ಟ್ಯಾಟೂ ಪ್ರಿಯರೇ ಹುಷಾರ್.. ಹಚ್ಚೆ ಚುಚ್ಚಿಸಿಕೊಳ್ಳುವ ಮೊದಲು ನೀವು ಏನು ಮಾಡಬೇಕು; ತಪ್ಪದೇ ಈ ಸ್ಟೋರಿ ಓದಿ!

author-image
Gopal Kulkarni
Updated On
ಟ್ಯಾಟೂ ಪ್ರಿಯರೇ ಹುಷಾರ್.. ಹಚ್ಚೆ ಚುಚ್ಚಿಸಿಕೊಳ್ಳುವ ಮೊದಲು ನೀವು ಏನು ಮಾಡಬೇಕು; ತಪ್ಪದೇ ಈ ಸ್ಟೋರಿ ಓದಿ!
Advertisment
  • ಟ್ಯಾಟೂ ಹಾಕಿಸಿಕೊಂಡ ನಂತರ ಪಶ್ಚಾತಾಪ ಪಡುವ ಮುನ್ನ ಎಚ್ಚರ
  • ಟ್ರೆಂಡ್​ಗಳ ಹಿಂದೆ ಬಿದ್ದು ನಂತರ ಗೋಳಾಡುವುದಕ್ಕಿಂತ ಈ ರೀತಿ ಮಾಡಿ
  • ಗಡಿಬಿಡಿ ಬೇಡ, ಸಮಯ ತೆಗೆದುಕೊಂಡು ಗಾತ್ರ, ಡಿಸೈನ್ ಬಗ್ಗೆ ನಿರ್ಧಾರ ಮಾಡಿ

ಟ್ಯಾಟೂ ಈಗ ಟ್ರೆಂಡಿಂಗ್​ನಲ್ಲಿರುವ ಒಂದು ಫ್ಯಾಶನ್. ಹಲವರು ಹಲವು ರೀತಿಯಲ್ಲಿ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಮೈಮೇಲೆ ಚರ್ಮಕ್ಕಿಂತ ಹೆಚ್ಚಾಗಿ ಟ್ಯಾಟೂಗಳೇ ಕಾಣುವ ಮಟ್ಟದಲ್ಲಿ ಹುಚ್ಚುತನವನ್ನು ಆವರಿಸಿಕೊಂಡವರು ಇದ್ದಾರೆ. ಅನೇಕರು ತಮ್ಮ ಮೊದಲ ಟ್ಯಾಟೂವನ್ನು ಒಂದು ಕಪ್ ಕಾಫಿಗೆ ಹೋಲಿಸಿಕೊಂಡು ಹಾಕಿಸಿಕೊಳ್ಳುತ್ತಾರೆ. ಆದ್ರೆ ನೆನಪಿರಲಿ ಕಾಫಿ ಒಂದು ಸಮಯಕ್ಕೆ ಮುಗಿದು ಹೋಗುತ್ತದೆ. ಆದ್ರೆ ಟ್ಯಾಟೂ ಹಾಗಲ್ಲ. ಕೊನೆಯವರೆಗೂ ನಮಗೆ ಅಂಟಿಕೊಂಡೇ ಇರುವಂತದ್ದು. ಹೀಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಜಾಗ ಹಾಗೂ ಡಿಸೈನ್ ಬಗ್ಗೆ ಮೊದಲೇ ನಿಮಗೆ ಒಂದು ನಿಶ್ಚಯವಿರಲಿ.

ಅನೇಕರು ಟ್ಯಾಟೂ ಹಾಕಿಸಕೊಂಡ ನಂತರ ಮಮ್ಮಲ ಮರುಗಿದವರಿದ್ದಾರೆ. ನಾನು ಅಂದುಕೊಂಡಂತೆ ಟ್ಯಾಟೂ ಬಂದಿಲ್ಲವೆಂದೋ, ಇದಕ್ಕಿಂತ ಆ ವಿನ್ಯಾಸ ಇನ್ನೂ ಚೆನ್ನಾಗಿತ್ತು ಎಂದೋ ಮರುಗಿದ್ದಾರೆ. ಆದ್ರೆ ಕಾಲ ಮಿಂಚಿ ಹೋಗಿರುತ್ತದೆ. ಕೆಲವೊಮ್ಮೆ ಟ್ರೆಂಡ್​ನಲ್ಲಿರುವ ಸಿಂಬಾಲ್​ಗಳೇ ಅವರಿಗೆ ದುಬಾರಿ ಎನಿಸಿಬಿಡುತ್ತವೆ. ಟ್ಯಾಟೂ ಹಾಕಿಸಿಕೊಂಡ ಮೇಲೆ ಅವರಿಗೆ ಅದು ಇಷ್ಟವಾದೇ ಹೋದಾಗ ತಮ್ಮ ಬಗ್ಗೆ ತಾವೇ ಬೇಸರಪಡುವವರಿದ್ದಾರೆ.

