/newsfirstlive-kannada/media/post_attachments/wp-content/uploads/2025/04/PBKS-5.jpg)
ಐಪಿಎಲ್ ಸೀಸನ್ 18ರಲ್ಲಿ ಪಂಜಾಬ್ ಕಿಂಗ್ಸ್ ಬಲಿಷ್ಟ ತಂಡವಾಗಿ ಕಾಣ್ತಿದೆ. ಕಳೆದ ಸೀಸನ್ಗೆ ಹೋಲಿಸಿದ್ರೆ ಈ ಸೀಸನ್ನಲ್ಲಿ ಪಂಜಾಬ್ ಡಿಫರೆಂಟ್ ಟೀಮ್ ಆಗಿದೆ. ಈಗಾಗಲೇ ಟೂರ್ನಿಯಲ್ಲಿ ಹಲ್ಚಲ್ ಎಬ್ಬಿಸಿರೋ ಪಂಜಾಬ್, ಐಪಿಎಲ್ ಗೆಲ್ಲೋ ಫೇವರಿಟ್ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ.
ಕೆಕೆಆರ್ ಎದುರು 111 ರನ್ಗಳನ್ನ ಡಿಫೆಂಡ್ ಮಾಡಿಕೊಂಡ ಪಂಜಾಬ್ ಕಿಂಗ್ಸ್ ಐಪಿಎಲ್ನಲ್ಲಿ ನೂತನ ದಾಖಲೆ ನಿರ್ಮಿಸಿತು. ಪಂಜಾಬ್ ಕಿಂಗ್ಸ್ ಬಗ್ಗೆ ಹೆಚ್ಚು ಮಾತನಾಡೋ ಅವಶ್ಯಕತೆ ಇಲ್ಲ. ಈ ಬಾರಿ ಪಂಜಾಬ್, ಸಖತ್ ಸ್ಟ್ರಾಂಗ್ ಆಗಿ ಕಾಣ್ತಿದೆ. ಹೊಸ ತಂಡ, ಹೊಸ ನಾಯಕ, ಹೊಸ ಕೋಚ್, ಪಂಜಾಬ್ ಕಿಂಗ್ಸ್ ಹಣೆಬರಹವನ್ನೇ ಬದಲಿಸಿದ್ದಾರೆ.
ಇದನ್ನೂ ಓದಿ: 4 ವರ್ಷಗಳ ಬಳಿಕ ಐಪಿಎಲ್ನಲ್ಲಿ ಸೂಪರ್ ಓವರ್.. ಕಾದಾಟದ ರೋಚಕ ಕ್ಷಣಗಳು ಹೇಗಿದ್ದವು..?
ಪಂಜಾಬ್ ತಂಡಕ್ಕೆ 'ಪವರ್ ಹಿಟ್ಟರ್ಸ್' ಶಕ್ತಿ
ಪ್ರಿಯಾನ್ಶ್ ಆರ್ಯ ಮತ್ತು ಪ್ರಭ್ಸಿಮ್ರನ್ ಸಿಂಗ್, ಪಂಜಾಬ್ ತಂಡದ ಡಿಸ್ಟ್ರಕ್ಟಿವ್ ಬ್ಯಾಟರ್ಸ್. ಪವರ್ ಪ್ಲೇನಲ್ಲಿ ಎದುರಾಳಿ ಬೌಲರ್ಗಳ ಬೆವರಿಳಿಸೋ ಈ ಆಟಗಾರರು, ತಮ್ಮ ಪವರ್ ಹಿಟ್ಟಿಂಗ್ನಿಂದ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸುತ್ತಿದ್ದಾರೆ. ಇವ್ರ ಬ್ಯಾಟಿಂಗ್ನಿಂದ ಪಂಜಾಬ್, ಆರಂಭದಲ್ಲೇ ಎದುರಾಳಿಗಳ ವಿರುದ್ಧ ಡಾಮಿನೇಟ್ ಮಾಡಲು ಸಾಧ್ಯವಾಗ್ತಿದೆ.
ಕ್ಯಾಪ್ಟನ್ ಶ್ರೇಯಸ್
ನಾಯಕ ಶ್ರೇಯಸ್ ಅಯ್ಯರ್ರನ್ನ, ಪಂಜಾಬ್ ತಂಡದ ಲಕ್ಕಿ ಕ್ಯಾಪ್ಟನ್ ಅಂದ್ರೆ ತಪ್ಪಾಗೋದಿಲ್ಲ. ಶ್ರೇಯಸ್ ಎಂಟ್ರಿಯಿಂದ ಪಂಜಾಬ್ ತಂಡದ ಚರಿಷ್ಮಾನೇ ಬದಲಾಗಿದೆ. ಬ್ಯಾಟಿಂಗ್ನಲ್ಲಿ ಶ್ರೇಯಸ್ ಔಟ್ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಕನ್ಸಿಸ್ಟೆಂಟ್ ಆಗಿ ತಂಡಕ್ಕೆ ರನ್ ಕಾಣಿಕೆ ನೀಡ್ತಿದ್ದಾರೆ. ನಾಯಕನಾಗಿಯೂ ಶ್ರೇಯಸ್, ಚಾಣಾಕ್ಷ ಎನಿಸಿಕೊಂಡಿದ್ದಾರೆ.
ಸಿಂಗ್ ರಿಯಲ್ ಕಿಂಗ್..!
ಪಂಜಾಬ್ ಕಿಂಗ್ಸ್ನ ರಿಯಲ್ ಕಿಂಗ್ ಶಶಾಂಕ್ ಸಿಂಗ್. ತಂಡ ಸಂಕಷ್ಟಕ್ಕೆ ಸಿಲುಕಿದಾಗ ಶಶಾಂಕ್, ಆಪತ್ಭಾಂದವನಂತೆ ತಂಡದ ಕೈಹಿಡಿತಾರೆ. ಏಕಾಂಗಿಯಾಗಿ ಹೋರಾಡಿ ಪಂದ್ಯವನ್ನ ಗೆಲ್ಲಿಸಿಕೊಡೋ ಕೆಪಾಸಿಟಿ, ಶಶಾಂಕ್ಗಿದೆ. ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ಶಶಾಂಕ್ ಸಿಡಿಸಿದ ಸ್ಪೋಟಕ ಅರ್ಧಶತಕ, ಇವ್ರ ಟ್ಯಾಲೆಂಟ್ ಅನ್ನ ಎತ್ತಿ ತೋರಿಸುತ್ತದೆ. ಶಶಾಂಕ್ ನಾಕೌಟ್ ಪಂಚ್ಗಳನ್ನ, ಮುಂದಿನ ಪಂದ್ಯಗಳಲ್ಲಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ಅಂಪೈರ್ಗಳಿಗೆ ಡೌಟ್ ಬಂದ್ರೆ ದಿಢೀರ್ ತಪಾಸಣೆ.. ಐಪಿಎಲ್ನಲ್ಲಿ ಯಾಕೆ ಬ್ಯಾಟ್ ಚೆಕ್ ಮಾಡ್ತಿದ್ದಾರೆ?
ಚಹಲ್ ಚಮಕ್
ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಅನುಭವಿ ಲೆಗ್ಸ್ಪಿನ್ನರ್ ಚಹಲ್, ಪಂಜಾಬ್ ಕಿಂಗ್ಸ್ನ ಆಸ್ತಿ. ಚಹಲ್ ತಂಡದಲ್ಲಿದ್ರೆ ನಾಯಕನಿಗೆ ನೋ ಟೆನ್ಶನ್. ಟಿ-20 ಫಾರ್ಮೆಟ್ನಲ್ಲಿ ಮೋಸ್ಟ್ ಎಫೆಕ್ಟೀವ್ ಸ್ಪಿನ್ನರ್ ಎನಿಸಿಕೊಂಡಿರುವ ಚಹಲ್, ಎದುರಾಳಿ ಬ್ಯಾಟರ್ಸ್ಗೆ ಸಖತ್ ಚಮಕ್ ಕೊಡ್ತಾರೆ. ಚಹಲ್ ಚಮಕ್ಗೆ, ಅದೆಷ್ಟೋ ಬ್ಯಾಟರ್ಸ್, ಪೆವಿಲಿಯನ್ ಸೇರಿಕೊಂಡ ಉದಾಹರಣೆಗಳಿವೆ. ಚಹಲ್, ಪಂಜಾಬ್ ಕಿಂಗ್ಸ್ನ ರಿಯಲ್ ಗೇಮ್ ಚೇಂಜರ್.
ರಿಕಿ ಪಾಟಿಂಗ್ ಸಖತ್ ಗೇಮ್ ಪ್ಲಾನ್
ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್, ಪಂಜಾಬ್ ತಂಡದ ಯಶಸ್ಸಿಗೆ ಪ್ರಮುಖ ಕಾರಣ. ಆಫ್ ದ ಫೀಲ್ಡ್ನಲ್ಲಿ ಗೇಮ್ ಪ್ಲಾನ್, ಸ್ಟ್ರಾಟಜಿ ರೂಪಿಸೋ ಕೋಚ್ ಪಾಂಟಿಂಗ್, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಪಾಲಿಗೆ, ಶ್ರೀಕೃಷ್ಣನಿದ್ದಂತೆ. ಕೋಚ್ ಪ್ಲಾನ್ಗಳನ್ನ ಆನ್ಫೀಲ್ಡ್ನಲ್ಲಿ ಶ್ರೇಯಸ್, ಸಖತ್ ಆಗೇ ಇಂಪ್ಲಿಮೆಂಟ್ ಮಾಡ್ತಿದ್ದಾರೆ. ಇಬ್ಬರ ಜೋಡಿ, ಕಿಂಗ್ಸ್ಗೆ ವರ್ಕ್ಔಟ್ ಆಗ್ತಿದೆ. ಈ ಪಾಂಟಿಂಗ್ ಮತ್ತು ಶ್ರೇಯಸ್, ಈ ಬಾರಿ ಕಪ್ ಗೆದ್ದು ಪಂಜಾಬ್ ಹಣೆಬರಹ ಬದಲಾಯಿಸೋಕೆ ಹೊರಟಿದ್ದಾರೆ. ಪಂಜಾಬ್ನ ಈ ತಂತ್ರಗಳು, ನಾಳೆ ನಡೆಯಲಿರುವ ಆರ್ಸಿಬಿಗೂ ಕಂಟಕವಾದರೂ ಅಚ್ಚರಿ ಇಲ್ಲ. ಪಂಜಾಬ್ ಕಿಂಗ್ಸ್ ಆನ್ಪೇಪರ್ ಅಷ್ಟೇ ಅಲ್ಲ. ಆನ್ಫೀಲ್ಡ್ನಲ್ಲೂ ರಿಯಲ್ ಕಿಂಗ್ಸ್. ಪಂಜಾಬ್ ಪಡೆ, ಇದೇ ಆಟ ಮುಂದುವರೆಸಿದ್ರೆ ಐಪಿಎಲ್ ಟ್ರೋಫಿ ಗೆಲ್ಲೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: ಪಂಜಾಬ್ನ ತ್ರಿಮೂರ್ತಿಗಳಿಗೆ ಆರ್ಸಿಬಿಯಿಂದ ತ್ರಿವಳಿ ಅಸ್ತ್ರ.. ಇದು ಭಯಂಕರ ಡೇಂಜರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್