/newsfirstlive-kannada/media/post_attachments/wp-content/uploads/2025/02/Stubborn-Child.jpg)
ಮಕ್ಕಳು ಅಂದ್ರೆ ಹಠಕ್ಕೆ ಇನ್ನೊಂದು ಹೆಸರು. ಅವರಿಗೆ ಬೇಕಾಗಿದ್ದು ಸಿಗದೇ ಇದ್ದಲ್ಲಿ, ಅವರು ಬೇಡಿದ್ದು ಕೊಡಿಸದೇ ಇದ್ದಲ್ಲಿ ಮಕ್ಕಳು ಹಠಕ್ಕೆ ಬೀಳುತ್ತಾರೆ. ಅದು ಒಂದು ಹಂತದಲ್ಲಿ ಇದ್ದರೆ ಒಕೆ. ಒಂದು ವೇಳೆ ಅತೀಯಾದ ಹಠಮಾರಿತನ ಮಕ್ಕಳ ಗುಣವಾಗಿ ಬೆಳೆದು ಬಿಟ್ಟರೆ ಅವರನ್ನು ಸಂಬಾಳಿಸಲು ತಂದೆ ತಾಯಿಗಳು ಪರದಾಡಬೇಕಾಗುತ್ತದೆ. ಅವರನ್ನು ಸಮಾಧಾನಿಸುವುದು ಹೇಗೆ ಎಂಬುದು ತಿಳಿದಯೇ ಒದ್ದಾಡುತ್ತಾರೆ. ಅಂತಹ ಪೋಷಕರು ತಮ್ಮ ಮಕ್ಕಳ ಹಠಮಾರಿತನವನ್ನು ಕಡಿಮೆ ಮಾಡುವುದು ಹೇಗೆ ಎಂದು ಚಿಂತಿಸುವವರಿಗೆ ಕೆಲವು ಸರಳ ಉಪಾಯಗಳಿವೆ.
ನಿಮ್ಮ ಮಗು ಎಲ್ಲ ವಿಚಾರದಲ್ಲಿ ಹಠ ಮಾಡುತ್ತಿದೆ ಅಂದ್ರೆ ಉದಾಹರಣೆಗೆ ಊಟ ಮಾಡಲು, ಆಟ ಆಡಲು, ಓದಲು ಬರೆಯಲು ಹೀಗೆ ಎಲ್ಲದಕ್ಕೂ ಹಠ ಮಾಡುತ್ತಿದ್ದರೆ ಮೊದಲು ಆ ಮಗುವನ್ನು ಮಾತನಾಡಲು ಬಿಡಿ. ನೀವು ಶಾಂತವಾಗಿ ಕೊಂಚವೂ ಅವರನ್ನು ಗದರದೇ ಅವರ ಸಂಪೂರ್ಣ ಮಾತು ಕೇಳಿಸಿಕೊಳ್ಳಿ. ಅವರ ಮಾತು ಸಂಪೂರ್ಣವಾಗಿ ಸಾವಧಾನವಾಗಿ ಕೇಳಿಸಿಕೊಂಡ ನಂತರ. ಅವರ ತಲೆ ಸವರಿ, ಒಂದು ಮುತ್ತಿಟ್ಟು ಪ್ರೀತಿಯಿಂದ ತಿಳಿಸಿ ಹೇಳಿ. ಮಗು ಹೀಗೆ ಮಾಡಿದರೆ ಅದು ತಪ್ಪು. ಹೀಗೆಲ್ಲಾ ಮಾಡಬಾರದು. ಇದು ನಿನ್ನನ್ನು ಮುಂದೆ ಬೇರೆ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ ಎಂದು ಪ್ರೀತಿಯಿಂದ ಹೇಳಿ. ಪ್ರೀತಿಯಿಂದ ಹೇಳಿದರೆ ಯಾವ ಮಕ್ಕಳಾದರೂ ಕೇಳುತ್ತವೆ.
/newsfirstlive-kannada/media/post_attachments/wp-content/uploads/2025/02/Stubborn-Child-3.jpg)
ಮಕ್ಕಳನ್ನು ಯಾವುದೇ ವಿಚಾರದಲ್ಲಾಗಲಿ, ಯಾವುದೇ ವಿಷಯದಲ್ಲಿದಲ್ಲಾಗಲಿ ಒತ್ತಾಯ ಮಾಡಬೇಡಿ. ಅವರಿಗೆ ಒತ್ತಡ ಎನಿಸುವಂತೆ ಮಾಡಬೇಡಿ. ನಾನು ಓದುವುದಿಲ್ಲ ಅಂದಾಗ ಆಯ್ತು. ಒಂದರ್ಧ ಗಂಟೆ ಆಟವಾಡು ಇಲ್ಲವೇ ಟಿವಿ ನೋಡು ಆಮೇಲೆ ನೀ ಮಾಡಬೇಕಾದ ಹೋಮ್​ವರ್ಕ್​ನ್ನು ಮಾಡಿ ಮುಗಿಸು ಎಂದು ಸಮಾಧಾನದಿಂದ ತಿಳಿಸಿ ಹೇಳಿ. ಮಕ್ಕಳನ್ನು ನಮ್ಮೊಂದಿಗೆ ಭಾವನಾತ್ಮಕವಾಗಿ ಬೆಸೆಯುವಂತ ಕಾರ್ಯಗಳು ನಡೆಯಬೇಕು ಇಲ್ಲದಿದ್ರೆ ಅವರ ಹಠ ಎಲ್ಲ ಸೀಮೆಯನ್ನು ದಾಟಿ ಹೋಗುವ ಸಾಧ್ಯತೆ ಇರುತ್ತದೆ.
/newsfirstlive-kannada/media/post_attachments/wp-content/uploads/2025/02/Stubborn-Child-2.jpg)
ಹೀಗೆ ಅಂದುಕೊಳ್ಳಿ ನಿಮ್ಮ ಮಗು ಟಿವಿ ನೋಡಲು ಹಠ ಮಾಡುತ್ತದೆ ಎಂದು ಆವಾಗ ಅದನ್ನು ಗದರಿಸಿ ಬೆದರಿಸಿ ನೋಡಬೇಡ ಎಂದು ಹೇಳಬೇಡಿ. ಅದರ ಜೊತೆ ಕುಳಿತು ಮಾತನಾಡಲು ಪ್ರಯತ್ನಿಸಿ. ಬೇರೆ ವಿಷಯಗಳ ಬಗ್ಗೆ, ಹೊಸ ವಿಷಯಗಳ ಬಗ್ಗೆ ಹೇಳಿ. ಅವರಿಗೆ ಅದರ ಮೇಲೆ ಕುತೂಹಲ ಮೂಡುವಂತೆ ಮಾಡಿ. ಟಿವಿ ನೋಡುವ ಬದಲು ಸೈಕಲ್ ಹೊಡೆಯುವುದನ್ನು ರೂಢಿ ಮಾಡಿಕೋ ಇದು ನಿನ್ನನ್ನು ಸ್ಟ್ರಾಂಗ್ ಮಾಡುತ್ತದೆ. ಬಾ ಟಿವಿಗಿಂತ ನಾನು ನಿನಗೊಂದು ಕಥೆ ಹೇಳುತ್ತೇನೆ ಅದು ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಎಂದು ಅವರ ಧ್ಯಾನವನ್ನು ಬೇರೆಯ ಕಡೆಗೆ ತಿರುಗಿಸಿ. ನಿಮ್ಮ ಜೊತೆಯೇ ಸೇರಿ ಅವರು ತಮ್ಮ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವಂತೆ ಅವಕಾಶ ಮಾಡಿಕೊಡಿ. ಆಗ ಅವರು ನಿಮಗೆ ಹೆಚ್ಚು ಅಂಟಿಕೊಳ್ಳುತ್ತಾರೆ.
ಇದನ್ನೂ ಓದಿ:Valentine’s Day: ಒಂದೇ ಒಂದು ಅಪ್ಪುಗೆ, ದೇಹಕ್ಕೆ ಅದ್ಭುತ ಲಾಭ.. ಪ್ರೇಮಿಗಳೇ ನಿಮಗೆ ಈ 5 ಶಕ್ತಿ ಗೊತ್ತಿರಲಿ..!
ಮಕ್ಕಳಿಗೆ ಆದೇಶಗಳನ್ನು ನೀಡುವುದು ಕಡಿಮೆ ಮಾಡಿ. ಅವರ ಇಷ್ಟವೇನು ಎಂಬುದನ್ನು ಮೊದಲು ಅರಿಯಿರಿ. ಇದರಿಂದ ಅವರ ಆಸೆಯೇನು ಅವರ ಆಸಕ್ತಿ ಯಾವುದರ ಮೇಲೆ ಇದೆ ಎಂಬುದನ್ನು ನಿಮಗೆ ಅರಿವಾಗಲು ಸಹಾಯಕವಾಗುತ್ತದೆ. ಮಕ್ಕಳ ಮನಸ್ಸಿನಲ್ಲಿಯೇ ಒಂದಿರುವುದು ನೀವು ಅವರಿಗೆ ಇನ್ನೇನೋ ಮಾಡಲು ಹೇಳುವುದು ಆದಾಗ ಮಕ್ಕಳು ಮೊಂಡುತನಕ್ಕೆ ಬೀಳುತ್ತವೆ.
ಇದನ್ನೂ ಓದಿ:Please ಯಾವತ್ತೂ ಈ ತಪ್ಪು ಮಾಡಬೇಡಿ.. ಹುಡುಗಿಯರಿಗೆ ಗೊತ್ತಿರಲಿ ಈ ಮುಖ್ಯವಾದ ವಿಚಾರ..!
ಮಕ್ಕಳಿಗೆ ಆಗಾಗ ಆಶ್ವಾಸನೆಯನ್ನು ಕೊಡಿ. ನೋಡು ನೀ ಈ ಬಾರಿ ಇದನ್ನು ಮಾಡಿದರೆ ನಿನಗೆ ನಾನು ಇಂತಹ ಆಟಿಗೆಯನ್ನೋ, ಇಲ್ಲವೇ ಗಿಫ್ಟ್​ನ್ನೋ ಕೊಡುವುದಾಗಿ ಹೇಳಿ. ಅವರ ಸಣ್ಣ ಸಣ್ಣ ಸಾಧನೆಗಳನ್ನು ಗುರುತಿಸಿ ಭೇಷ್ ಎನ್ನಿ. ಕಡಿಮೆ ಅಂಕ ತಂದಾಗ ಗದರದೇ, ಪರವಾಗಿಲ್ಲ ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಮಾರ್ಕ್ಸ್​ ತೆಗಿ. ಈ ಬಾರಿ ಆಗದಂತೆ ನೋಡಿಕೊ ಎಂದು ತಿಳಿಸಿ ಹೇಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us