ಟ್ಯಾಟೊ ಹಾಕಿಸಿಕೊಳ್ಳುವುದು ವ್ಯಕ್ತಿಯಿಂದ ವ್ಯಕ್ತಿಗೆ ಪ್ರೇರಣೆಯಿಂದ ಬಂದ ಒಂದು ಟ್ರೆಂಡ್ ಇದರ ಹಿಂದೆ ನಮ್ಮ ಪರಂಪರೆಯ ಗುರುತು ಕೂಡ ಇದೆ. ಒಂದು ಭಾವನಾತ್ಮಕ ನಂಟು ಕೂಡ ಇದೆ. ಸದ್ಯ ಟ್ಯಾಟೂ ಒಂದು ಸೌಂದರ್ಯದ ಗುರುತಾಗಿ ಗುರುತಿಸಿಕೋಂಡಿದೆ ಅದರ ಜೊತೆಗೆ ಕಲೆ ಹಾಗೂ ಪ್ರೀತಿಯ ಹೆಗ್ಗುರುತಾಗಿಯೂ ನಿಂತಿದೆ. ಕೆಲವರ ತಮ್ಮ ಸ್ವಯಂ ಅಭಿವ್ಯಕ್ತಿಗೆ. ಪ್ರೀತಿಯ ಅಭಿವ್ಯಕ್ತಿಗೆ ಅಂತ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಕೊನೆಯಾದಗಿ ಟ್ಯಾಟೂ ವೈಯಕ್ತಿಕ ಬೆಳವಣಿಗೆಯ ಗುರುತಾಗಿಯೂ ಕೂಡ ಕಾಣಿಸಿಕೊಂಡಿದೆ.
ಟ್ಯಾಟೂ ಹಾಕಿಸಿಕೊಳ್ಳುವ ಸರಿಯಾದ ಜಾಗ ಯಾವುದು.

publive-image

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಅನೇಕ ಕಡೆ ಟ್ಯಾಟೂ ಹಾಕಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದ್ರೆ ಹೆಚ್ಚು ನೋವಾಗಲಾರದ ಜಾಗಗಳು ಅಂತ ಕೆಲವು ಇವೆ ಅಲ್ಲಿ ಹಾಕಿಸಿಕೊಂಡರೆ ತುಂಬಾ ಒಳ್ಳೆಯದು. ಟ್ಯಾಟೂ ಚಿತ್ರಕಲೆಗಾರರು ಹೇಳುವ ಪ್ರಕಾರ ಮುಂದೊಳು (Forearm), ಮೇಲಿನ ತೋಳು ಹಾಗೂ ಬೆನ್ನಹಿಂದೆ ಟ್ಯಾಟೂ ಹಾಕಿಸಿಕೊಳ್ಳುವುದು ಉ್ತಮ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಜನರು ಇಷ್ಟ ಪಡುವ ಡಿಸೈನ್​ಗಳು ಅಂದ್ರೆ ಅದು ಹೂವಿನಾಕಾರದ ವಿನ್ಯಾಸ, ಪ್ರೇರಣಾತ್ಮಕ ಕೋಟ್​ಗಳು, ಹೀಗೆ ಹಲವು ಡಿಸೈನ್​ಗಳನ್ನು ಆಯ್ಕೆ ಮಾಡುತ್ತಾರೆ.

ಪಶ್ಚಾತಾಪ ಬೇಡ
ಸ್ವಾಭಾವಿಕವಾಗಿ ಹಾಗೂ ದಿಢೀರ್​ ನಿರ್ಧಾರಗಳಿಂದ ಟ್ಯಾಟೊ ಹಾಕಿಸಿಕೊಂಡವರು ಅನೇಕ ಬಾರಿ ಪಶ್ಚಾತಾಪಪಟ್ಟಿದ್ದನ್ನು ಅನೇಕ ಟ್ಯಾಟೂ ಕಲೆಗಾರರು ಹೇಳಿದ್ದಾರೆ. ಹದಿಹರೆಯದ ಹುಡುಗರು ಹಾಗೂ ವಯಸ್ಕರರು ತಮ್ಮ ಪ್ರೇಮಿಯ ಟ್ಯಾಟೊವನ್ನು ಹಾಕಿಸಿಕೊಳ್ಳುತ್ತಾರೆ ಮುಂದೊಂದು ದಿನ ಆ ಪ್ರೀತಿಯು ಮುರಿದು ಬಿದ್ದಾಗ ನೋವು ಪಡುತ್ತಾರೆ. ಬೇಜಾರು ಹಾಗೂ ದಿಢೀರ್ ನಿರ್ಧಾರಗಳಿಂದ ಟ್ಯಾಟೂ ಹಾಕಿಸಿಕೊಳ್ಳುಲು ಹೋಗಬಾರದು. ಅದು ಮುಂದೊಂದು ದಿನ ಪಶ್ಚಾತಾಪಕ್ಕೆ ಕಾರಣವಾಗುತ್ತದೆ.

publive-image

ಇದನ್ನೂ ಓದಿ:ಇಲ್ಲೊಂದು ಅದ್ಭುತ ಹಳ್ಳಿ! ಇಲ್ಲಿ ಎಣ್ಣೆ ಕುಡಿಯಂಗಿಲ್ಲ.. ಚಟಕ್ಕೆ ಬಿದ್ದವ್ರಿಗೆ ಎಂಟ್ರಿಯೇ ಇಲ್ಲ..

ಟ್ಯಾಟೂ ಹಾಕಿಸಿಕೊಂಡು ಪಶ್ಚಾತಾಪಡುವವರಲ್ಲಿ ಹೆಚ್ಚು ಕಾಣ ಸಿಗುವುದು ಅವಸರಕ್ಕೆ ಬಿದ್ದು ಟ್ಯಾಟೂ ಹಾಕಿಸಿಕೊಂಡವರು ಅಂತ ಟ್ಯಾಟೊ ಆರ್ಟಿಸ್ಟ್​ ಯಧುವಂಶಿ ಹೇಳುತ್ತಾರೆ. ಹೀಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಹಲವು ಬಾರಿ ಯೋಚಿಸಬೇಕು. ಮೊದಲು ಯಾವ ಸ್ಟೈಲ್ ಟ್ಯಾಟೂ ಇರಬೇಕು ಎಂಬುದರ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕು. ನಂತರ ಟ್ಯಾಟೂ ಹಾಕುವದರಲ್ಲಿ ಪರಿಣಿತತೆ ಇದ್ದವರಲ್ಲಿಯೇ ಹೋಗಿ ಟ್ಯಾಟೂ ಹಾಕಿಸಿಕೊಳ್ಳಬೇಕು. ನೀವು ಹಾಕಿಸಿಕೊಳ್ಳುವ ಟ್ಯಾಟೂ ನಿಮ್ಮ ಜೀವನದೊಂದಿಗೆ ಆಳವಾಗಿ ಭಾವನಾತ್ಮಕ ನಂಟನ್ನು ಹೊಂದಿರಬೇಕು.

ಇದನ್ನೂ ಓದಿ: ರೆಹಮಾನ್​- ಸೈರಾ ಬಾನುವಿನಿಂದ ಬಿಲ್​ಗೇಟ್ಸ್​​ವರೆಗೆ ; ದೀರ್ಘಕಾಲದ ದಾಂಪತ್ಯಗಳು ಮುರಿದು ಬೀಳುತ್ತಿರುವುದೇಕೆ?

ಟ್ರೆಂಡ್​ಗಳನ್ನೇ ಫಾಲೋವ್ ಮಾಡುವ ಚಾಳಿಯನ್ನು ಬಿಡಬೇಕು. ಸೆಲೆಬ್ರೆಟಿಗಳು ಹಾಕಿಸಕೊಳ್ಳುವ ಟ್ಯಾಟೂಗಳಿಗೆ ಇಂಪ್ರೆಸ್ ಆಗಬಾರದು. ಮೊದಲು ನಮಗೆ ಅತ್ಯಂತ ಪ್ರಿಯವಾದ ಹತ್ತಿರವಾದ ಟ್ಯಾಟೂನ ಡಿಸೈನ್ ಆಯ್ಕೆ ಮಾಡಬೇಕು. ನಂತರ ಅದರ ಸೈಜ್​, ಆರ್ಟಿಸ್ಟ್​ಗಳ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವಸರ ಬೇಡ. ನಿಮ್ಮದೇ ಆದ ಸಮಯ ತೆಗೆದುಕೊಡು ನಿಮಗೆ ಅತ್ಯಂತ ನಿಕಟವಾಗಿ ಸಂಬಂಧಿಸಿರುವ ಡಿಸೈನ್​ನ್ನು ಆಯ್ಕೆ ಮಾಡಿ. ನಂತರ ಆರ್ಟಿಸ್ಟ್ ಬಳಿ ಸಲಹೆ ಪಡೆದುಕೊಂಡು ಟ್ಯಾಟೂ ಹಾಕಿಸಿಕೊಳ್ಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment