ಬೆಂಗಳೂರಲ್ಲಿ ನಾಳೆಯೇ RCB ಪಂದ್ಯ; ಟಿಕೆಟ್ ಬೇಕು ಅಂದ್ರೆ ಏನು ಮಾಡಬೇಕು..?

author-image
Ganesh
Updated On
RCBಗೆ ಮತ್ತೆ ಕೈಕೊಟ್ಟ ಟಾಸ್​.. ಪ್ಲೇಯಿಂಗ್-11ರಲ್ಲಿ ಬಲಿಷ್ಠ ಬೆಂಗಳೂರು ತಂಡ ಹೇಗಿದೆ?
Advertisment
  • ನಾಳೆ ಆರ್​ಸಿಬಿ vs ಗುಜರಾತ್ ಟೈಟನ್ಸ್ ಪಂದ್ಯ
  • ಸಂಜೆ 7.30ಕ್ಕೆ RCB vs GT ಪಂದ್ಯ ಆರಂಭ
  • ಆನ್​ಲೈನ್​​ನಲ್ಲಿ ಟಿಕೆಟ್ ಖರೀದಿಸೋದು ಹೇಗೆ?

ನಾಳೆ ಗುಜರಾತ್​ ಟೈಟನ್ಸ್​ ವಿರುದ್ಧ ಆರ್​ಸಿಬಿ ಬೆಂಗಳೂರಿನಲ್ಲಿ ಸೆಣಸಾಟ ನಡೆಸಲಿದೆ. 18ನೇ ಆವೃತ್ತಿಯ 14ನೇ ಪಂದ್ಯ ಇದಾಗಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಆರ್​ಸಿಬಿಗೆ ತವರಿನಲ್ಲಿ ಪಂದ್ಯ ನಡೆಯುತ್ತಿರುವ ಮೊದಲ ಪಂದ್ಯವಾಗಿದೆ. ರಜತ್ ಪಾಟೀದಾರ್ ನೇತೃತ್ವದಲ್ಲಿ ತಂಡಕ್ಕೆ ಹೊಸ ಕಳೆ ಬಂದಿದ್ದು, ಇಲ್ಲಿಯವರೆಗೆ ಆಡಿರುವ ಎರಡೂ ಪಂದ್ಯಗಳನ್ನೂ ಗೆದ್ದುಕೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ.

ಇದನ್ನೂ ಓದಿ: ಮತ್ತೆ CSK ಸೋಲಿಸಿದ ಆರ್​ಸಿಬಿ.. ಆಫ್​ ದಿ ಫೀಲ್ಡ್​ನಲ್ಲೂ ಬೆಂಗಳೂರೇ ನಂಬರ್ ಒನ್..!

ಬೆಂಗಳೂರಿನಲ್ಲೇ ಪಂದ್ಯ ನಡೆಯುತ್ತಿರೋದ್ರಿಂದ ನೀವೂ ಕೂಡ ಸ್ಟೇಡಿಯಂಗೆ ಹೋಗಿ ವೀಕ್ಷಣೆ ಮಾಡಬಹುದಾಗಿದೆ. ಟಿಕೆಟ್ ಖರೀದಿಸಿ ಸ್ಟೇಡಿಯಂಗೆ ಹೋದರೆ ಎಕ್ಸೈಟಿಂಗ್ ಥ್ರಿಲ್ಲಿಂಗ್ ಸಿಗಲಿದೆ. ಒಂದು ವೇಳೆ ಇನ್ನೂ ನೀವು ಟಿಕೆಟ್ ಖರೀದಿಸದಿದ್ದರೆ, ಟೆಕೆಟ್ ಎಲ್ಲಿ ದೊರೆಯುತ್ತದೆ ಅನ್ನೋ ವಿವರ ಹೀಗಿದೆ.

ಐಪಿಎಲ್ 14ನೇ ಪಂದ್ಯಕ್ಕೆ ಟಿಕೆಟ್​ ಎಲ್ಲಿ ಸಿಗುತ್ತೆ..?

  • ಬುಕ್​ಮೈಶೋ (BookMyShow)
  • ಪೇಟಿಎಂ ಇನ್​ಸೈಡರ್ (Paytm Insider)
  • ಐಪಿಎಲ್ ಆಫೀಸಿಯಲ್ ವೆಬ್​ಸೈಟ್ (iplt20.com)
  •  ಐಪಿಎಲ್​ನ ಆಫೀಸಿಯಲ್ ವೆಬ್​ಸೈಟ್ (RCB, GT)
  •  ಝುಮ್ಯಾಟೋ ಡಿಸ್ಟ್ರಿಕ್ಟ್​ (Zomato District)
  •  ಬುಕ್ ಮಾಡೋದು ಹೇಗೆ..?

ಅಧಿಕೃತ ಟಿಕೆಟಿಂಗ್ ವೆಬ್​ಸೈಟ್​ಗೆ ಭೇಟಿ ಕೊಡಿ

  • ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ RCB vs GT ಪಂದ್ಯ ಸೆಲೆಕ್ಟ್ ಮಾಡಿ
  •  ನಿಮ್ಮ ಬಜೆಟ್ ಆಧಾರದ ಮೇಲೆ ಸೀಟ್​ ಮೇಲೆ ಕ್ಲಿಕ್ ಮಾಡಿ
  •  Proceed to checkout ಮೇಲೆ ಕ್ಲಿಕ್ ಮಾಡಿ
  •  ನಂತರ ಪೇಮೆಂಟ್​ ಮಾಡಿ
  •  via email ಮೂಲಕ ಜೊತೆಗೆ ಮೆಸೇಜ್ ಮೂಲಕ ಟಿಕೆಟ್​ ಕನ್ಫರ್ಮ್ ಆಗಲಿದೆ

ಇದನ್ನೂ ಓದಿ: ನಾಳೆ RCB ಹೈವೋಲ್ಟೇಜ್ ಪಂದ್ಯ.. ಚಿನ್ನಸ್ವಾಮಿ ಸ್ಟೇಡಿಯಂ ಕಡೆ ಹೋಗೋರು ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment