/newsfirstlive-kannada/media/post_attachments/wp-content/uploads/2024/12/Aloe-Vera-and-Amla.jpg)
ಅಲೋವರಾ ಹಾಗೂ ಬೆಟ್ಟದ ನೆಲ್ಲಿಕಾಯಿ ಕೂದಲು ಬೆಳವಣಿಗೆಗೆ ಅಂತಲೇ ಸಾಂಪ್ರದಾಯಿಕ ಔಷಧಿಗಳಾಗಿ ನಮ್ಮೆದುರು ಇರುವ ವಸ್ತುಗಳು. ಸಾಮಾನ್ಯವಾಗಿ ಈ ಎರಡು ಪದಾರ್ಥಗಳು ಹಲವು ರೀತಿಯ ನ್ಯೂಟ್ರಿಷನ್​ಗಳನ್ನು ಹೊಂದಿವೆ. ಈ ಎರಡು ಪದಾರ್ಥಗಳು ಜೊತೆ ಸೇರಿದರೆ ಕೂದಲು ಬೆಳವಣಿಗೆಗೆ ಹಾಗೂ ಕೂದಲ ದಟ್ಟತೆಗೆ ತುಂಬಾ ಸಹಾಯಕಾರಿಯಾಗುತ್ತವೆ. ಈ ಎರಡು ಪದಾರ್ಥಗಳನ್ನು ತಲೆ ಕೂದಲು ಬೆಳವಣಿಗೆಗೆ ಹೇಗೆ ಬಳಸಬೇಕು ಎನ್ನುವುದನ್ನ ನಾವು ಇಲ್ಲಿ ನಿಮಗೆ ಹೇಳುತ್ತೇವೆ. ಅದಕ್ಕೂ ಮೊದಲು ಈ ಎರಡು ಪದಾರ್ಥಗಳ ವಿಶೇಷತೆ ಏನು ಎನ್ನುವುದನ್ನ ನೋಡುತ್ತಾ ಹೋಗೋಣ
ಅಲೋವರೆವನ್ನು ಶತಮಾನಗಳ ಕಾಲದಿಂದಲೂ ಸೌಂದರ್ಯವರ್ಧಕ ಹಾಗೂ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪರಿಹರವಾಗಿಯೇ ಉಪಯೋಗಿಸುತ್ತಾರೆ. ಅದರಲ್ಲೂ ಕೂದಲು ಬೆಳವಣಿಗೆಗೆ ವಿಚಾರದಲ್ಲಿ ಅಲೋವೆರಾವನ್ನು ಹೆಚ್ಚು ಉಪಯುಕ್ತ ಎನ್ನುತ್ತಾರೆ. ಕಾರಣ ಅಲೋವೆರಾದಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್​ಗಳು ಹೇರಳವಾಗಿ ಸಿಗುತ್ತವೆ ವಿಟಮಿನ್ ಎ,ಸಿ,ಇ ಯಂತಹ ಅಪರೂಪದ ವಿಟಮಿನ್​ಗಳು ಇವೆ. ಈ ವಿಟಮಿನ್​ಗಳು ತಲೆಗೂದಲು ವೃದ್ಧಿಗೆ ಸಹಾಯಕವಾಗಿ ನಿಲ್ಲುತ್ತವೆ.
/newsfirstlive-kannada/media/post_attachments/wp-content/uploads/2024/12/Aloe-Vera-and-Amla-2.jpg)
ಇನ್ನು ಅಲೋವೆರಾ ಉರಿಯೂತ ನಿರೋಧಕ ಶಕ್ತಿಯನ್ನು ಹೊಂದಿದೆ. ಹೀಗಾಗಿ ಇದು ತಲೆಹೊಟ್ಟಿನಂತಹ ಸಮಸ್ಯೆಗಳನ್ನು ಬಹುಬೇಗ ದೂರ ಮಾಡಿ ಕೂದಲು ಬೆಳೆಯಲು ಸಹಾಯಕವಾಗಿ ನಿಲ್ಲುತ್ತದೆ. ಅದು ಅಲ್ಲದೇ ತಲೆಗೂದಲನ್ನು ಇದು ಒಣಗಲು ಬಿಡದೆ ತೇವಾಂಶವನ್ನು ಕಾಯ್ದುಕೊಳ್ಳುವ ಮೂಲಕ ಕೂದಲು ಸೀಳುವಿಕೆ, ಒಣಗುವಿಕೆಯಿಂದ ಕಾಪಾಡುತ್ತದೆ.
/newsfirstlive-kannada/media/post_attachments/wp-content/uploads/2024/12/Aloe-Vera-and-Amla-1.jpg)
ಇನ್ನು ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ಸ್​ ಹೇರಳವಾಗಿ ಸಿಗುತ್ತವೆ. ಇದು ದಟ್ಟವಾದ ಕೂದಲು ಬೆಳವಣಿಗೆಗೆ ಭದ್ರ ಬುನಾದಿಯನ್ನು ಹಾಕುತ್ತದೆ. ಬೆಟ್ಟದ ನೆಲ್ಲಿಕಾಯಿಯನ್ನ ವಿಟಮಿನ್ ಸಿ ಪವರ್​ಹೌಸ್ ಎಂದೇ ಕರೆಯಲಾಗುತ್ತದೆ. ಇದು ಹೊಸ ಕೂದಲು ಬೆಳೆಯುವಿಕೆಗೆ ಮತ್ತು ಆರೋಗ್ಯಕರ ಕೂದಲು ನಿರ್ವಹಣೆಗೆ ತುಂಬಾ ಅನುಕೂಲ. ಇದನ್ನು ನಿತ್ಯವೂ ಬಳಸುವುದರಿಂದ ದಟ್ಟ ಹಾಗೂ ಆರೋಗ್ಯಯುತವಾದ ಕೂದಲು ನಿಮ್ಮದಾಗುತ್ತದೆ.
ಇನ್ನು ಈ ಎರಡನ್ನೂ ಹೇಗೆ ಬಳಸುವುದು ?
ಬೆಟ್ಟದ ನೆಲ್ಲಿಕಾಯಿಯ ಪುಡಿಯನ್ನು ಸಿದ್ಧವಾಗಿಸಿಕೊಂಡು ಇಟ್ಟುಕೊಳ್ಳಬೇಕು. ನೀರು ಇಲ್ಲವೇ ತೆಂಗಿನಕಾಯಿ ನೀರು ನಿಮ್ಮ ಬಳಿ ಇರಬೇಕು. ಅಲೋವೆರಾದ ಮೇಲ್ಭಾಗವನ್ನು ಕತ್ತರಿಸಿ ಅದರೊಳಗಿನ ಅಲೋವೆರಾ ಜೆಲ್​ನ್ನು ಒಂದು ಬಟ್ಟಲಿಗೆ ತೆಗೆದುಕೊಳ್ಳಿ. ಒಂದು ಸ್ಪೂನ್​ ಅಲೋವೆರಾ ಜೆಲ್​ನಲ್ಲಿ ಒಂದು ಟೆಬಲ್ ಸ್ಪೂನ್​ ನೆಲ್ಲಿಕಾಯಿ ಪುಡಿಯನ್ನು ಬೆರೆಸಿಕೊಳ್ಳಿ. ಒಂದು ವೇಳೆ ನೀವು ತಾಜಾ ನೆಲ್ಲಿಕಾಯಿಯನ್ನು ಬಳಸುತ್ತಿದ್ದರೆ. ಅದನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ಒಂದು ಟೇಬಲ್ ಸ್ಪೂನ್​ ಅಲೋವೆರಾದಲ್ಲಿ ಬೆರಸಿ ಅದಕ್ಕೆ ಒಂದು ಕಾಲು ಇಲ್ಲವೇ ಒಂದು ಅರ್ಧ ಟೇಬಲ್ ಸ್ಪೂನ್ ನೀರು ಇಲ್ಲವೇ ತೆಂಗಿನಕಾಯಿ ನೀರನ್ನು ಅಲೋವೆರಾ ಮತ್ತು ನೆಲ್ಲಿಕಾಯಿ ಮಿಕ್ಸ್ ಮಾಡಿರುವ ಬಟ್ಟಲದಲ್ಲಿ ಹಾಕಿ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಮಿಕ್ಸ್ ಆದ ಕೆಲವೇ ನಿಮಿಷಗಳಲ್ಲಿ ನೀವು ಈ ಮಿಕ್ಸ್​ನ್ನು ಕುಡಿಯಬೇಕು. ಇದರಿಂದ ಸಾಕಷ್ಟು ನ್ಯೂಟ್ರಿಷನ್​ಗಳು ನಿಮ್ಮ ದೇಹ ಸೇರುತ್ತವೆ.ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಡಯುವುದರಿಂದ ನಿಮ್ಮ ಕೂದಲು ಬೆಳವಣಿಗೆ ಅದ್ಭುತವಾಗಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us