಡ ಅದರ ಬಗ್ಗೆ ಎಚ್ಚೆತ್ತುಕೊಂಡಿದ್ದೀರಿ. ಆದ್ರೆ ಯಾವತ್ತಾದ್ರೂ ಈ 10 ರೂಪಾಯಿ ದೋಖಾ ಬಗ್ಗೆ ಕೇಳಿದ್ದೀರಾ? ಹಾದಾದರೇ ನೀವು ಈ ಸ್ಟೋರಿ ಓದಲೇಬೇಕು.

ಯಾರಿಗೆ ಕೆಲಸ ಇರೋದಿಲ್ವೋ ಅವರೇ ಈ ಖದೀಮರ ಮುಖ್ಯ​ ಟಾರ್ಗೆಟ್​. ಕೆಲಸ ಇಲ್ಲದೇ ಇರೋರಿಗೆ ಈ ರೀತಿಯಾಗಿ ಕಾಲ್​ ಬಂದ್ರೆ ಇಲ್ಲಾ ಮೆಸೇಜ್​ ಬಂದ್ರೆ ಹೌದು ಅಂತ ನಂಬೇ ಬಿಡ್ತೀವಿ. ಇನ್ನೂ ಕೆಲಸ ಸಿಕ್ಕರೇ ಸಾಕಪ್ಪಾ ಅನ್ನೋ ಅನೇಕರಿದ್ದಾರೆ. ಅಂತಹ ಗೊಂದಲದ ನಡುವೆ ಯಾವುದಾದ್ರೂ ಕಾಲ್ ಬಂದು ನಿಮಗೆ ಕೆಲಸ ಕೊಡಿಸ್ತೀವಿ. ಅದರಲ್ಲೂ ಬ್ಯಾಂಕ್ ಹಾಗೆ ಸರ್ಕಾರಿ ನೌಕರಿ ಕೊಡಿಸ್ತೀವಿ ಅಂದ್ರೆ ಎಷ್ಟು ಖುಷಿಯಾಗಲ್ಲ ಹೇಳಿ. ಅವರು ಪಡ್ತಿರೋ ಸಂಕಷ್ಟವೇ ಕೆಲವೊಂದಿಷ್ಟು ಜನರಿಗೆ ಬಂಡವಾಳ ಆಗಿರುತ್ತೆ.

ಇದನ್ನು ಓದಿ: ಬ್ಯಾಂಕ್​​ ಡೀಟೆಲ್ಸ್​​ ಅಪ್ಡೇಟ್​​ ಮಾಡಿ ಎಂದು ಕಾಲ್ ಬರ್ತಿದ್ಯಾ? ಮೋಸ ಹೋಗೋ ಮುನ್ನ ಸ್ಟೋರಿ ಓದಿ!

ಈ ವಂಚನೆ ಯಾವ ರೀತಿ ನಡೆಯುತ್ತೆ ಗೊತ್ತಾ?

ಮೊದಲನೆಯದಾಗಿ ತಮಗೆ ಬೇಕಾದ ನಂಬರ್‌ನ ನೋಟ್‌ಡೌನ್‌ ಮಾಡ್ಕೊಂಡು ಕಾಲ್‌ ಮಾಡ್ತಾರೆ. ಯಾರು ಬೇರೆ ಬೇರೆ ಸೈಟ್‌ಗಳಲ್ಲಿ ಜಾಬ್‌ಗೆ ಅಪ್ಲೈ ಮಾಡಿರ್ತಾರೋ ಅವರನ್ನು ಟಾರ್ಗೆಟ್‌ ಮಾಡುತ್ತಾರೆ. ಯಾವುದಾದ್ರೂ ಒಂದು ಕಂಪನಿಯ ಹೆಸರು ಹೇಳಿ ನಂಬಿಸಿ ಬಿಡ್ತಾರೆ. ನಿಮಗೂ ಕೆಲಸದ ತುಂಬಾ ಅಗತ್ಯ ಇದೆ. ಕೊಡ್ತೀವಿ ಅಂತ ಬೇರೆ ಭರವಸೆ ಕೊಟ್ಟಿದ್ದಾರೆ ಅಂತ ನೀವೇನಾದ್ರೂ ನಂಬಿ ಹಾ ಸರ್‌, ಅಂದ್ರೆ ಆಗ ಶುರುವಾಗುತ್ತೆ ನೋಡಿ ನಯ ವಂಚನೆಯ ಮಾತು. ನಿಮಗೆ ಕೆಲಸ ನಾವು ಕೊಡ್ತೀವಿ. ನಮ್ಮದು ಅದೇ ಕೆಲಸ. ಸರ್ಕಾರಿ ಕೆಲಸವನ್ನೇ ಕೊಡಿಸ್ತೀವಿ. ಇಲ್ಲಾ ಬ್ಯಾಂಕ್‌ ಕೆಲಸ ಬೇಕು ಅಂದ್ರೆ ಅದನ್ನೂ ಕೊಡಿಸೋಕೆ ಹೆಲ್ಪ್‌ ಮಾಡ್ತೀವಿ. ಒಟ್ಟಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುತ್ತೆವೆ. ಟೆನ್ಶನ್ನೇ ಮಾಡಿಕೊಳ್ಳಬೇಡಿ. ನಮ್ಮ ಕೆಲಸಾನೇ ಅದು. ಬಟ್‌ ನೀವು ಮಾಡ್ಬೇಕಾಗಿರೋದು ಇಷ್ಟೇ ನೋಡಿ. ಜಸ್ಟ್ 10 ರೂಪಾಯಿ ಕೊಟ್ಟು ಅಪ್ಲಿಕೇಶನ್ ಫಿಲ್ ಮಾಡಿ ಅಷ್ಟೇ ಅಂತ ಬಲೆಗೆ ಬೀಳಿಸಿಕೊಳ್ಳುತ್ತಾರೆ.

