newsfirstkannada.com

ನಿಮ್ಮ ಸ್ಮಾರ್ಟ್​ಫೋನ್​ ಕಳೆದುಹೋದರೆ ಟೆನ್ಶನ್​ ಬೇಡ.. ಕಳ್ಳ ಯಾವ ಸಂದಿಯಲ್ಲಿದ್ದರೂ ಹೀಗೆ ಪತ್ತೆಹಚ್ಚಬಹುದು ನೋಡಿ

Share :

Published April 3, 2024 at 2:26pm

Update April 3, 2024 at 2:30pm

    ಕಳ್ಳ ನಿಮ್ಮ ಸ್ಮಾರ್ಟ್​ಫೋನ್​ ಕದ್ದರೆ ಮೊದಲಿಗೆ ಹೀಗೆ ಮಾಡಿ

    ಕಳೆದು ಹೋದ ಸ್ಮಾರ್ಟ್​ಫೋನ್​ ಹುಡುಕಾಡಲು ಈ ಉಪಾಯ ಟ್ರೈ ಮಾಡಿ

    ದುಬಾರಿ ಸ್ಮಾರ್ಟ್​ಫೋನ್​ ಹೊಂದಿರುವವರು ಈ ಸೆಟ್ಟಿಂಗ್​ ಆನ್​ನಲ್ಲಿರಿಸಿ

ಕಳೆದುಕೊಂಡಿದ್ದನ್ನು ಪಡೆದುಕೊಳ್ಳೋದು ತುಂಬಾನೆ ಕಷ್ಟ. ಅದರಲ್ಲೂ ವರ್ಷ ಪೂರ್ತಿ ದುಡಿದು ಅದರಲ್ಲಿ ಬಂದ ಹಣದಲ್ಲಿ ತೆಗೆದುಕೊಂಡ ದುಬಾರಿ ಸ್ಮಾರ್ಟ್​ಫೋನ್​ ಕಳೆದುಕೊಂಡರೆ ಏನು ಮಾಡೋದು?. ಬಹುತೇಕರು ಇಂತಹ ಘಟನೆ ಎದುರಾದಾಗ ತಲೆಕೆಳಗಾಗುತ್ತಾರೆ. ಆದರೆ ಎಲ್ಲದಕ್ಕೂ ಪರಿಹಾರವಿದೆ ಎಂಬಂತೆ ಕಳೆದುಕೊಂಡ ಫೋನ್​ ಹುಡುಕಲು ಒಂದು ದಾರಿ ಇದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರಲ್ಲಿನ ಕಳ್ಳರ ಹಾವಳಿಗೇನು ಏನು ಕಡಿಮೆ ಇಲ್ಲ. ಸ್ಮಾರ್ಟ್​ಫೋನ್​ ಎಗರಿಸಿಕೊಂಡು ಹೋಗುವ ಅನೇಕ ಪ್ರಕರಣಗಳು ರಾಜ್ಯ ರಾಜಧಾನಿಯಲ್ಲಿ ಬೆಳಕಿಗೆ ಬರುತ್ತಿರುತ್ತವೆ. ಒಂದು ವೇಳೆ ನಿಮಗೂ ಈ ಅನುಭವ ಆಗಿದ್ದರೆ ಟೆನ್ಶನ್​ ಮಾಡಬೇಡಿ. ಕಳ್ಳ ಯಾವ ಸಂದಿಯಲ್ಲಿ ಅಡಗಿದ್ದರೂ ಹೀಗೆ ಹುಡುಕಾಡಬಹುದು ನೋಡಿ.

ಮೊಬೈಲ್​ ಕಳ್ಳತನವಾದರೆ ಮೊದಲಿಗೆ ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿ. ಅದಕ್ಕೂ ಮುನ್ನ ಸ್ಮಾರ್ಟ್​ಫೋನ್​ ಪ್ರಿಯರು ಈ ಸೆಟ್ಟಿಂಗ್​ ಅನ್ನು ಆನ್​ನಲ್ಲಿಡಲು ಮರೆಯದಿರಿ.

ಸ್ಯಾಮ್​ಸಂಗ್​ ಸ್ಮಾರ್ಟ್​ಫೊನ್​ ಬಳಕೆದಾರರ ಗಮನಕ್ಕೆ..