ಆಗ ನೀವು ಯಾವ ಅಪ್ಲಿಕೇಶನ್ ಅಂತ ಕೇಳಿದಾಗಲೇ ಅಸಲಿ ಆಟ ಶುರುವಾಗೋದು. ಇದಕ್ಕೆ ವಂಚಕರು, ನಿಮಗೆ ಒಂದು ಅಪ್ಲಿಕೇಶನ್​ನ ಲಿಂಕ್‌ ಕಳಿಸ್ತೀವಿ. ಅದನ್ನ ನೀವು ಫಿಲ್ ಮಾಡಬೇಕು. ನಿಮ್ಮ ಮೊಬೈಲ್‌ ನಂಬರ್‌ಗೆ ಕಳುಹಿಸುತ್ತೇವೆ ನೋಡಿ ಅನ್ನುತ್ತಾರೆ. ಆಗ ನೀವು ಹಾ ಬಂದಿದೆ ಲಿಂಕ್‌. ಅಕೌಂಟ್‌ ನಂಬರ್‌, ಸಿವಿವಿ ನಂಬರ್‌ ಕೂಡ ಕೇಳ್ತಿದೆ. ಏನ್‌ ಮಾಡೋದು ಈಗ ಅಂದ್ರೆ, ಅವರು, ಸುಮ್ನೆ ಫಾರ್ಮಾಲಿಟೀಸ್‌ ಅಷ್ಟೇ. ಆ ಅಕೌಂಟ್‌ ನಂಬರ್‌, ಕಾರ್ಡ್‌ ಸಿವಿವಿ ನಂಬರ್ ಎಲ್ಲಾ ಹಾಕಿ. ಅಕೌಂಟ್‌ನಿಂದ ಜಸ್ಟ್‌ 10 ರೂಪಾಯಿ ಮಾತ್ರ ಡಿಡಕ್ಟ್‌ ಆಗುತ್ತೆ ಅಷ್ಟೇ. ಅದು ಅಪ್ಲಿಕೇಶನ್ ಫೀಸ್‌. ನಂಬರ್‌ ಹಾಕಿದ್ರೆ ಜಸ್ಟ್‌ ಹತ್ತೇ ರೂಪಾಯಿ ಕಟ್‌ ಆಗುತ್ತಷ್ಟೇ. ಡೋಂಟ್‌ ವರಿ ಅಂತಾರೆ. ಇಷ್ಟಾಗಿ ಕಾಲ್‌ ಇಡುತ್ತಿದ್ದಂತೆ ಜಸ್ಟ್ 10 ನಿಮಿಷ. ಹತ್ತೇ ನಿಮಿಷದಲ್ಲಿ ನಿಮ್ಮ ಅಕೌಂಟ್​​ನಲ್ಲಿರೋ ಎಲ್ಲಾ ಹಣ ಖಾಲಿಯಾಗುತ್ತೆ. ನಿಮ್ಮ ಕೈಯಿಂದಲೇ ಎಲ್ಲಾ ಡಿಟೇಲ್ಸ್‌ ಫಿಲ್‌ ಮಾಡಿಸೋ ಖದೀಮರು ಅಕೌಂಟ್‌ನಲ್ಲಿ ಇದ್ದಿದ್ದೆಲ್ಲವನ್ನೂ ದೋಚಿ ಬಿಡ್ತಾರೆ. ಅಕೌಂಟ್‌ನ ಖಾಲಿ ಮಾಡಿಬಿಡ್ತಾರೆ. ನಿಮ್ಮನ್ನ ದಿವಾಳಿ ಮಾಡಿಬಿಡ್ತಾರೆ. ಎಷ್ಟು ಸಿಂಪಲ್ಲಾಗಿ ಹತ್ತೇ ಹತ್ತು ರೂಪಾಯಿ ಅಂತ್ಹೇಳಿ ಯಾಮಾರಿಸ್ತಾರೆ ನೋಡಿ.