1. ಸ್ಮಾರ್ಟ್​ಫೊನ್​ನಲ್ಲಿ Settings ​ ತೆರೆಯಿರಿ> ಬಳಿಕ Security & privacy ತೆರೆಯಿರಿ > ನಂತರ Device Find My Mobileಮೇಲೆ ಕ್ಲಿಕ್​ ಮಾಡಿ > ನಂತರ > Allow this phone to be found ತೆರೆಯಿರಿ

2. ಬಳಿಕ Tap ಮಾಡಿ ಸ್ವಿಚ್​ ಆನ್​ ಮಾಡಬೇಕು

ಗೂಗಲ್​ ಫಿಕ್ಸೆಲ್​ ಬಳಕೆದಾರರ ಗಮನಕ್ಕೆ..

1. ಮೊದಲಿಗೆ Settings ತೆರೆಯಿರಿ > ನಂತರ Security & privacy ಮೇಲೆ ಕ್ಲಿಕ್​ ಮಾಡಿ > ಬಳಿಕ Device finders ಆಯ್ಕೆ ಮಾಡಿ > ನಂತರ Find my Device ಕ್ಲಿಕ್​ ಮಾಡಿ.

2. Tap ಮಾಡುವ ಮೂಲಕ ಸ್ವಿಚ್​ ಆನ್​ ಮಾಡಿ.

ಗೂಗಲ್​ ಮ್ಯಾಪ್​ ಮೂಲಕ ಲೊಕೇಶನ್​ ಟ್ರಾಕ್​ ಮಾಡಿ ಕಂಡುಹಿಡಿಯಬಹುದು

1. ಮೊದಲಿಗೆ http://android.com/find ತೆರೆಯಿರಿ

2. ಬಳಿಕ Gmail™ ಖಾತೆ ಮೂಲಕ ಪಾಸ್​ವರ್ಡ್​ ನಮೂದಿಸಿ ಸೈನ್​ ಇನ್​ ಮಾಡಿ.

3. ಈವಾಗ ಮ್ಯಾಪ್​ನಲ್ಲಿ ಮೊಬೈಲ್​ ಸ್ಥಳ, ಕೊನೆಯ ಟವರ್​ ಲೊಕೇಶನ್​ ಸಿಗುತ್ತದೆ. (ಇಂಟರ್​ನೆಟ್​ ಆನ್​ನಲ್ಲಿ ಇದ್ದರೆ ಮಾತ್ರ ಸಿಗುತ್ತದೆ)

ಆ್ಯಂಡ್ರಾಯ್ಡ್​ ಬಳಕೆದಾರರು ಮ್ಯಾಪ್​ ಮೂಲಕ ಸ್ಮಾರ್ಟ್​ಫೋನ್​ ಹುಡುಕಲು ಪ್ರಯತ್ನಿಸಿದಾಗ ಮೂರು ಆಯ್ಕೆಗಳು ಸಿಗುತ್ತದೆ. ಅದರಲ್ಲಿ 1.ಧ್ವನಿಯನ್ನು ಪ್ಲೇ ಮಾಡಬಹುದು 2. ಸಂದೇಶ ಅಥವಾ ಪಿನ್​, ನಂಬರ್​ ಕಳುಹಿಸಬಹುದು 3. ವೈಯಕ್ತಿಕ ಮಾಹಿತಿ ಅಳಿಸಬಹುದು.

ಬ್ಲೂಟೂತ್​ ಮೂಲಕ ಹುಡುಕಾಡಿ

ನಿಮ್ಮ ಬ್ಲೂಟೂತ್ ಡಿವೈಸ್​ ಮೂಲಕವು ಕಳೆದು ಹೋದ ಸ್ಮಾರ್ಟ್​ಫೊನ್​ ಹುಡುಕಾಡಬಹುದಾಗಿದೆ. ಆದರೆ ಸ್ಮಾರ್ಟ್​ಫೊನ್​ನಲ್ಲಿ ಬ್ಲೂಟೂತ್​ ಆಯ್ಕೆ ಆನ್​ ಇದ್ದರೆ ಮಾತ್ರ ಇದು ಕಾರ್ಯ ನಿರ್ವಹಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮ್ಮ ಸ್ಮಾರ್ಟ್​ಫೋನ್​ ಕಳೆದುಹೋದರೆ ಟೆನ್ಶನ್​ ಬೇಡ.. ಕಳ್ಳ ಯಾವ ಸಂದಿಯಲ್ಲಿದ್ದರೂ ಹೀಗೆ ಪತ್ತೆಹಚ್ಚಬಹುದು ನೋಡಿ

https://newsfirstlive.com/wp-content/uploads/2024/04/Smart-Phone.jpg

Load More