ಇಂತಹ ವಂಚಕರಿಂದ ಬಚಾವಾಗೋದು ಹೇಗೆ ಗೊತ್ತಾ?

ಮೊದಲನೆಯದಾಗಿ ಕೆಲಸ ಬೇಕು ಅಂದ್ರೆ ನೀವೇ ಖುದ್ದಾಗಿ ಹೋಗಿ ಕಂಪನಿಗಳಲ್ಲಿ ಜಾಬ್‌ಗೆ ಅಪ್ಲೈ ಮಾಡಿ. ನೀವೇ ಹೋಗಿ ವಿಚಾರಿಸಿ. ನಿಮಗೆ ಯಾರೇ ಕರೆ ಮಾಡಿದ್ರೆ ಅವರನ್ನು ಯಾವುದೇ ಕಾರಣಕ್ಕೂ ನಂಬೋದಕ್ಕೆ ಹೋಗಬೇಡಿ. ಬ್ಯಾಂಕ್‌ನಿಂದ ಅಂದಾಗ ಅವರ ಪೂರ್ಣ ಮಾಹಿತಿ ತಿಳಿದುಕೊಳ್ಳಿ. ನಿಮ್ಮ ಅಕೌಂಟ್ ನಂಬರ್‌ನ ಯಾವುದೇ ಕಾರಣಕ್ಕೂ ಯಾರಿಗೂ ಕೊಡೋದಕ್ಕೆ ಹೋಗಬೇಡಿ. ಸಿವಿವಿ, ಒಟಿಪಿ ನಂಬರ್‌ನ ಯಾವುದೇ ಕಾರಣಕ್ಕೂ ಯಾರ ಜೊತೆಯೂ ಶೇರ್ ಮಾಡಬೇಡಿ. ಕೆಲಸ ಕೊಡಿಸುವವರು ನಿಮ್ಮ ಅಕೌಂಟ್ ನಂಬರ್, ಒಟಿಪಿ ಯಾವತ್ತೂ ಕೇಳೋದಿಲ್ಲ. ಅದರಲ್ಲೂ ಯಾರಾದ್ರೂ ಕಾಲ್‌ನಲ್ಲೇ ಇದ್ದು ಅಪ್ಲಿಕೇಶನ್ ಫಿಲ್ ಮಾಡಲು ಹೇಳಿದ್ರೆ ನಂಬೋಕೇ ಹೋಗಬೇಡಿ. ಇನ್ನೂ ಯಾರಾದ್ರೂ ಲಿಂಕ್‌ ಕಳುಹಿಸಿ ಫಿಲ್ ಮಾಡೋಕೆ ಹೇಳಿದ್ರೆ ದಯವಿಟ್ಟು ಮಾಡಬೇಡಿ. ನೆನಪಿಡಿ ಯಾವುದೇ, ಏಜೆಂಟ್‌ಗಳು ಲಿಂಕ್ ಕಳುಹಿಸಿ ಕೊಡುವುದಿಲ್ಲ. ಇದಕ್ಕೂ ಮೇಲಾಗಿ ಮುಖ್ಯವಾಗಿ ಏನು ಅಂದ್ರೆ ಕೆಲಸ ಕೊಡಿಸ್ತೀವಿ ಅಂತ 10 ರೂಪಾಯಿ ಕೇಳಿದ್ರೆ ತಕ್ಷಣ ಅಲರ್ಟ್‌ ಆಗಿ. ಇದು ಪಕ್ಕಾ ದೋಖಾ ಅಂತಾನೇ ಅರ್ಥ. ಕೇವಲ 10 ರೂಪಾಯಿ ಬಂಡವಾಳ ಹಾಕಿ ಅಂತ ಹೇಳಿ, ಯಾವ ರೀತಿ ನಿಮ್ಮ ಬ್ಯಾಂಕ್​ ಖಾತೇನೆ ಬರ್ಬಾದ್​ ಮಾಡ್ತಾರೆ ಅಂತ ಇನ್ನು ಮುಂದೆ ಇಂತಹ ಕಾಲ್​ಗಳನ್ನ ಸ್ವೀಕರಿಸಿ 10 ರೂಪಾಯಿ ಹಾಕೋ ಮುನ್ನ ಎಚ್ಚರ ವಹಿಸಿ.

ವಿಶೇಷ ವರದಿ: ರಾಹುಲ್ ದಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್‌ 10 ರೂಪಾಯಿಗೆ ಮಾಡ್ತಾರೆ ಮಹಾ ದೋಖಾ; ಕೆಲಸ ಹುಡುಕುತ್ತಾ ಇರೋರು ಈ ಸ್ಟೋರಿ ತಪ್ಪದೇ ಓದಿ!

https://newsfirstlive.com/wp-content/uploads/2024/02/cyber.jpg

Load More